Advertisement

‘ಪ್ಲಾಸ್ಟಿಕ್‌ ರಾಷ್ಟ್ರಧ್ವಜ ಬಳಸದಂತೆ ಕ್ರಮ ಕೈಗೊಳ್ಳಿ

01:01 PM Aug 09, 2018 | |

ಸುಳ್ಯ : ಪ್ಲಾಸ್ಟಿಕ್‌ನಿಂದ ತಯಾರಿಸುವ ರಾಷ್ಟ್ರಧ್ವಜ ಬಳಕೆ ಕಾನೂನು ಬಾಹಿರವಾಗಿದ್ದು, ಅದರ ಉತ್ಪಾದನೆ, ಮಾರಾಟ ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸುಳ್ಯ ಸಮಿತಿ ತಹಶೀಲ್ದಾರ್‌ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದೆ. ರಾಷ್ಟ್ರ ಧ್ವಜಕ್ಕೆ ಗೌರವ ಇದೆ. ಪ್ಲಾಸ್ಟಿಕ್‌ ನಿಂದ ತಯಾರಿಸಿದ ರಾಷ್ಟ್ರ ಧ್ವಜಗಳು ಆಚರಣೆ ಮುಗಿದ ಬಳಿಕ ಎಲ್ಲೆಂದರೆಲ್ಲೆ ಎಸೆದು ಅವಮಾನಿಸುವ ಪ್ರಕರಣಗಳು ಕಂಡು ಬರುತ್ತಿವೆ. ಹಾಗಾಗಿ ಪ್ಲಾಸ್ಟಿಕ್‌ ರಾಷ್ಟ್ರಧ್ವಜ ಬಳಕೆ ಬಗ್ಗೆ ನಿಯಂತ್ರಣ ಅಗತ್ಯ ಎಂದು ಮನವಿಯಲ್ಲಿ ತಿಳಿಸಲಾಗಿದೆ.

Advertisement

ಹಿಂದೂ ಜನಜಾಗೃತಿ ವತಿಯಿಂದ ಮುಂಬೈ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ದಾವೆ ಹೂಡಿದ ಪರಿಣಾಮ, ನ್ಯಾಯಾಲಯವು ರಾಷ್ಟ್ರಧ್ವಜದ ಅಗೌರವನ್ನು ತಡೆಗಟ್ಟಲು ಸರಕಾರಕ್ಕೆ ಆದೇಶಕೊಟ್ಟಿತು. ಕೇಂದ್ರೀಯ ಮತ್ತು ರಾಜ್ಯದ ಗೃಹ ವಿಭಾಗ ಮತ್ತು ಶಿಕ್ಷಣ ವಿಭಾಗದ ಮೂಲಕ ಈ ಸುತ್ತೋಲೆ ಹೊರಡಿಸಲಾಗಿದೆ. ಇದರ ಪ್ರಕಾರ ಪ್ಲಾಸ್ಟಿಕ್‌ನ ರಾಷ್ಟ್ರಧ್ವಜವನ್ನು ಮಾರಾಟ ಮಾಡುವುದು ಕಾನೂನು ಬಾಹಿರವಾಗಿದೆ. ಪ್ಲಾಸ್ಟಿಕ್‌ ರಾಷ್ಟ್ರಧ್ವಜದ ಉತ್ಪಾದನೆ ಮತ್ತು ಮಾರಾಟ ಮಾಡುತ್ತಿದ್ದಲ್ಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಆರಕ್ಷಕ ವೃತ್ತ ನಿರೀಕ್ಷಕರಿಗೆ ಮನವಿ ಸಲ್ಲಿಸಲಾಯಿತು.

ಹಿಂದೂ ಜನಜಾಗೃತಿ ಸಮಿತಿ ಹಿಮಕರ ಗೌಡ, ರಾಮ ಭಟ್‌, ನಂದಕುಮಾರ್‌, ನಿರ್ಮಲಾ, ಧನಂಜಯ, ಅಮರ ಮುಟ್ನೂರು ಗ್ರಾಮ ಪಂಚಾಯತ್‌ ಸದಸ್ಯ ಭಾನುಪ್ರಕಾಶ್‌ ಪೆಲ್ತಡ್ಕ ಹಾಗೂ ವಸಂತ ಬೀರಮಂಗಲ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next