Advertisement
ಡಿ.3ಕ್ಕೆ ಬಂದು ಚರ್ಚಿಸಿ: ಕಾಂಗ್ರೆಸ್‌ಗೆ ಚುನಾವಣ ಆಯೋಗದಿಂದ ಆಹ್ವಾನಹೊಸದಿಲ್ಲಿ: ಮಹಾರಾಷ್ಟ್ರ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್‌ನ ಆರೋಪಗಳಿಗೆ ಚುನಾವಣ ಆಯೋಗ ಸ್ಪಂದಿಸಿದೆ. ಡಿ.3ರಂದು ಪಕ್ಷದ ನಾಯಕರ ನಿಯೋಗವನ್ನು ಸಮಾಲೋಚನೆಗಾಗಿ ಆಹ್ವಾನಿಸಿದೆ. ಆಗ ಶೇಕಡಾವಾರು ಮತದಾನದಲ್ಲಿ ಹೆಚ್ಚಳ ಸೇರಿದಂತೆ ಪ್ರಮುಖ ಅಂಶಗಳು, ವಿಪಕ್ಷಗಳ ಕಳವಳ ಕುರಿತು ಚರ್ಚಿಸೋಣ ಎಂದಿದೆ. ಇದೇ ವೇಳೆ, ಅಭ್ಯರ್ಥಿಗಳು ಮತ್ತು ಬೂತ್‌ಗಳಲ್ಲಿ ಅವರ ಏಜೆಂಟರ ಜತೆಗೆ ಮತದಾನ ಮತ್ತು ಎಣಿಕೆಯ ಸಂದರ್ಭದಲ್ಲಿ ಪಾರದರ್ಶಕ ವ್ಯವಸ್ಥೆ ಅನುಸರಿಸಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಲೋಪ ಉಂಟಾಗಿಲ್ಲ. 5 ಗಂಟೆ ವೇಳೆಗೆ ನೀಡುವ ಮತದಾನದ ಪ್ರಮಾಣ ಮತ್ತು ಅಂತಿಮವಾಗಿ ನೀಡುವ ಪ್ರಮಾಣದಲ್ಲಿ ವ್ಯತ್ಯಾಸಗಳು ಕಂಡು ಬರುವುದು ಸಹಜ ಎಂದೂ ಆಯೋಗ ತಿಳಿಸಿದೆ.