Advertisement

Save water call !;ಸಂಗಾತಿ ಜತೆ ಸ್ನಾನ ಮಾಡಿ ನೀರು ಉಳಿಸಿ: ಮೇಯರ್‌!

01:16 AM Apr 14, 2024 | Team Udayavani |

ಬೊಗೋಟಾ: ಐಟಿ ಸಿಟಿ ಬೆಂಗಳೂರು ಮಾತ್ರವಲ್ಲ ಪ್ರಪಂಚದ ವಿವಿಧೆಡೆ ನಗರಗಳು ತೀವ್ರ ನೀರಿನ ಕೊರತೆ ಎದುರಿಸುತ್ತಿವೆ. ದಕ್ಷಿಣ ಅಮೆರಿಕದ ಕೊಲಂಬಿಯಾದ ಬೊಗೋಟಾ ನಗರವಂತೂ ಗಂಭೀರ ಸ್ಥಿತಿಯಲ್ಲಿದೆ. ಹಾಗಾಗಿ ನೀರು ಮಿತವ್ಯಯಕ್ಕೆ ಅಲ್ಲಿನ ಮೇಯರ್‌, ಜನ ರಿಗೆ ವಿಚಿತ್ರ ಕರೆ ನೀಡಿದ್ದಾರೆ. “ಜನರು ಜೋಡಿಯಾಗಿ(ಸಂಗಾತಿ ಜತೆ) ಸ್ನಾನ ಮಾಡಬೇಕು’ ಎಂದು ಹೇಳಿದ್ದಾರೆ.

Advertisement

ಇತ್ತೀಚೆಗೆ ನಗರದ ಪ್ರಮುಖ ಪ್ರದೇಶಗಳಲ್ಲಿ ನೀರು ಪೂರೈಕೆಯನ್ನು ತಡೆಯಲಾಗಿದೆ. ಈ ಹಿನ್ನೆಲೆಯಲ್ಲಿ ಬೊಗೋಟಾ ಮೇಯರ್‌ ಕಾರ್ಲೋಸ್‌ ಫ‌ರ್ನಾಂಡೊ ಗ್ಯಾಲನ್‌ ಅವರು, “ಜೋಡಿಯಾಗಿ ಸ್ನಾನ ಮಾಡುವುದು ನೀರು ಮಿತವ್ಯಯ ಬಳಕೆಯ ಅಭ್ಯಾಸ ಎಂದು ಭಾವಿಸಿಕೊಳ್ಳಬೇಕು. ಈ ರೀತಿಯಾಗಿ ಮಾಡುವುದರಿಂದ ಸಾಕಷ್ಟು ಸಹಾಯವಾಗಲಿದೆ’ ಎಂದು ಅವರು ಹೇಳಿದ್ದಾರೆ.

ಜೋಡಿಯಾಗಿ ಸ್ನಾನ ಮಾಡಿ ಎಂದ ಕರೆ ನೀಡಿರುವ ಮೇಯರ್‌, ಒಂದೊಮ್ಮೆ ಮನೆಯಲ್ಲೇ ಇರುವುದಾದರೆ ಸ್ನಾನ ವನ್ನೇ ಮಾಡಬೇಡಿ ಎಂದೂ ಜನರಿಗೆ ಹೇಳಿದ್ದಾರೆ. “ರವಿವಾರ ಅಥವಾ ವಾರದ ಇನ್ನಾವುದೇ ನೀವು ಹೊರಗಡೆ ಎಲ್ಲಿಗೂ ಹೋಗುವುದಿಲ್ಲ ಎಂದಾದರೆ ದಯವಿಟ್ಟು ಸ್ನಾನ ಮಾಡಬೇಡಿ’ ಎಂದು ಅವರು ಕರೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next