Advertisement

Agra: ಆಗ್ರಾದಲ್ಲಿ ತಲೆ ಎತ್ತಿದೆ ತಾಜ್‌ ಮಹಲ್‌ ಪ್ರತಿಸ್ಪರ್ಧಿ

12:54 PM May 18, 2024 | Suhan S |

ಹೊಸದಿಲ್ಲಿ: ಆಗ್ರಾ ಎನ್ನುತ್ತಿದ್ದಂತೆ ನೆನಪಾಗುವುದು ಅಮೃತಶಿಲೆಯಲ್ಲಿ ನಿರ್ಮಾಣವಾಗಿರುವ ಭವ್ಯ ತಾಜ್‌ ಮಹಲ್‌! ಆದರೀಗ ಆಗ್ರಾದ ಮತ್ತೂಂದು ಭವ್ಯ ನಿರ್ಮಾಣವಾದ ಸೌಮಿ ಭಾಗ್‌ ಸಮಾಧ್‌ ಪ್ರವಾಸಿಗರ ಚಿತ್ತ ಸೆಳೆಯುತ್ತಿದ್ದು, 104 ವರ್ಷಗಳ ಸುದೀರ್ಘ‌ ಸಮಯದ ಈ ನಿರ್ಮಾಣವು ತಾಜ್‌ ಮಹಲ್‌ಗೆ ಪ್ರತಿಸ್ಪರ್ಧಿ ಎನ್ನುವಂಥ ಪ್ರಶಂಸೆಗೂ ಪಾತ್ರವಾಗುತ್ತಿದೆ.

Advertisement

ರಾಧಾ ಸೋಮಿ ಆಧ್ಯಾತ್ಮ ಪಂಥದ ಸೃಷ್ಟಿಕರ್ತರಾದ ಶಿವ್‌ ದಯಾಳ್‌ ಸಿಂಗ್‌ ಸಮಾಧಿಯನ್ನು ತಾಜ್‌ ಮಹಲ್‌ನಿಂದ ಕೇವಲ 12 ಕಿ.ಮೀ.ದೂರದಲ್ಲಿರುವ ಸೌಮಿ ಭಾಗ್‌ ಎಂಬಲ್ಲಿ ನಿರ್ಮಿಸಲಾ ಗಿದೆ. 1922ರಲ್ಲಿ ಈ ಸಮಾಧಿಯ ನಿರ್ಮಾಣ ಕಾರ್ಯ ಆರಂಭ ಗೊಂಡಿ ದ್ದು, 104 ವರ್ಷಗಳ ಬಳಿಕ ನಿರ್ಮಾಣ ಪೂರ್ಣಗೊಂಡಿದೆ. 52 ಬಾವಿಗಳ ಅಡಿಪಾಯ ಮೇಲಿನ 193 ಅಡಿ ಎತ್ತ ರದ ಈ ನಿರ್ಮಾಣವು ಸಂಪೂರ್ಣ ಅಮೃತ ಶಿಲೆಯಿಂದಾಗಿದ್ದು, 31.4 ಅಡಿ ಎತ್ತರದ ಚಿನ್ನ ಲೇಪಿತ ಗುಮ್ಮಟ ಹೊಂದಿದೆ. ಇದು ತಾಜ್‌ ಮಹಲ್‌ಗಿಂತಲೂ ಎತ್ತರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next