Advertisement

ತಾಜ್‌ಮಹಲ್‌ ಮೇಲೂ ಐಸಿಸ್‌ ಉಗ್ರರ ಕಣ್ಣು

03:50 AM Mar 18, 2017 | Team Udayavani |

ಹೊಸದಿಲ್ಲಿ: ಪ್ರೇಮಸೌಧ ತಾಜ್‌ಮಹಲ್‌ಗೆ ಉಗ್ರ ಸಂಘಟನೆ ಐಸಿಸ್‌ ದಾಳಿ ನಡೆಸಲು ಸಂಚು ರೂಪಿಸುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಆಗ್ರಾದ ಯಮುನಾ ನದಿ ಪ್ರದೇಶ ಸಹಿತ ಮತ್ತಿತರ ಪ್ರದೇಶಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

Advertisement

ತಾಜ್‌ಮಹಲ್‌ ನಮ್ಮ ಮುಂದಿನ ಗುರಿ ಎಂಬರ್ಥದ ಚಿತ್ರ ಸಂದೇಶವನ್ನು ಉಗ್ರ ಸಂಘಟನೆ “ಟೆಲಿಗ್ರಾಂ’ ಆ್ಯಪ್‌ ಮೂಲಕ ರವಾನಿಸಿದ್ದು ಈ ಆತಂಕಕ್ಕೆ ಕಾರಣವಾಗಿದೆ. ತಾಜ್‌ ಹೊರಭಾಗದಲ್ಲಿ 500 ಮೀ. ಭದ್ರತಾ ವಲಯ ನಿರ್ಮಿಸಲಾಗಿದೆ. ಎಲ್ಲ ದ್ವಾರ ಗಳಲ್ಲಿ ಪೊಲೀಸರು ಸಂದರ್ಶಕರ ಓಡಾಟ, ವಾಹನಗಳ ಚಲನೆ ಮೇಲೆ ತೀವ್ರ ನಿಗಾ ಇರಿಸಿದ್ದಾರೆ. ಒಳ ಭಾಗದ ಭದ್ರತಾ ಹೊಣೆಯನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ ವಹಿಸಲಾಗಿದೆ. ಇದಲ್ಲದೇ ಉತ್ತರ ಪ್ರದೇಶ ಪೊಲೀಸ್‌ನ ವಿಶೇಷ ಘಟಕವನ್ನೂ ರಕ್ಷಣೆಗೆ ನಿಯೋಜಿಸಲಾಗಿದೆ.

ರೈಲು ಸ್ಫೋಟ ಗಿಫ್ಟ್: ಈ ನಡುವೆ, ಭೋಪಾಲ್‌- ಉಜ್ಜ ಯಿನಿ ಪ್ಯಾಸೆಂಜರ್‌ ರೈಲು ಸ್ಫೋಟ ಪ್ರಕರಣ ದೇಶದಲ್ಲಿ ಉಗ್ರ ಸಂಘಟನೆ ಐಸಿಸ್‌ನ ಮೊದಲ ಕೃತ್ಯ ಎಂಬುದು ಸಾಬೀತಾಗಿದೆ. “ಈ ಬಾಂಬ್‌ ಸ್ಫೋಟ ಐಸಿಸ್‌ ಮುಖ್ಯಸ್ಥ ಅಬು ಬಕ್‌ ಅಲ್‌- ಬಗ್ಧಾದಿಯ ಗಿಫ್ಟ್’ ಎಂಬ ಪತ್ರ ಇದಕ್ಕೆ ಸುಳಿವು ನೀಡಿದ್ದು, ಪೈಪ್‌ ಬಾಂಬ್‌ಗ ಹೊದಿಕೆ ಆಗಿದ್ದ ಈ ಪತ್ರ ಸ್ಫೋಟದೊಂದಿಗೆ ಭಸ್ಮವಾಗಿದೆ.

ಅತೀಫ್ ಮುಝಾಫ‌ರ್‌ ಎಂಬಾತ ಈ ಪತ್ರವನ್ನು ಬರೆದಿದ್ದು, ಈತ ಸೈಫ‌ುಲ್ಲಾ ಅಸುನೀಗಿದ ಠಾಕೂರ್‌ಗಂಜ್‌ನ ಮನೆಯಲ್ಲಿ ಬಾಡಿಗೆಗಿದ್ದ. ಶಸ್ತ್ರಾಸ್ತ್ರ ಪೂರೈಕೆಗೆ ಹಣದ ನೆರವು ನೀಡುತ್ತಿದ್ದ ಎಂದು ಬಂಧನಕ್ಕೊಳಗಾದ ಶಂಕಿತರ ವಿಚಾರಣೆ ವೇಳೆ ತಿಳಿದುಬಂದಿದೆ. ಈ ಬಗ್ಗೆ ಉನ್ನತ ಮೂಲಗಳನ್ನು ಉಲ್ಲೇಖೀಸಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next