Advertisement

ಸೆ.2ಕ್ಕೆ ಮತ್ತೂಂದು ಪ್ರೇಮಕಾವ್ಯ: ತಾಜ್‌ಮಹಲ್‌-2 ರಿಲೀಸ್‌ಗೆ ಕೌಂಟ್‌ಡೌನ್‌

02:19 PM Aug 28, 2022 | Team Udayavani |

ತನ್ನ ಟೈಟಲ್‌ ಪೋಸ್ಟರ್‌, ಟೀಸರ್‌, ಟ್ರೇಲರ್‌ ಮತ್ತು ಹಾಡುಗಳ ಮೂಲಕ ಒಂದಷ್ಟು ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿರುವ “ತಾಜ್‌ ಮಹಲ್‌-2′ ಸಿನಿಮಾ, ಇದೇ ಸೆ. 2ರಂದು ತೆರೆಗೆ ಬರುತ್ತಿದೆ.

Advertisement

ಯುವ ನಟ ದೇವರಾಜ್‌ ಕುಮಾರ್‌ ನಾಯಕನಾಗಿ ಅಭಿನಯಿಸಿ, ನಿರ್ದೇಶಿಸಿರುವ “ತಾಜ್‌ಮಹಲ್‌-2′ ಸಿನಿಮಾದಲ್ಲಿ ಸಮೃದ್ಧಾ ಶುಕ್ಲಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಿತೇಶ್‌, ತಬಲ ನಾಣಿ, ವಿಕ್ಟರಿ ವಾಸು, ಕಾಕ್ರೋಚ್‌ ಸುಧಿ, ಜಿಮ್‌ ರವಿ ಮತ್ತಿತರರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

“ಶ್ರೀಗಂಗಾಂಬಿಕೆ ಎಂಟರ್‌ಪ್ರೈಸಸ್‌’ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಇತ್ತೀಚೆಗೆ ಹುಬ್ಬಳ್ಳಿ ಅದ್ಧೂರಿಯಾಗಿ “ತಾಜ್‌ಮಹಲ್‌-2′ ಸಿನಿಮಾದ ಪ್ರೀ-ರಿಲೀಸ್‌ ಇವೆಂಟ್‌ ನಡೆಸಿದ್ದ ಚಿತ್ರತಂಡ, ಉತ್ತರ ಕರ್ನಾಟಕ ಭಾಗದ ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿದೆ. ಈಗಾಗಲೇ ರಾಜ್ಯಾದ್ಯಂತ ಟ್ಯಾಬ್ಲೋ ಮೂಲಕ ಒಂದು ಸುತ್ತು ಪ್ರಚಾರ ಕಾರ್ಯಗಳನ್ನು ನಡೆಸಿರುವ “ತಾಜ್‌ಮಹಲ್‌-2′ ಚಿತ್ರಕ್ಕೆ ಎಲ್ಲ ಕಡೆಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇದೇ ಖುಷಿಯಲ್ಲಿರುವ ಚಿತ್ರತಂಡ ಸೆ. 2ಕ್ಕೆ “ತಾಜ್‌ಮಹಲ್‌-2′ ಸಿನಿಮಾವನ್ನೂ ರಾಜ್ಯಾದ್ಯಂತ ಸುಮಾರು 100ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ತೆರೆಗೆ ತರುವ ಯೋಚನೆಯಲ್ಲಿದೆ.

ತಾಜ್‌ಮಹಲ್‌-2′ ಸಿನಿಮಾದ ಬಿಡುಗಡೆಯ ಬಗ್ಗೆ ಮಾತನಾಡುವ ನಾಯಕ ನಟ ಕಂ ನಿರ್ದೇಶಕ ದೇವರಾಜ್‌ ಕುಮಾರ್‌, “ಕಳೆದ ಎರಡು-ಮೂರು ತಿಂಗಳಿನಿಂದ ಇಡೀ ರಾಜ್ಯಾದ್ಯಂತ ಸಿನಿಮಾದ ಪ್ರಚಾರ ಕಾರ್ಯಗಳನ್ನು ನಡೆಸುತ್ತಿದ್ದೇವೆ. ಈ ವೇಳೆ ಸಿನಿಮಾ ಪ್ರೇಕ್ಷಕರಿಂದ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್‌ ಸಿಗುತ್ತಿದೆ. ಬಹುತೇಕ ಹೊಸಬರೇ ಸೇರಿಕೊಂಡು ನಿರ್ಮಿಸಿರುವ ಸಿನಿಮಾಕ್ಕೆ ಇಷ್ಟೊಂದು ದೊಡ್ಡ ಮಟ್ಟಕ್ಕೆ ರೆಸ್ಪಾನ್ಸ್‌ ಸಿಗುತ್ತಿರುವುದು ಸಿನಿಮಾದ ಮೇಲಿನ ನಮ್ಮ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿದೆ. ಹೀಗಾಗಿ ಕರ್ನಾಟಕ ರಾಜ್ಯಾದ್ಯಂತ ಸುಮಾರು 100ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಸಿನಿಮಾ ರಿಲೀಸ್‌ ಮಾಡಲು ಪ್ಲಾನ್‌ ಮಾಡಿಕೊಂಡಿದ್ದೇವೆ’ ಎನ್ನುತ್ತಾರೆ.

Advertisement

ಸದ್ಯದ ಮಟ್ಟಿಗೆ ಗಾಂಧಿನಗರದಲ್ಲಿ ದೊಡ್ಡ ಸಿನಿಮಾಗಳಿಗೂ ಥಿಯೇಟರ್‌ ಸಿಗುವುದು ಕಷ್ಟ ಎಂಬ ಪರಿಸ್ಥಿತಿ ಇದೆ. ಹೀಗಿರುವಾಗ ಗಾಂಧಿನಗರದ ಪ್ರಮುಖ ಥಿಯೇಟರ್‌ಗಳಲ್ಲಿ ಒಂದಾಗಿರುವ ಅನುಪಮಾ ಥಿಯೇಟರ್‌ನಲ್ಲಿ “ತಾಜ್‌ಮಹಲ್‌-2′ ಬಿಡುಗಡೆಯಾಗುತ್ತಿದೆ. “”ತಾಜ್‌ಮಹಲ್‌-2′ ಸಿನಿಮಾದ ಕಂಟೆಂಟ್‌ ಎಲ್ಲ ಥರದ ಆಡಿಯನ್ಸ್‌ಗೂ ಇಷ್ಟವಾಗುವಂತಿದೆ. ಹೀಗಾಗಿ ವಿತರಕರು ಮತ್ತು ಪ್ರದರ್ಶಕರು ಕೂಡ ಸಿನಿಮಾದ ಬಗ್ಗೆ ನಿರೀಕ್ಷೆಯ ಮಾತುಗಳನ್ನಾಡುತ್ತಿದ್ದಾರೆ. ಹೊಸಬರ ಸಿನಿಮಾಕ್ಕೆ ಗಾಂಧಿನಗರದಲ್ಲಿ ಥಿಯೇಟರ್‌ ಸಿಗೋದೇ ಕಷ್ಟ ಎನ್ನುವ ಸಂದರ್ಭದಲ್ಲಿ ನಮ್ಮ ಸಿನಿಮಾ ಅನುಪಮಾ ಥಿಯೇಟರ್‌ನಲ್ಲಿ ಬಿಡುಗಡೆಯಾಗುತ್ತಿದೆ’ ಎನ್ನುತ್ತಾರೆ ಹೀರೋ ಕಂ ಡೈರೆಕ್ಟರ್‌ ದೇವರಾಜ್‌ ಕುಮಾರ್‌.

Advertisement

Udayavani is now on Telegram. Click here to join our channel and stay updated with the latest news.

Next