Advertisement

Taiwan; ಸಂಸತ್‌ನಲ್ಲಿ ಸಂಸದರ ಭಾರೀ ಬಡಿದಾಟ!

02:09 AM May 19, 2024 | Team Udayavani |

ತೈಪೆ: ಸರಕಾರದ ಕಾರ್ಯಶೈಲಿಯ ಮೇಲೆ ನಿಗಾ ಇರಿಸುವ ನಿಟ್ಟಿನಲ್ಲಿ ಸಂಸ ದರಿಗೆ ಹೆಚ್ಚಿನ ಅಧಿಕಾರ ನೀಡುವ ನಿಟ್ಟಿ ನಲ್ಲಿ ಉಂಟಾದ ಚರ್ಚೆ ತೈವಾನ್‌ ಸಂಸತ್‌ನಲ್ಲಿ ಹೊಡೆದಾಟಕ್ಕೆ ಕಾರಣ ವಾಗಿದೆ. ಸಂಸದ ರೆಲ್ಲರೂ ಕೂಡ ಒಬ್ಬರ ಮೇಲೊ ಬ್ಬರು ಬಿದ್ದು ಬಡಿದಾಡಿ ಕೊಂಡಿದ್ದಾರೆ.

Advertisement

ಈ ಸುಧಾರಣೆಗೆ ಸಂಬಂಧಿಸಿದಂತೆ ಮತದಾನ ಆರಂಭವಾಗುವ ಮೊದಲೇ ಸಂಸದರು ಕಿರುಚಾಡಲು ಆರಂಭಿಸಿ ದರು. ಸಂಸದರು ಸ್ಪೀಕರ್‌ ಆಸನವನ್ನು ಸುತ್ತುವರಿದು, ಒಬ್ಬರ ಮೇಲೊಬ್ಬರು ಎರಗಿ ನೆಲಕ್ಕೆ ತಳ್ಳಿ ಗದ್ದಲ ಸೃಷ್ಟಿಸಿದ್ದಾರೆ. ಶುಕ್ರ ವಾರ ಈ ಘಟನೆ ನಡೆದಿದ್ದು, ಅದರ ಫೋಟೋ ಮತ್ತು ವೀಡಿಯೋ ವೈರಲ್‌ ಆಗಿದೆ. ಈ ವರ್ಷದ ಜನವರಿ ಯಲ್ಲಿ ನಡೆದಿದ್ದ ಚುನಾವಣೆ ಯಲ್ಲಿ ತೈವಾನ್‌ ಡೆಮಾ ಕ್ರಾಟಿಕ್‌ ಪ್ರೊಗ್ರೆಸಿವ್‌ ಪಾರ್ಟಿ ಅತ್ಯಂತ ಹೆಚ್ಚಿನ ಸ್ಥಾನಗಳನ್ನು ಗೆದ್ದಿದ್ದರೂ, ಬಹು ಮತ ಪಡೆಯಲು ವಿಫ‌ಲವಾಗಿತ್ತು. ವಿಪಕ್ಷ ಕುಮಿ ಟಾಂಗ್‌ ಆಡಳಿತ ಪಕ್ಷ ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next