Advertisement
ಫೈಟರ್ ಜೆಟ್ ನೆಲಸಮಗೊಂಡಿದ್ದು, ಅದರ ಪೈಲಟ್ ಅಪಾಯದಿಂದ ಪಾರಾಗಿದ್ದಾರೆ. ಅಪಘಾತಕ್ಕೀಡಾದ ವಿಮಾನದ ಕೆಲವು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಆದರೆ ಉಭಯ ದೇಶಗಳು ಅದನ್ನು ದೃಢಪಡಿಸಿಲ್ಲ.
ಮಾಧ್ಯಮ ವರದಿಗಳ ಪ್ರಕಾರ, ತೈವಾನ್ ಯುಎಸ್ ಕ್ಷಿಪಣಿಯನ್ನು ಚೀನದ ಸುಖೋಯ್ ವಿಮಾನವನ್ನು ಹೊಡೆದುರುಳಿಸಲು ಬಳಸಿದೆ ಎಂದು ಹೇಳಲಾಗುತ್ತಿದೆ. ಆದರೆ ಇದು ಯಾವ ಕ್ಷಿಪಣಿ ಎಂಬುದು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಈ ಘಟನೆ ಬಳಿಕ ಚೀನ ಮತ್ತು ತೈವಾನ್ ನಡುವೆ ಉದ್ವಿಗ್ನತೆ ಹೆಚ್ಚಾಗುವ ಸಾಧ್ಯತೆ ಇದೆ. ದಕ್ಷಿಣ ಚೀನ ಸಮುದ್ರದಲ್ಲಿ ಅಮೆರಿಕ ಸೈನ್ಯ ಸಕಲ ಸಿದ್ಧತೆಯೊಂದಿಗೆ ಬಲಿಷ್ಠವಾಗಿದ್ದು, ನಿಮಿಟ್ಜ್ ಯುದ್ಧನೌಕೆಯನ್ನು ಅಲ್ಲಿ ನಿಯೋಜಿಸಲಾಗಿದೆ. ಅದರಲ್ಲಿ 120 ಫೈಟರ್ ಜೆಟ್‌ಗಳನ್ನು ನಿಯೋಜಿಸಲಾಗಿದೆ.
Related Articles
Advertisement
ಆದರೆ ಇವೆಲ್ಲದರ ನಡುವೆ ದಕ್ಷಿಣ ಚೀನ ಸಮುದ್ರದಲ್ಲಿ ಚೀನದ ಬೆದರಿಕೆಗಳು ಕಾರ್ಯರೂಪಕ್ಕೆ ಬರುವುದಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.ಸಿಎನ್‌ಎನ್ ವರದಿ ಮಾಡುವ ಪ್ರಕಾರ ರವಿವಾರ, ಅಮೆರಿಕ ತನ್ನ ಮಾರ್ಗದರ್ಶಿ ಕ್ಷಿಪಣಿ ನಾಶಕ (Guided Missile Destroyer) ವನ್ನು ತೈವಾನ್‌ನ ಸ್ಟ್ರಾಟ್ ಎಂಬ ಪ್ರದೇಶದಲ್ಲಿ ನಿಯೋಜಿಸಿತ್ತು. ಅಮೆರಿಕ ಇದನ್ನು ಮೊದಲು ಘೋಷಿಸಿರಲಿಲ್ಲ. ಆದರೆ ಅಮೆರಿಕ ಎರಡು ವಾರಗಳಲ್ಲಿ ಎರಡನೇ ಬಾರಿಗೆ ದಕ್ಷಿಣ ಚೀನ ಸಮುದ್ರಕ್ಕೆ ಈ ಕ್ಷಿಪಣಿಯನ್ನು ಕಳುಹಿಸಿತ್ತು. ತೈವಾನ್ ಮೇಲೆ ದಾಳಿ ನಡೆದರೆ ಅಮೆರಿಕ ಮೌನವಾಗಿ ಕುಳಿತುಕೊಳ್ಳುವುದಿಲ್ಲ ಎಂದು ಯುಎಸ್ ಕಳೆದ ವಾರ ಸ್ಪಷ್ಟಪಡಿಸಿದೆ.