Advertisement

Taiwan: ಭಾರತೀಯ ಉದ್ಯೋಗಿಗಳ ನೇಮಕಕ್ಕೆ ತೈವಾನ್‌ ಉತ್ಸುಕ

09:35 PM Nov 10, 2023 | Team Udayavani |

ತೈಪೆ: ಭಾರತೀಯ ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದಾಗಿ ಇಸ್ರೇಲ್‌ ಇತ್ತೀಚಿಗೆ ಘೋಷಿಸಿತು. ಇದರ ಬೆನ್ನಲ್ಲೇ ಇದೀಗ 1 ಲಕ್ಷ ಭಾರತೀಯ ಉದ್ಯೋಗಿಗಳನ್ನು ನೇಮಿಸುಕೊಳ್ಳುವುದಾಗಿ ತೈವಾನ್‌ ಘೋಷಿಸಿದೆ.

Advertisement

ಕೈಗಾರಿಕೆಗಳಲ್ಲಿ, ಕೃಷಿ ಜಮೀನುಗಳಲ್ಲಿ ಹಾಗೂ ಆಸ್ಪತ್ರೆಗಳಲ್ಲಿ ಭಾರತೀಯ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗುವುದು ಎಂದು ತೈವನ್‌ ತಿಳಿಸಿದೆ. ಒಂದು ಕಡೆ ನೆರೆಯ ತೈವಾನ್‌ ತನಗೆ ಸೇರಿದ ಪ್ರದೇಶ ಎಂದು ಚೀನಾ ಸದಾ ಕ್ಯಾತೆ ತೆಗೆಯುತ್ತಿದೆ. ಚೀನಾದೊಂದಿಗೆ ತೈವಾನ್‌ ಉತ್ತಮ ಸಂಬಂಧ ಹೊಂದಿಲ್ಲ. ಹೀಗಾಗಿ, ಅದು ಭಾರತದ ಕಡೆಗೆ ನೋಡಲಾರಂಭಿಸಿದೆ.

ತಯಾರಿಕೆ, ಕೈಗಾರಿಕೆ, ನಿರ್ಮಾಣ ಯೋಜನೆಗಳು, ಕೃಷಿ ಕೆಲಸ, ಮನೆಗೆಲಸ ಹಾಗೂ ಮೀನುಗಾರಿಕೆ ವಲಯಗಳಲ್ಲಿ ಮಾನವ ಸಂಪನ್ಮೂಲ ಕೊರತೆಯನ್ನು ತೈವಾನ್‌ ಎದುರಿಸುತ್ತಿದೆ. ಆರೋಗ್ಯ ವಲಯ ಸೇರಿದಂತೆ ವಿವಿಧ ವಲಯಗಳಲ್ಲಿ ಸ್ಥಳೀಯ ನೌಕರರಿಗೆ ಸಮಾನವಾದ ವೇತನವನ್ನು ತೈವಾನ್‌ನಲ್ಲಿ ವಿದೇಶಿ ನೌಕರರಿಗೂ ನೀಡಲಾಗುತ್ತದೆ. ಪ್ರಸ್ತುತ ತೈವಾನ್‌ನಲ್ಲಿ ಕನಿಷ್ಠ ವೇತನ ಮಾಸಿಕ 26,400 ತೈವಾನ್‌ ಡಾಲರ್‌ ಇದೆ. ಇದು 68,300 ರೂ.ಗಳಿಗೆ ಸಮಾನ.

ಇನ್ನೊಂದೆಡೆ, ತೈವಾನ್‌ನಲ್ಲಿ ಹಿರಿಯ ವಯಸ್ಕರ ಸಂಖ್ಯೆ ಹೆಚ್ಚಿದ್ದು, 2025ರ ವೇಳೆಗೆ ಹಿರಿಯ ನಾಗರಿಕರೇ ಅಧಿಕವಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next