Advertisement
ಹಳೆಯ ಕಟ್ಟಡ ಹಾಗೂ ಸೂಕ್ತ ನಿರ್ವಹಣೆ ಇಲ್ಲದಿದ್ದಕ್ಕೆ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದು ಗಬ್ಬೆದ್ದು ನಾರುತ್ತಿತ್ತು. ಈಚೆಗೆ ಕಟ್ಟಡ ಮೇಲ್ಛಾವಣಿ ಮಹಿಳಾ ಸಿಬ್ಬಂದಿ ಮೇಲೆ ಕುಸಿದು ಬಿದ್ದಿತ್ತು. ಕಳೆದ ಫೆ. 8ರಂದು ಶಿಗ್ಗಾಂವಿಯಿಂದ ವರ್ಗಾವಣೆಯಾಗಿ ಕಲಬುರಗಿ ತಹಶೀಲ್ದಾರ್ ಆಗಿ ಕಾರ್ಯಭಾರ ವಹಿಸಿಕೊಂಡಿರುವ ಪ್ರಕಾಶ ಕುದರಿ ಕಚೇರಿ ಹಾಗೂ ಆವರಣದಲ್ಲಿನ ಕಸದ ರಾಶಿ ಹಾಗೂ ಯಾವುದೇ ಸಂದರ್ಭದಲ್ಲಿ ಆಪತ್ತು ಎದುರಾಗುವುದನ್ನು ಅರಿತು ಸ್ವಚ್ಛತಾ ಕಾರ್ಯಕ್ಕೆ ಮುಂದಾದರು.
ಹಾಗೂ ಜನಪ್ರತಿನಿ ಗಳೊಂದಿಗೆ ಚರ್ಚಿಸಲಾಗುವುದು. ನೆಲಸಮಗೊಳಿಸಲು ಪ್ರಾಚ್ಯ ವಸ್ತು ಇಲಾಖೆ ಅನುಮತಿ ನೀಡುತ್ತದೆಯೋ ಎನ್ನುವುದನ್ನು ಕಾಯ್ದು ನೋಡಬೇಕು. ತಹಶೀಲ್ದಾರ್ ಕಚೇರಿಯ ಮಿನಿ ವಿಧಾನಸೌಧ ಬೇರೆಡೆ ಹೊಸದಾಗಿ ನಿರ್ಮಿಸಲು ಮೂರ್ನಾಲ್ಕು ಕಡೆ ಸ್ಥಳ ಗುರುತಿಸಲಾಗುತ್ತಿದೆ. ಜಿಲ್ಲಾಧಿಕಾರಿ ಕಚೇರಿ ಪಕ್ಕದ ಎನ್‌ಸಿಸಿ ಕಚೇರಿ ಸ್ಥಳಾಂತರ ಆಗುತ್ತಿರುವುದರಿಂದ ಈ ಸ್ಥಳದಲ್ಲೇ ತಹಶೀಲ್ದಾರ್ ಕಚೇರಿ ನಿರ್ಮಾಣವಾಗಬೇಕು. ಇಲ್ಲವೇ ಈಗಿರುವ ತಹಶೀಲ್ದಾರ್ ಕಚೇರಿ ಆವರಣದಲ್ಲೇ ಕಚೇರಿ ಸ್ಥಾಪನೆಯಾದರೆ ಸೂಕ್ತ ಎನ್ನುವುದು ಸಾರ್ವಜನಿಕರ ಹಾಗೂ ತಮ್ಮ ಅಭಿಪ್ರಾಯವಾಗಿದೆ ಎಂದು ತಹಶೀಲ್ದಾರ್ ತಿಳಿಸಿದರು.
Related Articles
ಕಲಬುರಗಿ ತಹಶೀಲ್ದಾರ್ ಕಚೇರಿ ಒಳಗೊಂಡ ಮಿನಿ ವಿಧಾನಸೌಧ ನಿರ್ಮಾಣದ ಸ್ಥಳ ಶೋಧನೆ ಕಾರ್ಯ ನಡೆದಿದೆ. ಈಗಿರುವ ಸ್ಥಳದಲ್ಲೇ ಎಲ್ಲ ಕಟ್ಟಡಗಳನ್ನು ನೆಲಸಮಗೊಳಿಸಿ ಕಲಬುರಗಿ ಪಾಲಿಕೆ ಕಚೇರಿಯಂತೆ ಆಧುನಿಕ ಸೌಲಭ್ಯ ಒಳಗೊಂಡ ಕಟ್ಟಡ ನಿರ್ಮಿಸಲು ನೀಲಿ ನಕ್ಷೆ ರೂಪಿಸಲಾಗುತ್ತಿದೆ. ಬಸ್ ಡಿಪೋಗಳನ್ನು ನಗರಾಚೆ ಸ್ಥಳಾಂತರಿಸಲು ಉದ್ದೇಶಿಸಲಾಗಿದೆ. ಹೀಗಾಗಿ ಬಸ್ ಡಿಪೋದ ಸ್ಥಳದಲ್ಲಿ ಇಲ್ಲವೇ ಡಿಸಿ ಕಚೇರಿ ಪಕ್ಕ ಸ್ಥಳಾಂತರಗೊಳ್ಳುವ ಎನ್‌ಸಿಸಿ ಕಚೇರಿ ಸ್ಥಳದಲ್ಲಿ ಮಿನಿ ವಿಧಾನಸೌಧ ಕಚೇರಿ ಸ್ಥಾಪನೆಗಾಗಿ ಜಾಗ ಶೋಧಿಸಲಾಗಿದೆ. ಇವುಗಳಲ್ಲಿ ಯಾವುದು ಸೂಕ್ತ ಎನ್ನುವ ಕುರಿತು ಚರ್ಚೆ ನಡೆದಿದೆ. ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ 10 ಕೋಟಿ ರೂ. ಅನುದಾನ ದೊರಕಿಸುವುದು ಮುಖ್ಯವಾಗಿದೆ.
Advertisement