Advertisement

ಅಕ್ರಮ ಮರಳು ಅಡ್ಡೆಗೆ ಮಧ್ಯರಾತ್ರಿ ದಾಳಿ ನಡೆಸಿದ ಬಂಟ್ವಾಳ ತಹಶಿಲ್ದಾರ್; ಆರೋಪಿಗಳು ಪರಾರಿ

07:45 AM Jun 26, 2021 | Team Udayavani |

ಬಂಟ್ವಾಳ: ರಾತ್ರಿ ವೇಳೆಯಲ್ಲಿ  ಅಕ್ರಮವಾಗಿ ನದಿಯಿಂದ  ಮರಳು ತೆಗೆದು ಮಾರಟ ಮಾಡುತ್ತಿದ್ದ ಸ್ಥಳವೊಂದಕ್ಕೆ ಮಧ್ಯರಾತ್ರಿ ವೇಳೆ ಅರಣ್ಯ ಅಧಿಕಾರಿಗಳ ಜೊತೆ ತಹಶಿಲ್ದಾರ್ ದಾಳಿ ನಡೆಸಿ ಮರಳುಗಾರಿಕೆಗೆ ಬಳಸುವ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಪಾಣೆಮಂಗಳೂರು ಎಂಬಲ್ಲಿ ನಡೆದಿದೆ.

Advertisement

ಪಾಣೆಮಂಗಳೂರು ಹಳೆಯ ಸೇತುವೆ ಅಡಿ ಭಾಗದಿಂದ ರಾತ್ರಿ ವೇಳೆ ಅಕ್ರಮವಾಗಿ ಮರಳು ತೆಗೆಯಲಾಗುತ್ತಿದೆ ಎಂಬ ಆರೋಪದ ಮೇಲೆ ತಹಶಿಲ್ದಾರ್ ರಶ್ಮಿ. ಎಸ್.ಆರ್.ಅವರು ಗೌಪ್ಯವಾಗಿ ಅರಣ್ಯ ಇಲಾಖಾ ಅಧಿಕಾರಿಗಳ ಜೊತೆ ದಾಳಿ ನಡೆಸಿದ್ದಾರೆ.

ದಾಳಿಯ ಸಂದರ್ಭದಲ್ಲಿ ಆರೋಪಿಗಳು ಪರಾರಿಯಾಗಿದ್ದು ಸ್ಥಳದಲ್ಲಿ  ಒಂದು ಟಿಪ್ಪರ್, ಒಂದು ದೋಣಿ ಬಿಟ್ಟು ಪರಾರಿಯಾಗಿದ್ದಾರೆ.

ಜಿಲ್ಲಾಡಳಿತದ ಅದೇಶದಂತೆ ಸುರಕ್ಷತೆಯ ದೃಷ್ಟಿಯಿಂದ ಸೇತುವೆಯ ಸಮೀಪ ಇಲಾಖೆ ನಿಗದಿಪಡಿಸಿದ ದೂರದವರೆಗೆ ಯಾವುದೇ ಕಾರಣಕ್ಕೂ ಮರಳುಗಾರಿಕೆ ಮಾಡಬಾರದೆಂಬ ಕಟ್ಟು ನಿಟ್ಟಿನ ಆದೇಶ ಇದ್ದರೂ ಕೂಡ ಅಕ್ರಮವಾಗಿ ರಾತ್ರಿ ವೇಳೆ ಮೆಷಿನ್ ಬಳಕೆ ಮಾಡಿ ಮರಳು ತೆಗೆಯುವುದರ ಬಗ್ಗೆ ದೂರುಬಂದ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಆದರಿಸಿ ರಾತ್ರಿ ದಿಡೀರ್ ದಾಳಿ ನಡೆಸಿದ್ದಾರೆ.

Advertisement

ವಶಪಡಿಸಿಕೊಂಡ ಸೊತ್ತುಗಳ ಆಧಾರದ ಮೇಲೆ ಹೆಚ್ಚಿನ ತನಿಖೆ ಮುಂದುವರಿಸಲಾಗಿದೆ. ತಹಶಿಲ್ದಾರ್ ರಶ್ಮಿ. ಎಸ್.ಆರ್ ಅವರು ಈ ಹಿಂದೆಯೂ ಅಕ್ರಮ ಮರಳುಗಾರಿಕೆ ಬಗ್ಗೆ ಅನೇಕ ದಾಳಿ ನಡೆಸಿ ಕಾನೂನು ಕ್ರಮ ಕೈಗೊಂಡಿದ್ದರು.

ಬಂಟ್ವಾಳ ವಲಯ ಅರಣ್ಯ ಧಿಕಾರಿ‌ ರಾಜೇಶ್ ಬಳಿಗಾರ್ ನೇತ್ರತ್ವದ ತಂಡ ದಲ್ಲಿ ಅಧಿಕಾರಿಗಳಾದ ಪ್ರೀತಂ, ಜಿತೇಶ್ ಸಿಬ್ಬಂದಿ ಗಳಾದ ಬಸವ , ಪ್ರವೀಣ್ ಕಾರ್ಯಚರಣೆ ಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next