Advertisement

ತಹಶೀಲ್ದಾರ್‌ ಬಹಿರಂಗ ಕ್ಷಮೆಯಾಚನೆ: ಜಯಂತಿಗೆ ಚಾಲನೆ

03:22 PM Apr 15, 2021 | Team Udayavani |

ಎಚ್‌.ಡಿ.ಕೋಟೆ: ಕೇವಲ ಕಸುಬಿನ ಆಧಾರದಮೇಲೆ ಜಾತಿ ನಿರ್ಧರಿಸುವ ದೇಶಗಳಲ್ಲಿ ಭಾರತಮೊದಲನೆಯದು. ಬಿಳಿ ಹಾಳೆಯಂತಹ ಭಾರತಕ್ಕೆಜಾತಿ ಕಪ್ಪು ಚುಕ್ಕೆ ಇದ್ದಂತೆ ಎಂದು ಉಪನ್ಯಾಸಕಸಿದ್ದನಾಯ್ಕ ಸಾರಿ ಹೇಳಿದರು.ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್‌ ಸಮುದಾಯ ಭವನದಲ್ಲಿ ತಾಲೂಕು ಆಡಳಿತ,ತಾಲೂಕು ಸಮಾಜ ಕಲ್ಯಾಣ ಇಲಾಖೆ ಹಾಗೂಪುರ ಸಭೆ ಸಂಯುಕ್ತಾಶ್ರಯದಲ್ಲಿ ನಡೆದಅಂಬೇಡ್ಕರ್‌ ಜಯಂತಿಯಲ್ಲಿ ಮಾತನಾಡಿದರು.

Advertisement

ಆದರ್ಶ ಮೈಗೂಡಿಸಿಕೊಳ್ಳಿ: ಅಂಬೇಡ್ಕರ್‌ ಜೀವಿತದ ಉದ್ದಕ್ಕೂ ಸಮಾನತೆಗೆ ಶ್ರಮಿಸಿ ಸಮಾಜದಲ್ಲಿನಹಿಂದುಳಿದ ವರ್ಗಗಳು, ಮಹಿಳೆಯರಿಗೆ ವಿಶೇಷಸ್ಥಾನಮಾನಕ್ಕೆ ಹೋರಾಟ ನಡೆಸಿದ ಧೀಮಂತನಾಯಕ. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜದ ಒಳಿತಿಗೆ ಹೋರಾಡುವಂತೆತಿಳಿಸಿದರು.ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕಸಂತೋಷ್‌ ಸಿಂಧೆ ಮಾತನಾಡಿ, ನಾಯಕರಜಯಂ ತಿಗೆ ಬೆರಳೆಣಿಕೆ ಮಂದಿ ಮಾತ್ರ ಹಾಜರಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಅಂಬೇಡ್ಕರ್‌ ಜಯಂತಿ ಆಚರಿಸುವ ಬದಲು ಅಂಬೇಡ್ಕರ್‌ಅವರ ಚಿಂತನೆಗಳನ್ನು ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.

ಮೀಸಲಾತಿ ರದ್ಧತಿ ಅಧಿಕಾರ ಯಾರಿಗೂ ಇಲ್ಲ:ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಅನಿಲ್‌ಚಿಕ್ಕ ಮಾದು, ದೇಶದಲ್ಲಿ ಜಾತೀಯತೆ ಇರುವತನಕ ಮೀಸಲಾತಿ ಜಾರಿಯಲ್ಲಿರುತ್ತದೆ. ಮೀಸಲಾತಿ ರದ್ದು ಪಡಿಸುವ ಹಕ್ಕು ಯಾರಿಗೂ ಇಲ್ಲ.ಅಂಬೇ ಡ್ಕರ್‌ ಸಂವಿಧಾನದಡಿ ತಾನೂ ಶಾಸಕನಾಗಿದ್ದು ಅಂಬೇಡ್ಕರ್‌ ಭಾರತದಲ್ಲಿ ಜನಿಸದೇ ಇದ್ದರೆಕಸುಬಿನ ಜಾತಿ ಲೆಕ್ಕಾಚಾರದವರು ಮನೆಯಿಂದಹೊರಬರಲಾಗದ ಸ್ಥಿತಿ ತಲೆದೋರುತ್ತಿತ್ತುಎಂದರು.ಕ್ರಮಕ್ಕೆ ಸೂಚನೆ: ರಾಷ್ಟ್ರೀಯ ಹಬ್ಬಗಳಿಗೆತಾಲೂಕು ಅಧಿಕಾರಿಗಳ ಗೈರುಹಾಜರಿ ಮಾಮೂಲಾ ಗಿದ್ದು ಇಂದೇ ಸಂಜೆ ಒಳಗೆ ತಾಲೂಕು ಅಧಿಕಾರಿಗಳ ಸಭೆ ಆಯೋಜನೆಗೊಳ್ಳಬೇಕು.

ಘಟನೆಕುರಿತು ಆರಂಭದಲ್ಲಿಯೇ ಸಂಘಟಕರಿಂದಮಾತಿನ ವಾಗ್ಧಾಳಿ ನಡೆದದ್ದು ಬೇಸರದ ಸಂಗತಿ.ಜಯಂತಿಗೆ ಗೈರಾದ ಅಧಿಕಾರಿಗಳ ಹಾಜರಾತಿಪರಿಶೀಲಿಸಿ 16 ಇಲಾಖೆಗಳ ಗೈರು ಅಧಿಕಾರಿಗಳವಿರುದ್ಧ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದುಕಾನೂನು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್‌ರಿಗೆಸೂಚನೆ ನೀಡಿದರು.ಬಿಆರ್‌ಸಿ ಮಹದೇವಯ್ಯನವರ ಸ್ವಾಗತದೊಂದಿಗೆ ಉಮೇಶ್‌ ನೂರಲಕುಪ್ಪೆ ಅವರ ಕ್ರಾಂತಿಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿಜಿಪಂ ಸದಸ್ಯ ವೆಂಕಟಸ್ವಾಮಿ, ಪುರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಎಚ್‌.ಸಿ.ನರಸಿಂಹಮೂರ್ತಿ, ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಸೋಗಳ್ಳಿ ಶಿವಣ್ಣ,ಪುಟ್ಟಯ್ಯ, ಮುದ್ದಮಲ್ಲಯ್ಯ, ಭಾಗ್ಯಲಕ್ಷ್ಮೀ,ಎಂ.ಡಿ.ಮಂಚಯ್ಯ, ನೌಕರರ ಸಂಘದ ಅಧ್ಯಕ್ಷನಾಗೇಶ, ಚಾ.ನಂಜುಂಡಮೂರ್ತಿ, ಭೀಮನಹಳ್ಳಿಸೋಮೇಶ್‌, ಗೋಪಾಲಸ್ವಾಮಿ, ತಹಶೀಲ್ದಾರ್‌ನರಗುಂದ, ಇಒ ರಾಮಲಿಂಗಯ್ಯ, ಬಿಇಒರೇವಣ್ಣ, ತಾಲೂಕು ಸಮಾಜ ಕಲ್ಯಾಣಾಧಿಕಾರಿರಾಮಸ್ವಾಮಿ, ತಾಲೂಕು ಆರೋಗ್ಯಾಧಿಕಾರಿಡಾ.ರವಿಕುಮಾರ್‌, ಸಿಡಿಪಿಒ ಆಶಾ, ಬಸವರಾಜು,ರಾಜಯ್ಯ ಇತರರಿದ್ದರು.ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆತಿರುಗುತ್ತಿದ್ದಂತೆಯೇ ತಹಶೀಲ್ದಾರ್‌ ನರಗುಂದಮತ್ತು ಬಿಇಒ ರೇವಣ್ಣ ಮುಂದೆ ಈ ರೀತಿನಡೆಯದಂತೆ ಎಚ್ಚರ ವಹಿಸುವ ಭರವಸೆ ನೀಡಿಬಹಿರಂಗವಾಗಿ ಕ್ಷಮೆ ಯಾಚಿಸಿದ ಬಳಿಕವಷ್ಟೇಕಾರ್ಯಕ್ರಮ ಆರಂಭಗೊಂಡಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next