Advertisement

ಉಕ್ರೇನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿ: ಪೋಷಕರಿಗೆ ಧೈರ್ಯ ತುಂಬಿದ ತಹಶೀಲ್ದಾರ್

07:14 PM Feb 27, 2022 | Team Udayavani |

ಶಿರಸಿ: ಯುದ್ದ ಪೀಡಿತ ಉಕ್ರೇನ್ ದೇಶದಲ್ಲಿ ಸಿಲುಕಿಕೊಂಡಿರುವ ಇಲ್ಲಿನ ಹೊಸಪೇಟೆ ರಸ್ತೆಯ ನಿವಾಸಿ ಇಮ್ರಾನ್ ನಜೀರ್ ಅಲ್ತಾಫ್ ಚೌದರಿ ಎಂಬ ವಿದ್ಯಾರ್ಥಿಯ ಮನೆಗೆ ಭಾನುವಾರ  ತಹಶೀಲ್ದಾರ್ ಎಂ.ಆರ್ ಕುಲಕರ್ಣಿ ಭೇಟಿ ನೀಡಿ ಪೋಷಕರಿಗೆ ಧೈರ್ಯ ತುಂಬಿದರು.

Advertisement

ಯುದ್ದ ಪೀಡಿತ ಉಕ್ರೇನ್ ದೇಶದಲ್ಲಿರುವ ರಾಜ್ಯದ ವಿದ್ಯಾರ್ಥಿಗಳನ್ನು ಕರೆತರಲು ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು. ನೀವು ಧೈರ್ಯವಾಗಿರಿ ಎಂದು ವಿದ್ಯಾರ್ಥಿ ಇಮ್ರಾನ್ ಚೌದರಿ ಅವರ ತಂದೆ ಬನವಾಸಿಯ ಗ್ರಾಮ ಪಂಚಾಯತಿಯ ಸದಸ್ಯ ಅಲ್ತಾಫ್ ಚೌದರಿ ಅವರಿಗೆ ಧೈರ್ಯ ತುಂಬಿದರು.  ಕಲಿಯುವ ಸಂದರ್ಭದಲ್ಲಿ ಬಡತನವಿದ್ದ ಕಾರಣ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ. ಕಷ್ಟ ಪಟ್ಟು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದು ಕಲಿಸುತ್ತಿರುವ ಸಂದರ್ಭದಲ್ಲಿ ಎಂದು ನೋವು ತೋಡಿಕೊಂಡರು.

ನಿನ್ನೆಯವರೆಗೆ ಕರೆ ಮಾಡಿ ನಮಗೆ ಧೈರ್ಯವಾಗಿರಿ ನಾನು ಚೆನ್ನಾಗಿದ್ದೆನೆ ಯಾವ ತೊಂದರೆ ಇಲ್ಲ ಎಂದಿದ್ದ. ಸಂಜೆಯ ನಂತರ ದೂರವಾಣಿ ಸಂಪರ್ಕ ಸಿಗುತ್ತಿರಲಿಲ್ಲ ಎಂದೂ ಹೇಳಿದರು.

ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ನಾಗರಾಜ ಬೊರಕರ್, ಕಂದಾಯ ನಿರೀಕ್ಷಕಿ ಮಂಜುಳ ನಾಯ್ಕ್, ಗ್ರಾಪಂ ಅಧ್ಯಕ್ಷೆ ತುಳಸಿ ಆರೇರ, ಸದಸ್ಯೆ ಗೀತಾ ಚನ್ನಯ್ಯ, ಅಂಗನವಾಡಿ ಮೇಲ್ವಿಚಾರಕಿ ನಿರ್ಮಲಾ, ಹಬೀಬ್ ರಹಮಾನ್‌ ಚೌದರಿ, ಇಜಾಜ್ ಅಹಮದ್ ಚೌದರಿ, ಅಸ್ಪಕ್ ಅಹಮದ್ ಚೌದರಿ, ಇಕ್ಬಾಲ್ ಅಹಮದ್ ಚೌದರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next