Advertisement

ಸಾಮಿಲ್ಗೆ ತಹಶೀಲ್ದಾರ್‌ ಭೇಟಿ

02:05 PM May 04, 2019 | pallavi |

ಶಿರಹಟ್ಟಿ: ಪಟ್ಟಣದ ಮುಂಡರಗಿ ರಸ್ತೆಗೆ ಹೊಂದಿಕೊಂಡಿರುವ ಸುಮಾರು 4-5 ಸಾ ಮಿಲ್ಗಳಿಗೆ ಶುಕ್ರವಾರ ಮಧ್ಯಾಹ್ನ ತಹಶೀಲ್ದಾರ್‌ ಹಾಗೂ ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು.

Advertisement

ಪಟ್ಟಣದಲ್ಲಿನ ಜನಸಾಮಾನ್ಯರ ಆರೋಗ್ಯ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಸ್ಥಳೀಯರು ನೀಡಿದ ದೂರಿನ ಮೇರೆಗೆ ತಹಶೀಲ್ದಾರ್‌ ಭೇಟಿ ನೀಡಿ ಪರಿಶೀಲಿಸಲಾಗಿದ್ದು, ಮುಖ್ಯಾಧಿಕಾರಿಗೆ ಈ ಕುರಿತು ವರದಿ ನೀಡಲು ಸೂಚಿಸಿದರು.

ಸ್ಥಾನಿಕ ಪರಿಶೀಲನಾ ಸಮಯದಲ್ಲಿ ತಹಶೀಲ್ದಾರ್‌ ಆಶಪ್ಪನವರು ಸಾಮಿಲ್ಗಳಿಗೆ ಭೇಟಿ ನೀಡಿ ಸಾಮಿಲ್ಗಳಿಂದ ಸಾರ್ವಜನಿಕರ ಆರೋಗ್ಯ ಮೇಲೆ ಬೀರುತ್ತಿರುವ ದುಷ್ಪರಿಣಾಮ ಕುರಿತು ಪರಿಶೀಲಿಸಿದರು. ಕಟ್ಟಿಗೆ ಪೌಡರ್‌, ಶಬ್ದ ಮಾಲಿನ್ಯ, ಸಾರ್ವಜನಿಕರು ಅಡ್ಡಾಡುವ ರಸ್ತೆ ಮೇಲೆ ಅಡ್ಡಲಾಗಿ ಹಾಕಲಾಗಿರುವ ಕಟ್ಟಿಗೆ ತುಂಡುಗಳು ಹಾಗೂ ಕಟ್ಟಿಗೆ ಒಳಗಿನ ಹುಳಗಳು ಮನೆಯಲ್ಲಿ ಪ್ರವೇಶ, ಇದರಿಂದ ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೊಂದರೆ ಉಂಟಾಗುವುದು ಎಂದು ದೂರ ಜನರು ನೀಡಿದ್ದ ದೂರಿನ ಕುರಿತು ಪರಿಶೀಲಿಸಿದರು.

ಜನ ವಾಸಿಸುವ ಪ್ರದೇಶದಲ್ಲಿ ಸಾಮಿಲ್ಗಳನ್ನು ಸ್ಥಾಪಿಸುವ ಹಾಗಿಲ್ಲ. ಜೊತೆಗೆ ಸಾರ್ವಜನಿರಿಗೆ ತೊಂದರೆಯಾಗುತ್ತಿದೆ ಎಂದು ದೂರು ನೀಡಿದರೆ ಅನಿವಾರ್ಯವಾಗಿ ಪಟ್ಟಣದ ಹೊರ ವಲಯದಲ್ಲಿ ತಮ್ಮ ತಮ್ಮ ನಿವೇಶನದಲ್ಲಿ ಪಪಂ ಪರವಾನಗಿ ಮೂಲಕ ಘಟಕ ಸ್ಥಾಪಿಸಿಕೊಳ್ಳಬಹುದಾಗಿದೆ ಎಂದು ಸಾಮಿಲ್ಗಳ ಮಾಲೀಕರಿಗೆ ಸೂಚಿಸಿದರು. ಈ ಕುರಿತು ಪಪಂ ಮುಖ್ಯಾಧಿಕಾರಿಗೆ ಸಾಮಿಲ್ಗಳ ಬಗ್ಗೆ ದಾಖಲಾತಿಗಳನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸಿದರು. ಸಾಮಿಲ್ ದಾಖಲಾತಿಗಳು ಸರಿ ಇರದೆ ಹೋಗಿದ್ದರೆ ಕೆಇಬಿಯವರಿಗೆ ಹೇಳಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸವಂತೆ ತಿಳಿಸಬೇಕೆಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next