ಕಾಬೂಲಿವಾಲ! ಇದು ರವೀಂದ್ರನಾಥ ಟ್ಯಾಗೋರ್‌ರ ಸುಪ್ರಸಿದ್ಧ ನಾಟಕ. ಇದನ್ನು ಕಣ್ತುಂಬಿಕೊಳ್ಳುವ ಸದಾವಕಾಶ ಒದಗಿಬಂದಿದೆ. ಆತ ಆಫ^ನ್‌ನ ಒಬ್ಬ ಪಠಾಣ್. ಡ್ರೈಫ್ರೂಟ್ಸ್ ಮಾರಲು ಕಲ್ಕತ್ತಾಗೆ ಬರುತ್ತಾನೆ. ಅಲ್ಲಿ ಮಿನಿ ಎಂಬ ಪುಟಾಣಿ ಜತೆಗೆ ಆತನ ಸ್ನೇಹ ಬೆಳೆಯುತ್ತದೆ. ಆರಂಭದಲ್ಲಿ ಕಾಬೂಲಿವಾಲನನ್ನು ನೋಡಿ, “ಮಕ್ಕಳ ಕಳ್ಳ’ ಎಂದು ಹೆದರಿಕೊಳ್ಳುವ ಮಿನಿ, ತದನಂತರದಲ್ಲಿ ಆತನನ್ನು ವಿಪರೀತ ಹಚ್ಚಿಕೊಳ್ಳುವಳು. ಒಂದು ದಿನ ಸಾಲದ ವಿಚಾರದಲ್ಲಿ ಅನ್ಯಾಯಕ್ಕೊಳಗಾಗುವ ಕಾಬೂಲಿವಾಲ, ಇನ್ನೊಬ್ಬ ವ್ಯಕ್ತಿಗೆ ಹಲ್ಲೆ ಮಾಡಿ, ಅಪರಾಧಿಯಾಗುತ್ತಾನೆ. ಮಿನಿಯ ಕಣ್ಮುಂದೆಯೇ ಆತ ಜೈಲುಪಾಲಾಗುತ್ತಾನೆ. ಹಲವು ವರ್ಷಗಳ ನಂತರ ಜೈಲಿನಿಂದ ವಾಪಸಾದ ಕಾಬೂಲಿವಾಲ, ಮದುವೆಯ ಕ್ಷಣಕ್ಕೆ ಕಾತರಿಸಿ, ಮಾವನ ಮನೆಗೆ ಹೊರಟು ನಿಂತ ಮಿನಿಯ ಭೇಟಿಯೇ ಒಂದು ಕೌತುಕ. ಬಿಡುವು ಮಾಡಿಕೊಂಡು, ಈ ನಾಟಕಕ್ಕೆ ಸಾಕ್ಷಿಯಾಗಿ…
ಎಲ್ಲಿ?: ಲಾಹೇ ಲಾಹೇ, 80 ಅಡಿ ರಸ್ತೆ, ಇಂದಿರಾನಗರ
ಯಾವಾಗ?: ಆಗಸ್ಟ್ 26, ಭಾನುವಾರ, ಸಂಜೆ 5.30