Advertisement

ತೆರೆಮೇಲೆ ಮತ್ತೆ ‘ಟಗರು’: ಶಿವಣ್ಣನ ಹಿಟ್‌ ಸಿನಿಮಾ ರೀ-ರಿಲೀಸ್‌

11:15 AM Sep 02, 2021 | Team Udayavani |

ಎಲ್ಲ ಅಂದುಕೊಂಡಂತೆ ನಡೆದಿದ್ದರೆ, ಇದೇ ಸೆ.10 ರಂದು ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಹ್ಯಾಟ್ರಿಕ್‌ ಹೀರೋ ಶಿವರಾಜ ಕುಮಾರ್‌ ಅಭಿನಯದ ಬಹು ನಿರೀಕ್ಷಿತ “ಭಜರಂಗಿ-2′ ಚಿತ್ರ ತೆರೆಗೆ ಬರಬೇಕಿತ್ತು. ಶಿವರಾಜ ಕುಮಾರ್‌ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟನ ಹೊಸಚಿತ್ರ ಬಿಡುಗಡೆಯನ್ನು ಎದುರು ನೋಡುತ್ತಿದ್ದರು.

Advertisement

ಆದರೆ ಸದ್ಯದ ಮಟ್ಟಿಗೆಕೋವಿಡ್‌ ಭಯ ಮತ್ತು ಥಿಯೇಟರ್‌ಗಳಲ್ಲಿ ಶೇಕಡ ನೂರರಷ್ಟು ಪ್ರೇಕ್ಷಕರ ಪ್ರವೇಶಾವಕಾಶಕ್ಕೆ ಅನುಮತಿ ಸಿಗದಕಾರಣ ಚಿತ್ರತಂಡ ಅನಿರ್ಧಿಷ್ಟಾವಧಿಗೆ “ಭಜರಂಗಿ-2′ ಬಿಡುಗಡೆಯನ್ನು ಮುಂದೂಡಿದೆ. ಇನ್ನು ತಮ್ಮ ನೆಚ್ಚಿನ ನಟನ ಸಿನಿಮಾ ಬಿಡುಗಡೆಯಾಗುತ್ತಿಲ್ಲ ಎಂಬ ಬೇಸರದಲ್ಲಿರುವ ಶಿವಣ್ಣನ ಫ್ಯಾನ್ಸ್‌ ಮುಂದೆ ಅವರದ್ದೇ ಮತ್ತೂಂದು ಸೂಪರ್‌ ಹಿಟ್‌ ಸಿನಿಮಾ “ಟಗರು’ ರೀ-ರಿಲೀಸ್‌ ಆಗುತ್ತಿದೆ.

ಇದನ್ನೂ ಓದಿ:ಇಂದು ಸುದೀಪ್‌ ಬರ್ತ್‌ಡೇ: ಕೋವಿಡ್‌ ಆತಂಕದಿಂದ ಅದ್ಧೂರಿ ಆಚರಣೆಯಿಲ್ಲ

ಹೌದು, ಇದೇ ಸೆ.10 ರಂದು “ಟಗರು’ ಸಿನಿಮಾ ಮತ್ತೆ ಬಿಡುಗಡೆಯಾಗುತ್ತಿದೆ. ಬೆಂಗಳೂರಿನ ಗಾಂಧಿನಗರದಕೆ.ಜಿ ರಸ್ತೆಯಲ್ಲಿರುವ ತ್ರಿವೇಣಿ ಚಿತ್ರಮಂದಿರದಲ್ಲಿ “ಟಗರು’ ಮತ್ತೆ ತೆರೆಕಾಣುತ್ತಿದೆ.

“ಭಜರಂಗಿ-2′ ಚಿತ್ರ ಹಬ್ಬದ ಸಂದರ್ಭದಲ್ಲಿ ತೆರೆಕಾಣಲು ಸಾಧ್ಯವಾಗದಿದ್ದಕಾರಣ, ಅದೇ ಸಂದರ್ಭದಲ್ಲಿ ಅಭಿಮಾನಿಗಳಿಗಾಗಿ “ಟಗರು’ ರೀ-ರಿಲೀಸ್‌ ಮಾಡಲಾಗುತ್ತಿದೆ. ಈಗಾಗಲೇ “ಟಗರು’ ಮರು ಬಿಡುಗಡೆಗಾಗಿ ತಯಾರಿ ನಡೆದಿದ್ದು, ಹಬ್ಬದ ಸಂದರ್ಭದಲ್ಲಿ ಶಿವಣ್ಣ ಹೊಸ ಸಿನಿಮಾ ನೋಡಲಾಗುತ್ತಿಲ್ಲ ಎಂಬ ಬೇಸರದ ನಡುವೆಯೇ “ಟಗರು’ ಮರು ಬಿಡುಗಡೆ ಫ್ಯಾನ್ಸ್‌ಗೆ ಒಂದಷ್ಟು ಖುಷಿ ತಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next