Advertisement

ಕೋವಿಡ್ 19 ನಿಯಂತ್ರಣ ತಪ್ಪಿಸಿದ ತಬ್ಲೀಘಿ ಸಂಘಟನೆ

06:11 PM Apr 11, 2020 | Suhan S |

ನೆಲಮಂಗಲ: ದೇಶದಲ್ಲಿ  ಕೋವಿಡ್ 19 ಸಂಪೂರ್ಣ ನಿಯಂತ್ರಣಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ತಬ್ಲಿ  ಸಂಘಟನೆ ಮಾಡಿದರ ಯಡವಟ್ಟಿನಿಂದ ಪರಿಸ್ಥಿತಿ ಕಷ್ಟಕರ ವಾಗಿದೆ. ಲಾಕ್‌ಡೌನ್‌ ಮುಂದುವರಿಸುವ ಅನಿವಾರ್ಯವಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಬೇಸರ ವ್ಯಕ್ತಪಡಿಸಿದರು.

Advertisement

ಪಟ್ಟಣದ ಬಸವಣ್ಣದೇವರ ಮಠದ ಉಚಿತ ಊಟ ಯಾರಿಸುವ ಕೇಂದ್ರಕ್ಕೆ ಭೇಟಿ ನೀಡಿ ಅಕ್ಕಿ, ಬೆಳೆ ವಿತರಣೆ ಮಾಡಿ ಮಾತನಾಡಿದರು. ತಾಲೂಕಿನ ಕೂಲಿ ಕಾರ್ಮಿಕರಿಗೆ, ಬಡಜನರಿಗೆ ಹಾಗೂ ನಿರ್ಗತಿಕರಿಗೆ ಬಸವಣ್ಣ ದೇವರ ಮಠದಲ್ಲಿ ಶ್ರೀ ಸಿದ್ಧಲಿಂಗ ಶ್ರೀಗಳ ಮಾರ್ಗದರ್ಶನದಲ್ಲಿ ಪ್ರತಿನಿತ್ಯ 2 ಸಾವಿರ ಜನರಿಗೆ ಊಟ ಸಿದ್ಧಮಾಡಿ ವಿತರಣೆ ಮಾಡಲಾಗುತ್ತಿದೆ. 250 ಕೆ.ಜಿ. ಅಕ್ಕಿ ಹಾಗೂ 50 ಕೆ.ಜಿ. ಬೆಳೆ ನೀಡಿ ಅವರಿಗೆ ಕೈಜೋಡಿಸಿದ್ದೇವೆ. ದೊಡ್ಡೇರಿ, ಕೊಡಗಿಬೊಮ್ಮನಹಳ್ಳಿ ಸೇರಿ ದಂತೆ ಕೆಲವು ಕೂಲಿ ಕಾರ್ಮಿಕರಿಗೆ ಆಹಾರದ ಕಿಟ್‌ ವಿತರಣೆ ಮಾಡಲಿದ್ದೇವೆ ಎಂದರು.

ಡಿಕೆ ಹೇಳಿಕೆ ಬೆಂಬಲ: ರಾಜ್ಯದ ಕೆಲವು ಯೋಜನೆಗಳನ್ನು ಕೈಬಿಟ್ಟು ಆದರ ಹಣವನ್ನು ಕೋವಿಡ್ 19  ನಿಯಂತ್ರಣಕ್ಕೆ ಬಳಸಿ ಕೊಂಡರೆ ಉತ್ತಮ ಎಂಬುದಾಗಿ ಸರಕಾರಕ್ಕೆ ಸಲಹೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಹೇಳಿಕೆಗೆ ಸಂಸದೆ ಬೆಂಬಲ ಸೂಚಿಸಿದರು. ಬಸವಣ್ಣ ದೇವರ ಮಠದ ಶ್ರೀ ಸಿದ್ಧಲಿಂಗ ಶ್ರೀ ಮಾತನಾಡಿ, ಪ್ರತಿನಿತ್ಯ 2 ಸಾವಿರ ಜನರಿಗೆ ತಾಲೂಕಾದ್ಯಂತ ಆಹಾರ ವಿತರಣೆ ಮಾಡಲಾಗುತ್ತಿದೆ. ನಮಗೆ ಸಹಕಾರ ನೀಡಿದ ಸಂಸದೆ ಶೋಭ ಕರಂದ್ಲಾಜೆ ಅವರಿಗೆ ಧನ್ಯವಾದಗಳು ಎಂದರು.

ತಹಶೀಲ್ದಾರ್‌ ಎಂ.ಶ್ರೀನಿವಾಸಯ್ಯ, ಬಿಇಒ ರಮೇಶ್‌, ಮಾಜಿ ಶಾಸಕ ಎಂ.ವಿ ನಾಗರಾಜು, ಎನ್‌ಪಿಎ ಅಧ್ಯಕ್ಷ ಮಲ್ಲಯ್ಯ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣಪ್ಪ, ವಿರಶೈವ ಮಹಾಸಭಾ ಅಧ್ಯಕ್ಷ ಶಾಂತಕುಮಾರ್‌ ಖಂಜಾಚಿ ಸತೀಶ್‌, ರೇಟರಿ ಮಾಜಿ ಅಧ್ಯಕ್ಷ ಹರೀಶ್‌, ಮುಖಂಡರಾದ ಮಾರಗೊಂಡನಹಳ್ಳಿ ಪ್ರಮೋದ್‌, ಹ್ಯಾಡಾಳ್‌ ಹರ್ಷ, ಪುನೀತ್‌, ಮಂಜುನಾಥ್‌, ಸುಗ್ಗರಾಜು, ಜ್ಞಾನೇಶ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next