Advertisement

ತಬ್ಲಿಘಿ ಮುಖ್ಯಸ್ಥ ಮೌಲಾನಾ ಸಾದ್‌ ವಿರುದ್ಧ ಜನಾಂಗೀಯ ಹತ್ಯೆ ಪ್ರಕರಣ ದಾಖಲು

11:42 AM Apr 16, 2020 | Hari Prasad |

ಹೊಸದಿಲ್ಲಿ: ದೆಹಲಿಯ ನಿಜಾಮುದ್ದೀನ್‌ನಲ್ಲಿ ಲಾಕ್‌ ಡೌನ್‌ನ ನಡುವೆಯೂ ಅತಿ ದೊಡ್ಡ ಧಾರ್ಮಿಕ ಸಮಾವೇಶ ನಡೆಸಿದ್ದ ‘ತಬ್ಲೀಘಿ -ಎ-ಜಮಾತ್‌’ ಸಂಘಟನೆಯ ಮುಖ್ಯಸ್ಥ ಮೌಲಾನಾ ಸಾದ್‌ ವಿರುದ್ಧ ‘ಶಿಕ್ಷಾರ್ಹವಾದ ಜನಾಂಗೀಯ ಹತ್ಯೆ’ ಪ್ರಕರಣವನ್ನು ದೆಹಲಿ ಪೊಲೀಸರು ದಾಖಲಿಸಿದ್ದಾರೆ.

Advertisement

ಇದಲ್ಲದೆ, ಸಮಾವೇಶಕ್ಕಾಗಿ ವಿದೇಶಗಳಿಂದ ಬಂದು ಇನ್ನೂ ಭಾರತದಲ್ಲೇ ತಲೆ ಮರೆಸಿಕೊಂಡಿರುವ 1,890 ತಬ್ಲೀಘಿಗಳ ವಿರುದ್ಧ ಲುಕ್‌ ಔಟ್‌ ಅಧಿಸೂಚನೆ ಜಾರಿಗೊಳಿಸಲಾಗಿದೆ.

ಮಾರ್ಚ್‌ ಮಧ್ಯಭಾಗದಲ್ಲಿ ನಡೆದಿದ್ದ ಈ ಸಮಾವೇಶದಲ್ಲಿ ಭಾಗಿಯಾಗಿದ್ದ 9000 ತಬ್ಲೀಘಿ  ಸದಸ್ಯರಿಂದ ದೇಶದಲ್ಲಿ ಕೋವಿಡ್ ಸೋಂಕು ಮತ್ತಷ್ಟು ವೇಗವಾಗಿ ಹರಡಲು ಕಾರಣವಾಯಿತು. ಈ ಹಿನ್ನೆಲೆಯಲ್ಲಿ, ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಈ ನಡುವೆ, ನಿಜಾಮುದ್ದೀನ್‌ ಸಮಾವೇಶದಲ್ಲಿ 2041 ವಿದೇಶಿಗರು ಭಾಗವಹಿಸಿದ್ದರು ಎಂದು ಹೇಳಲಾಗಿದೆ. ಇವರಲ್ಲಿ 9 ಮಂದಿ ಚೀನದವರೆಂದೂ ವಾಹಿನಿಯೊಂದು ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next