Advertisement

Table Tennis; 24ನೇ ವಯಸ್ಸಿನಲ್ಲೇ ಟೇಬಲ್‌ ಟೆನ್ನಿಸ್‌ ಗೆ ವಿದಾಯ ಹೇಳಿದ ಅರ್ಚನಾ ಕಾಮತ್

11:53 PM Aug 22, 2024 | Team Udayavani |

ಮುಂಬೈ: ಇತ್ತೀಚೆಗಷ್ಟೇ ಮುಗಿದ ಪ್ಯಾರಿಸ್‌ ಒಲಿಂಪಿಕ್ಸ್‌ ನಲ್ಲಿ (Paris Olympics) ಭಾರತದ ಟೇಬಲ್‌ ಟೆನ್ನಿಸ್‌ (Table Tennis) ತಂಡವು ಕ್ವಾರ್ಟರ್‌ ಫೈನಲ್‌ ತಲುಪಿ ಇತಿಹಾಸ ಬರೆದಿತ್ತು. ಕ್ವಾರ್ಟರ್‌ ಫೈನಲ್‌ ನಲ್ಲಿ ಭಾರತ ಟೇಬಲ್‌ ಟೆನ್ನಿಸ್‌ ತಂಡವು ಜರ್ಮನಿ ವಿರುದ್ದ ಸೋಲು ಕಂಡಿತ್ತು. ಈ ತಂಡದಲ್ಲಿದ್ದ ಕನ್ನಡತಿ ಅರ್ಚನಾ ಕಾಮತ್‌ (Archana Kamath) ಅವರು ಕ್ರೀಡೆಗೆ ವಿದಾಯ ಹೇಳಿದ್ದಾರೆ.

Advertisement

2028 ರ ಲಾಸ್‌ ಏಂಜಲೀಸ್ ಗೇಮ್ಸ್‌ ನಲ್ಲಿ ಪದಕದ ಯಾವುದೇ ಗ್ಯಾರಂಟಿ ಇಲ್ಲದಿರುವುದರಿಂದ, ಯುವ ಆಟಗಾರ್ತಿ ವೃತ್ತಿಪರವಾಗಿ ಟೇಬಲ್ ಟೆನಿಸ್ ಅನ್ನು ತ್ಯಜಿಸಲು ಮತ್ತು ಬದಲಿಗೆ ವಿದೇಶದಲ್ಲಿ ಅಧ್ಯಯನ ಮಾಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಪ್ಯಾರಿಸ್ ಗೇಮ್ಸ್‌ನಿಂದ ಮನೆಗೆ ಹಿಂದಿರುಗಿದ ನಂತರ, 24 ವರ್ಷ ವಯಸ್ಸಿನ ಕಾಮತ್, ಮುಂದಿನ ಪಂದ್ಯಗಳಲ್ಲಿ ಪದಕ ಗಳಿಸುವ ಸಾಧ್ಯತೆಗಳ ಬಗ್ಗೆ ತನ್ನ ತರಬೇತುದಾರ ಅನ್ಶುಲ್ ಗಾರ್ಗ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.

“ಪದಕದ ಅವಕಾಶ ಕಷ್ಟ ಎಂದು ನಾನು ಅವಳಿಗೆ ಹೇಳಿದ್ದೆ. ಅದು ಅತ್ಯಂತ ಕಠಿಣ ಪರಿಶ್ರಮ ಬೇಡುವ ಕೆಲಸ. ಅವಳು ವಿಶ್ವ ರ್ಯಾಂಕಿಂಗ್‌ ನಲ್ಲಿ 100ಕ್ಕಿಂತ ಹೊರಗಿದ್ದಾಳೆ. ಆದರೆ ಇತ್ತೀಚಿನ ತಿಂಗಳಲ್ಲಿ ಅವಳು ತುಂಬಾ ಸುಧಾರಣೆ ಕಂಡಿದ್ದಾಳೆ. ಆದರೆ ಅವಳು ಅದಾಗಲೇ ನಿರ್ಧಾರ ಮಾಡಿದ್ದಳು. ಒಮ್ಮೆ ನಿರ್ಧಾರ ಮಾಡಿದವರನ್ನು ಮತ್ತೆ ಬದಲಾವಣೆ ಮಾಡುವುದು ಕಷ್ಟದ ಕೆಲಸ” ಎಂದು ಕೋಚ್‌ ಹೇಳಿಕೊಂಡಿದ್ದಾರೆ.

Advertisement

ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಚನಾ ಆಯ್ಕೆಯು ಚರ್ಚೆಯ ಚರ್ಚೆಯಾಗಿತ್ತು, ಅದರಲ್ಲೂ ವಿಶೇಷವಾಗಿ ವಿಶ್ವ ನಂ. 1 ಸನ್ ಯಿಂಗ್ಶಾ ಅವರನ್ನು ಸೋಲಿಸಿದ ಐಹಿಕಾ ಮುಖರ್ಜಿಯ ಬದಲಾಗಿ ಅರ್ಚನಾ ಅವಕಾಶ ಪಡೆದಿದ್ದರು.

ಆರ್ಥಿಕವಾಗಿ ಸುಭದ್ರ

ಉಡುಪಿ ಮೂಲದ ಬೆಂಗಳೂರಿನ ಅರ್ಚನಾ ಕಾಮತ್‌ ಅವರು ಆರ್ಥಿಕವಾಗಿ ಸುಭದ್ರವಾದ ವೈದ್ಯರ ಕುಟುಂಬದಿಂದ ಬಂದವರು. ಅವರ ಹೆತ್ತವರು ನೇತ್ರಶಾಸ್ತ್ರಜ್ಞರು. ಅವರ ಸಹೋದರ ಪ್ರಸ್ತುತ ಅಮೆರಿಕದಲ್ಲಿ ಏರೋಸ್ಪೇಸ್‌ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಕಲಿಯುತ್ತಿದ್ದಾರೆ.

ಇಂಟರ್‌ನ್ಯಾಶನಲ್‌ ಸಂಬಂಧದ ವಿಷಯದಲ್ಲಿ ಈಗಾಗಲೇ ಸ್ನಾತಕೋತ್ತರ ಪದವಿ ಪಡೆದಿರುವ ಅರ್ಚನಾ ಮಿಚಿಗನ್‌ನಲ್ಲಿ ಇನ್ನೊಂದು ಮಾಸ್ಟರ್ ಪದವಿ ಪಡೆಯಲು ಉತ್ಸುಕರಾಗಿದ್ದಾರೆ.
ಶಾಲಾ ದಿನಗಳಿಂದಲೂ ಓದಿನಲ್ಲಿ ಬಹಳಷ್ಟು ಆಸಕ್ತಿ ವಹಿಸಿದ್ದ ಅವರು 10 ಮತ್ತು 12ನೆ ತರಗತಿಯ ಪರೀಕ್ಷೆಯಲ್ಲಿ ಅನುಕ್ರಮವಾಗಿ ಶೇಕಡಾ 98.7 ಮತು 97 ಅಂಕ ಗಳಿಸಿ ಅಗ್ರಸ್ಥಾನ ಪಡೆದಿದ್ದರು.

ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದ ಅವರು ಎರಡು ವರ್ಷಗಳ ಅನಂತರ ಅರ್ಥಶಾಸ್ತ್ರಜ್ಞರಾಗಿ ಭಾರತಕ್ಕೆ ಮರಳಲು ಮತ್ತು ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಬಯಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next