Advertisement

ಸುಜೀರ್‌ ಮಲ್ಲಿ ಜುಮಾ ಮಸೀದಿ: ಏಕದಿನ ಪ್ರಭಾಷಣ

02:26 PM Mar 13, 2017 | Team Udayavani |

ಬಂಟ್ವಾಳ : ಮರಣದ ಬಳಿಕ ಅಂತ್ಯಸಂಸ್ಕಾರ ಮಾಡಲ್ಪಡುವ ದಫನ ಭೂಮಿಗೆ ಇಸ್ಲಾಮಿನಲ್ಲಿ ಬಹುತೇಕ ಪ್ರಾಮುಖ್ಯತೆ ಇದೆ. ನಿಧನರಾದವರ ದಫನ ಕಾರ್ಯವು ಆ ಜಮಾಅತ್‌ನ ಪ್ರತಿಯೊಬ್ಬರ ಕರ್ತವ್ಯವೂ ಆಗಿದೆ. ಇದಕ್ಕಾಗಿ ಪ್ರತೀ ಜಮಾಅತ್‌ನಲ್ಲೊಂದು ದಫನ ಭೂಮಿಯ ಅಗತ್ಯತೆ ಇದೆ ಎಂದು ಕೇರಳ ಕಣ್ಣೂರಿನ ವಾಗ್ಮಿ ನಿಝಾಮುದ್ದೀನ್‌ ಬಾಖವಿ ಹೇಳಿದರು.

Advertisement

ಅವರು ಮಾ. 10ರಂದು ಮಾರಿಪಳ್ಳ ಸುಜೀರು ಮಲ್ಲಿ ಹೆ„ದ್ರೋಸಿಯಾ ಜುಮಾ ಮಸೀದಿಯ ಆಶ್ರಯದಲ್ಲಿ ದಫನ ಭೂಮಿ ಖರೀದಿಯ ಸಹಾಯಾರ್ಥವಾಗಿ ಶಂಸುಲ್‌ ಉಲಮಾ ವೇದಿಕೆಯಲ್ಲಿ ನಡೆದ ಬೃಹತ್‌ ಏಕದಿನ ಧಾರ್ಮಿಕ ಮತ ಪ್ರಭಾಷಣದಲ್ಲಿ ಮಾತನಾಡಿದರು.

ಜಮಾಅತ್‌ಗೊಂದು ದಫನ ಭೂಮಿ ಹೊಂದುವುದು ಇಂದಿನ ಕಾಲದಲ್ಲಿ ದುಬಾರಿಯಾಗಿದೆ. ದೇವರು ನೀಡಿದ ಸಂಪತ್ತಿನ ಅಲ್ಪ ಭಾಗವನ್ನಾದರೂ ದಾನ ಮಾಡುವುದರ ಮೂಲಕ ಉಳ್ಳವರೂ ಇಲ್ಲದವರೂ ಸಹಕಾರ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮವನ್ನು ಸಮಸ್ತ ಕೇರಳ ಮುಶಾವರದ ಉಪಾಧ್ಯಕ್ಷ ಅಬ್ದುಲ್‌ ಜಬ್ಟಾರ್‌ ಉಸ್ತಾದ್‌ ಮಿತ್ತಬೆ„ಲ್‌ ಉದ್ಘಾಟಿಸಿದರು. ಸುಜೀರ್‌ ಮಲ್ಲಿ ಹೆ„ದ್ರೋಶಿಯಾ ಜುಮಾ ಮಸೀದಿಯ ಗೌರವಾಧ್ಯಕ್ಷ ಮೌಲಾನ ಅಬ್ದುಲ್‌ ರಝಾಕ್‌  ಮಲೇಶ್ಯಾ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಅಬ್ದುಲ್‌ ಜಬ್ಟಾರ್‌ ಉಸ್ತಾದ್‌ ಮಿತ್ತಬೆ„ಲ್‌, ಹಿದಾಯ ಫೌಂಡೇಶನ್‌ ಸ್ಥಾಪಕಾಧ್ಯಕ್ಷ, ಸಮಾಜ ಸೇವಕ ಖಾಸಿಂ ಅಹ್ಮದ್‌, ಉದ್ಯಮಿ ಟಿ.ಕೆ.ಬಶೀರ್‌, ಅಬ್ದುಲ್‌ ರಝಾಕ್‌ ಮಲೇಶ್ಯಾ, ಕಾರ್ಯಕ್ರಮದ ಸ್ಥಳ ದಾನಿಯವರನ್ನು ಸಮ್ಮಾನಿಸಲಾಯಿತು.ಸಮಸ್ತ ಕಾಸರಗೋಡು ಜತೆ ಕಾರ್ಯದರ್ಶಿ ಚೆಂಗಳಂ ಅಬ್ದುಲ್‌ ಫೆ„ಝಿ, ಮಾರಿಪಳ್ಳ ಬದ್ರಿಯ್ಯಿàನ್‌ ಜುಮಾ ಮಸೀದಿ ಅಧ್ಯಕ್ಷ ಸಿ.ಮಹ್‌ಮೂದ್‌,  ಖತೀಬ್‌ ಖಲೀಲುರ್ರಹ್ಮಾನ್‌ ದಾರಿಮಿ, ಫರಂಗಿಪೇಟೆ ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್‌ ಬಾವ, ಖತೀಬ್‌ ಉಸ್ಮಾನ್‌ ದಾರಿಮಿ ಮೊದಲಾದವರು ಉಪಸ್ಥಿತರಿದ್ದರು.ಮುಹಮ್ಮದ್‌ ಹೆ„ಮಾನ್‌ ಕಿರಾಅತ್‌ ಪಠಿಸಿದರು. ದಾರಿಮೀಸ್‌ ಅಸೋಸಿಯೇಶನ್‌ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಮಾಹಿನ್‌ ದಾರಿಮಿ ಪಾತೂರು ಸ್ವಾಗತಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next