Advertisement

ಮನಮುಟ್ಟಿದ ತಬಲಾ ಲಯಕಾರಿ

06:01 PM Jan 31, 2020 | mahesh |

ಮಂಗಳೂರಿನ ಧ್ಯಾನಸಂಗೀತ ಅಕಾಡೆಮಿ ಕಲಾ ಟ್ರಸ್ಟ್‌ನ ದ್ವಿತೀಯ ವಾರ್ಷಿಕೋತ್ಸವ ಪ್ರಯುಕ್ತ ನಡೆದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತೋತ್ಸವದಲ್ಲಿ ಕಾರವಾರದ ಪಂ| ಚಂದ್ರಕಾಂತ್‌ ಗಡ್ಕರ್‌ ಇವರ ತಬಲಾ ಸೋಲೋ ವಾದನ ನಡೆಯಿತು.

Advertisement

ಫ‌ರೂಕಾಬಾದ್‌ ಘರಾಣೆಯ ವಿಳಂಬಿತ ತೀನ್‌ ತಾಲ್‌ ಲಯ , ಪೇಷ್ಕಾರ್‌, ಕಾಯಿದಾ, ರೇಲಾಗಳನ್ನು ಪ್ರಸ್ತುತ ಪಡಿಸಿದರು. ತಂದೆ ಮತ್ತು ಗುರುಗಳಾದ ವಿಶ್ವನಾಥ್‌ ಗಡ್ಕರ್‌ ಇವರ ಕೆಲವು ವಿಶೇಷ ಧೃತ್‌ ಬಂದಿಶ್‌, ತುಕx, ಚಕ್ರಧಾರ್‌, ಲಗ್ಗಿಗಳಿಂದ ರಂಜಿಸಿದರು. ಜೊತೆಗೆ ಅಜ್ರಡಾ ಮತ್ತು ದಿಲ್ಲಿ ಘರಾಣೆಯ ಅನನ್ಯ ರಚನೆಗಳಲ್ಲೂ ತಮ್ಮ ಪರಿಣತಿಯನ್ನು ಪ್ರದರ್ಶಿಸಿದರು. ತಬಲಾದಲ್ಲಿ ಅವರ ಎಂಟು ವರ್ಷದ ಪುತ್ರ ವಿರಾಜ್‌ ಗಡ್ಕರ್‌ ಮತ್ತು ಶಿಷ್ಯ ಸುಮನ್‌ ದೇವಾಡಿಗ ಸಮರ್ಥವಾಗಿ ಲಯಕಾರಿಯನ್ನು ನಡೆಸಿಕೊಟ್ಟರು. ಹಾರ್ಮೋನಿಯಂನಲ್ಲಿ ಭರತ್‌ ಹೆಗಡೆ ಲೆಹೆರ್‌ ಸಹಕಾರ ನೀಡಿದರು.

– ಪ್ರತಾಪ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next