Advertisement

ಮಗನೊಂದಿಗೆ ತಾರಾ ನಟನೆ

10:25 AM Sep 20, 2019 | Team Udayavani |

ನಟ ಚಿರಂಜೀವಿ ಸರ್ಜಾ ಅಭಿನಯದ ಶಿವಾರ್ಜುನ ಚಿತ್ರ ಕೆಲಸಗಳು ಭರದಿಂದ ನಡೆಯುತ್ತಿದೆ. ಸದ್ಯ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಇದೇ ತಿಂಗಳ ಕೊನೆಗೆ ಚಿತ್ರದ ಬಾಕಿ ಇರುವ ಹಾಡಿನ ಭಾಗದ ಚಿತ್ರೀಕರಣ ನಡೆಸಲಿದೆ. ಇದರ ನಡುವೆಯೇ ಚಿತ್ರತಂಡ ಡಬ್ಬಿಂಗ್‌ ಕಾರ್ಯಗಳಿಗೂ ಚಾಲನೆ ನೀಡಿದ್ದು, ಚಿತ್ರತಂಡದ ಕಡೆಯಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ.

Advertisement

ಅದೇನೆಂದರೆ, ಇದೇ ಮೊದಲ ಬಾರಿಗೆ ನಟಿ ತಾರಾ ಅನುರಾಧ ಮತ್ತು ಅವರ ಪುತ್ರ ಕೃಷ್ಣಾ ಈ ಚಿತ್ರದಲ್ಲಿ ತೆರೆಮೇಲೂ ತಾಯಿ -ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ತಾರಾ ಮತ್ತು ಅವರ ಪುತ್ರ ಕೃಷ್ಣಾ ಅಭಿನಯದ ದೃಶ್ಯದ ಚಿತ್ರೀಕರಣ ಪೂರ್ಣಗೊಂಡಿದ್ದು, ಇದೀಗ ತಾಯಿ-ಮಗ ಒಟ್ಟಾಗಿ ಚಿತ್ರದ ತಮ್ಮ ಪಾತ್ರಗಳಿಗೆ ಡಬ್ಬಿಂಗ್‌ ಶುರು ಮಾಡಿದ್ದಾರೆ.

ಈ ಬಗ್ಗೆ ಮಾತನಾಡುವ ನಿರ್ದೇಶಕ ಶಿವ ತೇಜಸ್‌, ಇದೇ ಮೊದಲ ಬಾರಿಗೆ ತಾರಾ ಅವರ ಪುತ್ರ ನಮ್ಮ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾನೆ. ಈ ಚಿತ್ರದಲ್ಲಿ ತಾರಾ ಅವರ ಸಂಪೂರ್ಣ ಕುಟುಂಬವೇ ಕೆಲಸ ಮಾಡಿದೆ. ತಾರಾ ಮತ್ತು ಅವರ ಪುತ್ರ ತೆರೆಮೇಲೆ ಕಾಣಿಸಿಕೊಂಡರೆ, ತಾರಾ ಅವರ ಪತಿ ವೇಣು ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ ಎನ್ನುತ್ತಾರೆ. ಅಂದಹಾಗೆ, ಈ ಚಿತ್ರ ಅಕ್ಟೋಬರ್‌ ಕೊನೆಗೆ ತೆರೆಗೆ ಬರುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next