Advertisement

ಭೋಪಾಲ್ ನಲ್ಲಿ ನಡೆಯಲಿದೆ ಅಂಧರ ಟಿ20 ವಿಶ್ವಕಪ್ ಗೆ ತರಬೇತಿ ಶಿಬಿರ

10:12 AM Aug 24, 2022 | Team Udayavani |

ಬೆಂಗಳೂರು ; ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆ (ಸಿಎಬಿಐ) ಹಾಗೂ ಸಮರ್ಥನಂ ಟ್ರಸ್ಟ್ ವತಿಯಿಂದ 29 ಆಟಗಾರರಿಗೆ 12 ದಿನಗಳ ಕಾಲ ತರಬೇತಿ ಶಿಬಿರ ಆಯೋಜಿಸಲಾಗಿದೆ.

Advertisement

ಸೆಪ್ಟೆಂಬರ್- ಅಕ್ಟೋಬರ್ ತಿಂಗಳಲ್ಲಿ ಮಧ್ಯ ಪ್ರದೇಶದ ಭೋಪಾಲ್ನಲ್ಲಿರುವ ಫೇಯ್ತ್ ಕ್ರಿಕೆಟ್ ಕ್ಲಬ್ ನಲ್ಲಿ ಈ ಶಿಬಿರ ನಡೆಯಲಿದೆ. ಮುಂಬರುವ 3ನೇ ಟಿ20 ವಿಶ್ವಕಪ್ ಟೂರ್ನಿಗೆ 17 ಸದಸ್ಯರ ತಂಡವನ್ನು ಇದೇ ಸಿಎಐಬಿ ಆಯ್ಕೆ ಮಾಡಲಿದೆ. ಡಿಸೆಂಬರ್ 5 ರಿಂದ 9 ಟಿ20 ವಿಶ್ವಕಪ್ ಟೂರ್ನಿ ನಡೆಯಲಿದ್ದು, 9 ದೇಶಗಳ ತಂಡಗಳು ಭಾಗವಹಿಸಲಿದೆ. ಟೂರ್ನಿಯಲ್ಲಿ 39 ಪಂದ್ಯಗಳು ನಡೆಯಲಿದ್ದು, ಭಾರತದ ವಿವಿಧ ನಗರಗಳಲ್ಲಿ ನಡೆಯಲಿವೆ. ಭಾರತದಲ್ಲಿ ಅಂಧರ ಕ್ರಿಕೆಟ್ಗೆ ಉತ್ತೇಜನ ನೀಡುವ ದೃಷ್ಟಿಯಿಂದ ಹೆಚ್ಚು ನಗರಗಳಲ್ಲಿ ಆಯೋಜಿಸಲಾಗುತ್ತಿದೆ.

3ನೇ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಗೆ ಸಿದ್ಧತೆಗಳು ಆರಂಭಗೊಂಡಿವೆ’ ಎಂದು ಸಿಎಬಿಐ ಅಧ್ಯಕ್ಷರಾದ ಜಿ.ಕೆ.ಮಹಾಂತೇಶ್ ತಿಳಿಸಿದ್ದಾರೆ. ತರಬೇತಿ ಶಿಬಿರ ಆಯೋಜಿಸುವ ಮೂಲಕ ಟೂರ್ನಿಗೆ ಸಹಕರಿಸುತ್ತಿರುವ ಇಂಡಸ್ಲ್ಯಾಂಡ್ ಬ್ಯಾಂಕಿಗೆ ಧನ್ಯವಾದಗಳು, ತರಬೇತಿ ಶಿಬಿರ ಆಯೋಜಿಸುವ ಮೂಲಕ ಪ್ರತಿಭಾನ್ವಿತ ಆಟಗಾರರಿಗೆ ಪ್ರೋತ್ಸಾಹಿಸಿದಂತಾಗುತ್ತದೆ. ಈ ವೇಳೆ ಆಟಗಾರರು ತಾಂತ್ರಿಕವಾಗಿ, ಉತ್ತಮ ಮನಸ್ಥಿತಿಯಲ್ಲಿ ಮುಂಬರುವ ವಿಶ್ವಕಪ್ ಸನ್ನದ್ಧವಾಗಬಹುದು’ ಎಂದು ತಿಳಿಸಿದ್ದಾರೆ.

ತರಬೇತಿ ಶಿಬಿರದಲ್ಲಿ ಭಾಗವಹಿಸುತ್ತಿರುವ 29 ಕ್ರಿಕೆಟಿಗರು :

B1.
1. ಪ್ರವೀಣ್ ಕುಮಾರ್ ಶರ್ಮಾ
2. ಸುಜೀತ್ ಮುಂಡಾ
3. ಮುಖೇಶ್ ಕುಮಾರ್ ರಾವತ್
4. ಅಂಕ ವೆಂಕಟೇಶ್ವರ ರಾವ್
5. ಎಂಡಿ ಜಾಫರ್ ಇಕ್ಬಾಲ್
6. ಓಂಪ್ರಕಾಶ್ ಪಾಲ್
7. ಲಲಿತ್ ಮೀನಾ
8. ನೀಲೇಶ್ ಯಾದವ್
9. ಸೋವೆಂದು ಮಹಾತಾ
10. ಸೋನು ಗೋಲ್ಕರ್

Advertisement

B2
1. ಐ. ಅಜಯ್ ಕುಮಾರ್ ರೆಡ್ಡಿ
2. ವೆಂಕಟೇಶ್ವರ ರಾವ್ ದುನ್ನಾ
3. ಮನೀಶ್ ಎ
4. ನಕುಲ ಬದನಾಯಕ್
5. ಗಂಭೀರ್ ಸಿಂಗ್ ಚೌಹಾಣ್
6. ದೀಪಕ್ ಸಿಂಗ್ ರಾವತ್
7. ಇರ್ಫಾನ್ ದಿವಾನ್
8. ಲೋಕೇಶ
9. ಸುರಜಿತ್ ಘರಾ

B3
1. ದೀಪಕ್ ಮಲಿಕ್
2. ಸುನಿಲ್ ರಮೇಶ್
3. ತೊಂಪಕಿ ದುರ್ಗಾ ರಾವ್
4. ಪ್ರಕಾಶ್ ಜಯರಾಮಯ್ಯ
5. ಸುಖ್ರಾಮ್ ಮಾಝಿ
6. ಅಮಿತ್ ರವಿ
7. ದೀಪಕ್
8. ಮೊಹದ್ ಅಜೀಮ್
9. ಘೇವಾರ್ ರೆಬರಿ
10. ಧಿನಗರ.ಜಿ

Advertisement

Udayavani is now on Telegram. Click here to join our channel and stay updated with the latest news.

Next