Advertisement

ಚರಿತ್ರೆಯನ್ನು ಬೆನ್ನಟ್ಟಿರುವ ಆಸೀಸ್‌: ಇಂದು ಒಮಾನ್‌ ವಿರುದ್ಧ ಮೊದಲ ಪಂದ್ಯ

11:22 PM Jun 05, 2024 | Team Udayavani |

ಬ್ರಿಜ್‌ಟೌನ್‌: ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌, ಏಕದಿನ ವಿಶ್ವಕಪ್‌ ಗೆಲುವಿನ ಬಳಿಕ ಆಸ್ಟ್ರೇಲಿಯವೀಗ ಟಿ20 ವಿಶ್ವಕಪ್‌ ಮೇಲೆ ಕಣ್ಣಿಟ್ಟಿದ್ದು, ನೂತನ ಇತಿಹಾಸದ ಹಾದಿಯಲ್ಲಿದೆ. ಈ ಎಲ್ಲ ಮೂರೂ ಟ್ರೋಫಿಗಳನ್ನು ಏಕಕಾಲದಲ್ಲಿ ತನ್ನದಾಗಿಸಿಕೊಳ್ಳುವ ಅಪೂರ್ವ ಅವಕಾಶವೊಂದು ಕಾಂಗರೂಗಳಿಗೆ ಎದುರಾಗಿದೆ. ಇದರಲ್ಲಿ ಮಿಚೆಲ್‌ ಮಾರ್ಷ್‌ ಪಡೆ ಎಷ್ಟರ ಮಟ್ಟಿಗೆ ಯಶಸ್ವಿಯಾದೀತೆಂಬುದೊಂದು ಕುತೂಹಲ.

Advertisement

ಗುರುವಾರ ಬ್ರಿಜ್‌ಟೌನ್‌ನಲ್ಲಿ ನಡೆಯುವ “ಬಿ’ ಬಣದ ಪಂದ್ಯದಲ್ಲಿ ಆಸೀಸ್‌ ತಂಡ ಒಮಾನ್‌ ವಿರುದ್ಧ ಆಡಲಿದೆ. ಒಮಾನ್‌ಗೆ ಇದು 2ನೇ ಪಂದ್ಯ. ನಮೀಬಿಯಾ ಎದುರಿನ ಪಂದ್ಯವನ್ನು ಟೈ ಮಾಡಿಕೊಂಡು, ಬಳಿಕ ಸೂಪರ್‌ ಓವರ್‌ನಲ್ಲಿ ಸೋತಿತ್ತು. ಆದರೆ ಆಸ್ಟ್ರೇಲಿಯಕ್ಕೆ ಯಾವುದೇ ರೀತಿ ಸಾಟಿಯಾಗದು.

ಅತ್ಯಂತ ವಿಳಂಬವಾಗಿ, 2021ರಲ್ಲಿ ಮೊದಲ ಬಾರಿಗೆ ಟ20 ವಿಶ್ವಕಪ್‌ ಚಾಂಪಿ ಯನ್‌ ಆದ ಆಸ್ಟ್ರೇಲಿಯ, 2022ರ ತವರಿನ ಕೂಟದಲ್ಲಿ ಈ ಕಪ್‌ ಉಳಿಸಿಕೊಳ್ಳುವಲ್ಲಿ ವಿಫ‌ಲವಾಯಿತು. ಅದು ಸೆಮಿಫೈನಲಿಗೂ ಬಾರದೇ ಹೋಯಿತು. ಈ ಬಾರಿಯ ಆಸೀಸ್‌ ತಂಡ ಬಲಿಷ್ಠವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next