Advertisement

T20 World Cup:ಸ್ಕಾಟ್ಲೆಂಡ್‌-ಒಮಾನ್‌ ಮುಖಾಮುಖಿ

10:21 PM Jun 08, 2024 | Team Udayavani |

ಆ್ಯಂಟಿಗುವಾ: ಇಲ್ಲಿನ ಸರ್‌ ವಿವಿಯನ್‌ ರಿಚರ್ಡ್ಸ್‌ ಮೈದಾನದಲ್ಲಿ ನಡೆಯುವ ಟಿ20 ವಿಶ್ವಕಪ್‌ 20ನೇ ಪಂದ್ಯದಲ್ಲಿ ಒಮಾನ್‌ ಮತ್ತು ಸ್ಕಾಟ್ಲೆಂಡ್‌ ತಂಡಗಳು ಮುಖಾಮುಖಿಯಾಗಲಿವೆ. ಗ್ರೂಪ್‌ “ಬಿ’ ಪಂದ್ಯವಿದು.

Advertisement

ಸ್ಕಾಟ್ಲೆಂಡ್‌ ಆಡಿರುವ 2 ಪಂದ್ಯಗಳಲ್ಲಿ 1ರಲ್ಲಿ ಗೆದ್ದಿದೆ. ಇನ್ನೊಂದು ಪಂದ್ಯ ರದ್ದಾಗಿತ್ತು. ಹೀಗಾಗಿ 3 ಅಂಕಗಳಿಸಿರುವ ಸ್ಕಾಟ್ಲೆಂಡ್‌, ಸದ್ಯ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಒಮಾನ್‌ 2ರಲ್ಲಿ ಎರಡೂ ಪಂದ್ಯ ಸೋತು ಕೊನೇ ಸ್ಥಾನದಲ್ಲಿದೆ. ಹೀಗಾಗಿ, ಇಂದಿನ ಪಂದ್ಯವನ್ನೂ ಗೆದ್ದು ಅಗ್ರ ಸ್ಥಾನದಲ್ಲೇ ಮುಂದುವರಿಯುವ ವಿಶ್ವಾಸದಲ್ಲಿ ಸ್ಕಾಟ್ಲೆಂಡ್‌ ತಂಡವಿದೆ.

ಅಂಕಣಗುಟ್ಟು: ಆ್ಯಂಟಿಗುವಾದ ಸರ್‌ ವಿವಿಯನ್‌ ರಿಚರ್ಡ್ಸ್‌ ಮೈದಾನ, ಬ್ಯಾಟರ್‌-ಬೌಲರ್‌ ಇಬ್ಬರಿಗೂ ನೆರವಾಗುತ್ತದೆ. ಆದರೆ ಕೊಂಚ ಬ್ಯಾಟರ್‌ಗಳಿಗೇ ಹೆಚ್ಚು ಅನುಕೂಲ ಒದಗಿಸುತ್ತದೆ ಎಂದರೆ ತಪ್ಪಿಲ್ಲ. ಈ ವಿಶ್ವಕಪ್‌ನಲ್ಲಿ ಮೊದಲ ಪಂದ್ಯ ಈ ತಾಣದಲ್ಲಿ ನಡೆಯುತ್ತಿದೆ. ಈ ಮೈದಾನದಲ್ಲಿ ಮೊದಲ ಇನಿಂಗ್ಸ್‌ ಸರಾಸರಿ ಸ್ಕೋರ್‌ 140.

ಸ್ಥಳ: ಸರ್‌ ವಿವಿಯನ್‌ ರಿಚರ್ಡ್ಸ್‌ ಮೈದಾನ, ಆ್ಯಂಟಿಗುವಾ

ಪಂದ್ಯ ಆರಂಭ: ರಾತ್ರಿ 10.30

Advertisement
Advertisement

Udayavani is now on Telegram. Click here to join our channel and stay updated with the latest news.

Next