Advertisement

T20 World Cup; ಭಾರತ-ಪಾಕ್‌ ಪಂದ್ಯದ ಟಿಕೆಟ್‌ ದರ ದುಬಾರಿ

01:03 AM Jun 08, 2024 | Team Udayavani |

ನ್ಯೂಯಾರ್ಕ್‌: ರವಿವಾರದ ಭಾರತ-ಪಾಕಿಸ್ಥಾನ ನಡುವಿನ ಟಿ20 ವಿಶ್ವಕಪ್‌ ಮುಖಾಮುಖೀಗಾಗಿ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಈ ಪಂದ್ಯದ ಟಿಕೆಟ್‌ ಬೆಲೆ ದುಬಾರಿಯಾಗಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ.
ಈ ಪಂದ್ಯಕ್ಕೆ ಐಸಿಸಿ ಜಾಹೀರಾತು ಪ್ರಕಟಿಸಿದ ಬೆನ್ನಲ್ಲೇ 20 ಲಕ್ಷಕ್ಕೂ ಅಧಿಕ ಜನರಿಂದ ಟಿಕೆಟ್‌ಗೆ
ಬೇಡಿಕೆ ಬಂದಿತ್ತು. ಹೀಗಾಗಿ ಎಲ್ಲರಿಗೂ ಟಿಕೆಟ್‌ ಒದಗಿಸುವುದು ಕಷ್ಟವಾಯಿತು ಎಂದು ಅಮೆರಿಕ ಕ್ರಿಕೆಟ್‌ ಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ.

Advertisement

ಈ ಪಂದ್ಯಕ್ಕೆ 300 ಡಾಲರ್‌ (25,000 ರೂ.) ಟಿಕೆಟ್‌ ಕೂಡ ಇದೆ. ಆದರೆ ಈ ಸೀಟ್‌ ಗಳ ಪ್ರಮಾಣ ಕಡಿಮೆ ಇದ್ದು, ಇವು ಈಗಾಗಲೇ ಮಾರಾಟವಾಗಿವೆ. ಈಗ ಉಳಿದಿ ರುವುದು ಐಶಾರಾಮಿ ಟಿಕೆಟ್‌ಗಳು ಮಾತ್ರ. ಇದರ ಬೆಲೆ 2,500 -10,000 ಡಾಲರ್‌ನಷ್ಟಿದೆ (2.8 ಲಕ್ಷ ರೂ.ನಿಂದ 8.3 ಲಕ್ಷ ರೂ.).

Advertisement

Udayavani is now on Telegram. Click here to join our channel and stay updated with the latest news.

Next