Advertisement

Ajinkya Rahane: ಲೀಸೆಸ್ಟರ್‌ ಶೈರ್‌ ಪರ ಕೌಂಟಿ ಆಡಲಿದ್ದಾರೆ ರಹಾನೆ

09:44 PM Jun 27, 2024 | Team Udayavani |

ಲೀಸೆಸ್ಟೆರ್‌ಶೈರ್‌: ಭಾರತ ತಂಡದ ಮಾಜಿ ನಾಯಕ ಅಜಿಂಕ್ಯ ರಹಾನೆ ಅವರು ಇಂಗ್ಲಿಷ್‌ ಕೌಂಟಿ ಲೀಸೆಸ್ಟರ್‌ಶೈರ್‌ ಪರ ಆಡಲು ಸಿದ್ಧವಾಗಿದ್ದಾರೆ. ಈ ಋತುವಿನ ಎರಡನೇ ಭಾಗದಲ್ಲಿ ಅವರು ಕೌಂಟಿ ಪರ ಆಡಲಿದ್ದಾರೆ ಎಂದು ಕ್ಲಬ್‌ ತನ್ನ ಪ್ರಕಟಣೆಯಲ್ಲಿ ಹೇಳಿದೆ.  ಒಪ್ಪಂದದ ಪ್ರಕಾರ ರಹಾನೆ ಅವರು ಸದ್ಯ ಸಾಗುತ್ತಿರುವ ಕೌಂಟಿ ಚಾಂಪಿಯನ್‌ಶಿಪ್‌ನ ಕೊನೆಯ ಐದು ಪಂದ್ಯಗಳಲ್ಲಿ ಆಡಲಿದ್ದಾರೆ. ಇದಲ್ಲದೇ ಒನ್‌ಡೇ ಕಪ್‌ನಲ್ಲೂ ರಹಾನೆ ಆಡಲಿದ್ದಾರೆ.

Advertisement

36ರ ಹರೆಯದ ರಹಾನೆ ಅವರ ವಿಯಾನ್‌ ಮುಲ್ಡರ್‌ ಅವರ ಜಾಗಕ್ಕೆ ಲೀಸೆಸ್ಟರ್‌ಶೈರ್‌ ತಂಡವನ್ನು ಸೇರಿಕೊಳ್ಳಲಿದ್ದಾರೆ. ಮುಲ್ಡರ್‌ ಅವರು ಮುಂದಿನ ಆಗಸ್ಟ್‌ ವೇಳೆ ದಕ್ಷಿಣ ಆಫ್ರಿಕಾ ತಂಡದ ಪರ ವೆಸ್ಟ್‌ಇಂಡೀಸ್‌ಗೆ ಪ್ರಯಾಣಿಸಲಿದ್ದಾರೆ. ರಹಾನೆ ಅವರು ಎಲ್ಲ ಮಾದರಿಯ ಕ್ರಿಕೆಟ್‌ (ಪ್ರಥಮ ದರ್ಜೆ, ಲಿಸ್ಟ್‌-ಎ ಮತ್ತು ಟಿ20) ನಲ್ಲಿ ಒಟ್ಟಾರೆ 26 ಸಾವಿರ ರನ್‌ ಪೇರಿಸಿದ್ದಾರೆ. ಅಜೇಯ 265 ಬಾರಿಸಿರುವುದು ಅವರ ಶ್ರೇಷ್ಠ ಸಾಧನೆಯಾಗಿದೆ. ಈ ಬಾಳ್ವೆ ವೇಳೆ ಅವರು 51 ಶತಕ ಬಾರಿಸಿದ್ದಾರೆ.  ಭಾರತ ಪರ ಟೆಸ್ಟ್‌ನಲ್ಲಿ ಆಡಿರುವ ಅವರು 15 ಶತಕ ಸಹಿತ 8 ಸಾವಿರಕ್ಕೂ ಹೆಚ್ಚಿನ ರನ್‌ ಪೇರಿಸಿದ್ದಾರೆ. 2016ರಲ್ಲಿ ನ್ಯೂಜಿಲೆಂಡ್‌ ವಿರುದ್ಧ 188 ರನ್‌ ಪೇರಿಸಿರುವುದು ಅವರ ವೈಯಕ್ತಿಕ ಶ್ರೇಷ್ಠ ಇನಿಂಗ್ಸ್‌ ಆಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next