Advertisement

T20 WC: ಅಫ್ಘಾನ್ ವಿರುದ್ದದ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ; ಸುಳಿವು ನೀಡಿದ ದ್ರಾವಿಡ್

01:38 PM Jun 20, 2024 | Team Udayavani |

ಬಾರ್ಬಡೋಸ್: ಭಾರತ ತಂಡವು ಇಂದು ಐಸಿಸಿ ಟಿ20 ವಿಶ್ವಕಪ್ 2024ರ ಸೂಪರ್ 8ರ ಹಂತದಲ್ಲಿ ಇಂದು ಮೊದಲ ಪಂದ್ಯವಾಡುತ್ತಿದೆ. ಗುಂಪು ಹಂತದಲ್ಲಿ ಬಲಿಷ್ಠ ತಂಡಗಳಿಗೆ ಟಕ್ಕರ್ ಕೊಟ್ಟ ಅಫ್ಘಾನಿಸ್ತಾನ ಇಂದು ಭಾರತದ ಎದುರಾಳಿಯಾಗಲಿದೆ. ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದ ನೆಲದಲ್ಲಿ ಆಡಿದ್ದ ಭಾರತವು ಇದೀಗ ಕೆರಿಬಿಯನ್ ನಲ್ಲಿ ಸೂಪರ್ 8 ಪಂದ್ಯಗಳನ್ನು ಆಡಲಿದೆ.

Advertisement

ಟೀಂ ಇಂಡಿಯಾದ ಪ್ರಮುಖ ಕೋಚ್ ರಾಹುಲ್ ದ್ರಾವಿಡ್ ಅವರು ಇಂದಿನ ಪಂದ್ಯದಲ್ಲಿ ಆಡುವ ಬಳಗದಲ್ಲಿ ಬದಲಾವಣೆಯ ಬಗ್ಗೆ ಮಾತನಾಡಿದ್ದಾರೆ. ಗುಂಪು ಹಂತದ ಪಂದ್ಯಗಳಲ್ಲಿ ಟೀಂ ಇಂಡಿಯಾ ಯಾವುದೇ ಬದಲಾವಣೆ ಮಾಡಿರಲಿಲ್ಲ. ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಅವರನ್ನೇ ಮುಖ್ಯ ಸ್ಪಿನ್ನರ್ ಗಳನ್ನಾಗಿ ಆಡಸಿತ್ತು. ಆದರೆ ಇದೀಗ ಕುಲದೀಪ್ ಯಾದವ್ ಅಥವಾ ಯುಜಿವೇಂದ್ರ ಚಾಹಲ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಯೋಚಿಸುತ್ತಿದೆ.

ಯಾವುದೇ ಆಟಗಾರರನ್ನು ಕೈಬಿಡುವುದು ಕಷ್ಟ. ಎಲ್ಲರೂ ಗುಣಮಟ್ಟದ ಆಟಗಾರರೇ. ಆ ಪಂದ್ಯದ ಸಂದರ್ಭ, ಮೈದಾನದ ಸ್ಥಿತಿಗತಿ ನೋಡಿ ಅದಕ್ಕೆ ಯಾವ 11 ಮಂದಿ ಆಟಗಾರರು ಸೂಕ್ತ ಎನ್ನುವುದನ್ನು ನಿರ್ಧರಿಸುತ್ತೇವೆ. ಇದುವರೆಗೆ ಸ್ಪಿನ್ನರ್ ಗಳಿಗೆ ಹೆಚ್ಚು ಕೆಲಸವಿಲ್ಲ ಎಂದು ಭಾವಿಸಿ ಹೆಚ್ಚು ವೇಗಿಗಳನ್ನು ಆಡಿಸಿದ್ದೇವೆ ಎಂದು ದ್ರಾವಿಡ್ ಹೇಳಿದರು.

ಅಲ್ಲಿ (ಅಮೆರಿಕ) ಹೆಚ್ಚು ಕ್ಲಿಷ್ಟ ವಿಕೆಟ್ ಇದ್ದ ಕಾರಣ ಆಳ ಬ್ಯಾಟಿಂಗ್ ಮೊರೆ ಹೋಗಿದ್ದೆವು. ಆದರೆ ಇಲ್ಲಿನ ಪರಿಸ್ಥಿತಿ ಬೇರೆ ಇರಬಹುದು. ಇಲ್ಲಿ ತಂಡದ ಸಂಯೋಜನೆಯಲ್ಲಿ ಸ್ವಲ್ಪ ಬದಲಾವಣೆಯಾಗಬಹುದು. ಇಲ್ಲಿ ಹೆಚ್ಚುವರಿ ಸ್ಪಿನ್ನರ್ ಬೇಕಾಗಬಹುದು, ಹೀಗಾಗಿ ಕುಲದೀಪ್ ಯಾದವ್ ಅಥವಾ ಯುಜಿ ಚಾಹಲ್ ತಂಡಕ್ಕೆ ಬರಬಹುದು ಎಂದು ದ್ರಾವಿಡ್ ಹೇಳಿದರು.

“ಕ್ರಿಕೆಟ್ ತುಂಬಾ ಪರಿಸ್ಥಿತಿ ಅನುಗುಣವಾದ ಆಟವಾಗಿದೆ. ನಿಜವಾದ ಕೌಶಲ್ಯ ಮಟ್ಟಗಳು, ನಿಜವಾದ ಕಾರ್ಯಕ್ಷಮತೆಯ ಮಟ್ಟಗಳು, ಸ್ವೀಕಾರಾರ್ಹ ಕಾರ್ಯಕ್ಷಮತೆಯ ಮಟ್ಟಗಳ ಮೇಲೆ ಮೇಲ್ಮೈ ಅಂತಹ ಪ್ರಭಾವವನ್ನು ಬೀರುವ ಏಕೈಕ ಕ್ರೀಡೆಗಳಲ್ಲಿ ಇದು ಒಂದಾಗಿದೆ” ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next