Advertisement

T20 WC: ಗಲ್ಲಿ ಕ್ರಿಕೆಟ್ ನೆನಪಿಸಿದ ಕೊಹ್ಲಿ; ಆ್ಯಂಟಿಗುವಾ ಪಂದ್ಯದಲ್ಲಿ ಆಗಿದ್ದೇನು? Videoa

01:08 PM Jun 23, 2024 | Team Udayavani |

ಆ್ಯಂಟಿಗುವಾ: ಐಸಿಸಿ ಟಿ20 ವಿಶ್ವಕಪ್ ನ ಸೂಪರ್ 8 ಹಂತದ ಬಾಂಗ್ಲಾದೇಶ ವಿರುದ್ದ ಸುಲಭ ಗೆಲುವು ಸಾಧಿಸಿದ ಭಾರತ ಸೆಮಿ ಹಂತಕ್ಕೆ ಹತ್ತಿರವಾಗಿದೆ. ಆ್ಯಂಟಿಗುವಾದಲ್ಲಿ ನಡೆದ ಪಂದ್ಯದಲ್ಲಿ ಭಾರತದ ಆಲ್ ರೌಂಡ್ ಆಟದ ಎದುರು ಬಾಂಗ್ಲಾ ಟೈಗರ್ಸ್ ಸೋಲು ಕಂಡರು.

Advertisement

ಅದ್ಭುತ ಐಪಿಎಲ್ ಬಳಿಕ ಜೋಶ್ ನಲ್ಲಿ ವಿಶ್ವಕಪ್ ಗೆ ಬಂದಿದ್ದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ಗ್ರೂಪ್ ಹಂತದಲ್ಲಿ ವಿಫಲರಾಗಿದ್ದಾರೆ. ಆದರೆ ಬಾಂಗ್ಲಾ ವಿರುದ್ದದ ಪಂದ್ಯದಲ್ಲಿ ಉತ್ತಮ ಆರಂಭ ನೀಡಿದ್ದ ವಿರಾಟ್ ದೊಡ್ಡ ಇನ್ನಿಂಗ್ಸ್ ಕಟ್ಟಲಾಗಲಿಲ್ಲ. 28 ಎಸೆತಗಳಲ್ಲಿ 37 ರನ್ ಗಳಿಸಿ ಔಟಾದರು.

ವಿಶ್ವಕಪ್ ನಲ್ಲಿ ಇನ್ನೂ ತನ್ನ ನೈಜ ಆಟ ತೋರಿಸದ ವಿರಾಟ್ ಮೈದಾನದಲ್ಲಿ ಎಂಟರ್ಟೈನ್ ಮಾಡುವಲ್ಲಿ ಹಿಂದೆ ಬಿದ್ದಿಲ್ಲ. ಆ್ಯಂಟಿಗುವಾದಲ್ಲಿ ಅವರು ಚೆಂಡನ್ನು ಪಡೆಯಲು ಜಾಹೀರಾತು ಹೋರ್ಡಿಂಗ್‌ನ ಕೆಳಗೆ ನುಗ್ಗಿ ನೋಡುಗರಿಗೆ ಗಲ್ಲಿ ಕ್ರಿಕೆಟ್ ವೈಬ್ ನೀಡಿದರು.

ಬಾಂಗ್ಲಾದೇಶ ತಂಡಕ್ಕೆ 18 ಎಸೆತಗಳಲ್ಲಿ 74 ರನ್ ಅಗತ್ಯವಿದ್ದಾಗ ಈ ಪ್ರಸಂಗ ನಡೆಯಿತು. ಅರ್ಶದೀಪ್ ಎಸೆತದಲ್ಲಿ ಬಾಂಗ್ಲಾ ಬ್ಯಾಟರ್ ರಿಶಾದ್ ಹುಸೈನ್ ಮಿಡ್ ವಿಕೆಟ್ ಬೌಂಡರಿ ಮೇಲೆ ಸಿಕ್ಸರ್ ಬಾರಿಸಿದರು. ಚೆಂಡು ಅಲ್ಲಿದ್ದ ಎಲ್ಇಡಿ ಜಾಹೀರಾತು ಹೋರ್ಡಿಂಗ್ ಅಡಿಗೆ ಹೋಯಿತು.

Advertisement

ಮಿಡ್ ವಿಕೆಟ್ ಬೌಂಡರಿಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಚೆಂಡನ್ನು ತರಲು ಹೋರ್ಡಿಂಗ್ ಬೋರ್ಡ್ ಒಳಗೆ ತೂರಬೇಕಾಯಿತು. ಇಂತಹ ದೃಶ್ಯಗಳು ಸಾಮಾನ್ಯವಾಗಿ ಗಲ್ಲಿ ಕ್ರಿಕೆಟ್‌ನಲ್ಲಿ ಕಂಡುಬರುತ್ತವೆ, ಕೊಹ್ಲಿಯ ಈ ನಡೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next