Advertisement

ಭಾರತಕ್ಕೆ ಟಿ20 ಸರಣಿ ಕ್ಲೀನ್‌ಸ್ವೀಪ್

03:10 AM Aug 07, 2019 | sudhir |

ಪ್ರಾವಿಡೆನ್ಸ್‌ (ಗಯಾನ): : ಮಳೆಯಿಂದ ತೊಂದರೆಗೊಳಗಾದ ವೆಸ್ಟ್‌ ಇಂಡೀಸ್‌ ತಂಡದೆದುರಿನ ಮೂರನೇ ಟಿ20 ಪಂದ್ಯದಲ್ಲಿ ಭಾರತವು 7 ವಿಕೆಟ್‌ಗಳಿಂದ ಜಯಭೇರಿ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಕ್ಲೀನ್‌ಸಿÌàಪ್‌ ಮೂಲಕ ತನ್ನದಾಗಿಸಿಕೊಂಡಿದೆ.
ಮೂರನೇ ಟಿ20 ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದರಿಂದ ಪಂದ್ಯ ಒಂದು ಗಂಟೆ ತಡವಾಗಿ ಆರಂಭಿಸಲಾಯಿತು.

Advertisement

ಪ್ರಾವಿಡೆನ್ಸ್‌ನಲ್ಲಿ ಮಂಗಳವಾರ ನಡೆದ ಪಂದ್ಯಕ್ಕೆ ಟಾಸ್‌ ಹಾಕಲೂ ಮಳೆರಾಯ ಅವಕಾಶವನ್ನು ನೀಡಲಿಲ್ಲ. ಮಳೆ ಬಿಟ್ಟರೂ ಕ್ರೀಡಾಂಗಣ ತುಂಬ ನೀರು ನಿಂತಿತ್ತು. ಇದನ್ನು ಹೊರಹಾಕಲು ಕ್ರೀಡಾಂಗಣದ ಸಿಬಂದಿ ಭಾರೀ ಹರಸಾಹಸ ಪಟ್ಟರು. ಕೊನೆಗೂ ಕ್ರೀಡಾಂಗಣವನ್ನು ಸಜ್ಜು ಗೊಳಿಸಲಾಯಿತು. ಆ ಬಳಿಕ ಪಿಚ್‌ ಪರೀಕ್ಷಿಸಿದ ಅಂಪಾಯರ್ ಪಂದ್ಯ ನಡೆಸಲು ಗ್ರೀನ್‌ ಸಿಗ್ನಲ್‌ ನೀಡಿದರು.

ಇಷ್ಟೆಲ್ಲ ಆಗುವಷ್ಟರ ವೇಳೆಗೆ ಅದಾಗಲೇ 1 ಗಂಟೆ ತಡವಾಗಿತ್ತು. ಹೀಗಿದ್ದರೂ ಓವರ್‌ ಕಡಿತಗೊಳಿಸದೇ ಪೂರ್ಣ 20 ಓವರ್‌ಗಳ ಪಂದ್ಯ ನಡೆ ಸಲು ಅಂಪಾಯರ್ ನಿರ್ಧರಿಸಿದರು.

ಟಾಸ್‌ ಸೋತು ಬ್ಯಾಟ್‌ ಮಾಡಿದ ವೆಸ್ಟ್‌ ಇಂಡೀಸ್‌ ತಂಡ ಮತ್ತೆ ತನ್ನ ಕಳಪೆ ಆಟವನ್ನು ಮುಂದುವರಿಸಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಕೈರನ್‌ ಪೊಲಾರ್ಡ್‌ ಮತ್ತು ರೋಮನ್‌ ಪೊವೆಲ್‌ ಅವರ ಬಿರುಸಿನ ಆಟದಿಂದಾಗಿ ವೆಸ್ಟ್‌ಇಂಡೀಸ್‌ 6 ವಿಕೆಟಿಗೆ 146 ರನ್‌ ಪೇರಿಸಿತು.

ಇದಕ್ಕುತ್ತರವಾಗಿ ನಾಯಕ ಕೊಹ್ಲಿ ಮತ್ತು ರಿಷಬ್‌ ಪಂತ್‌ ಅವರ ಭರ್ಜರಿ ಆಟದಿಂದಾಗಿ ಭಾರತ ತಂಡವು 19.1 ಓವರ್‌ಗಳಲ್ಲಿ ಮೂರು ವಿಕೆಟಿಗೆ 150 ರನ್‌ ಪೇರಿಸಿ ಜಯ ಸಾಧಿಸಿತು. ಕೊಹ್ಲಿ 59 ರನ್‌ ಗಳಿಸಿದರೆ ಪಂತ್‌ 65 ರನ್‌ ಗಳಸಿ ಅಜೇಯರಾಗಿ ಉಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next