Advertisement

T20 Batting Ranking: 13 ಸ್ಥಾನ ಏರಿದ ಋತುರಾಜ್‌ ಗಾಯಕ್ವಾಡ್‌

01:32 AM Jul 11, 2024 | Team Udayavani |

ದುಬಾೖ: ನೂತನ ಟಿ20 ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ಋತುರಾಜ್‌ ಗಾಯಕ್ವಾಡ್‌ 13 ಸ್ಥಾನಗಳ ಪ್ರಗತಿ ಸಾಧಿಸಿ 7ನೇ ಸ್ಥಾನ ಅಲಂಕರಿಸಿದ್ದಾರೆ. ಇದು ಟಾಪ್‌-10 ಯಾದಿಯ ಪ್ರಮುಖ ಬೆಳವಣಿಗೆ. ಸೂರ್ಯಕುಮಾರ್‌ ಯಾದವ್‌ ದ್ವಿತೀಯ ಸ್ಥಾನ ಕಾಯ್ದುಕೊಂಡಿದ್ದಾರೆ.

Advertisement

ಸೂರ್ಯಕುಮಾರ್‌ 821 ರೇಟಿಂಗ್‌ ಅಂಕಗಳನ್ನು ಹೊಂದಿದ್ದಾರೆ. ಟ್ರ್ಯಾವಿಸ್‌ ಹೆಡ್‌ 844 ಅಂಕಗಳೊಂದಿಗೆ ನಂ.1 ಸ್ಥಾನದಲ್ಲಿ ಮುಂದುವರಿದಿದ್ದಾರೆ. ಜಿಂಬಾಬ್ವೆ ವಿರುದ್ಧದ ದ್ವಿತೀಯ ಪಂದ್ಯದಲ್ಲಿ ಆಮೋಘ ಶತಕ ಬಾರಿಸಿದ ಅಭಿಷೇಕ್‌ ಶರ್ಮ 75ನೇ ಸ್ಥಾನದೊಂದಿಗೆ ರ್‍ಯಾಂಕಿಂಗ್‌ ಖಾತೆ ತೆರೆಯುವಲ್ಲಿ ಯಶಸ್ವಿಯಾದರು.

ಫಿಲ್‌ ಸಾಲ್ಟ್ (797), ಬಾಬರ್‌ ಆಜಂ (755), ಮೊಹಮ್ಮದ್‌ ರಿಜ್ವಾನ್‌ (746) ಮತ್ತು ಜಾಸ್‌ ಬಟ್ಲರ್‌ (716) ಕ್ರಮವಾಗಿ 3ರಿಂದ 6ನೇ ಸ್ಥಾನದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next