Advertisement

ಕೃಣಾಲ್‌, ಕೊಹ್ಲಿ ಕಮಾಲ್‌; ಸೀರಿಸ್‌ ಲೆವೆಲ್‌

06:00 AM Nov 26, 2018 | Team Udayavani |

ಸಿಡ್ನಿ: ಆತಿಥೇಯ ಆಸ್ಟ್ರೇಲಿಯ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯನ್ನು 1-1 ಅಂತರದಿಂದ ಸಮಬಲಕ್ಕೆ ತರುವಲ್ಲಿ ಭಾರತ ಯಶಸ್ವಿಯಾಗಿದೆ. 

Advertisement

ರವಿವಾರ “ಸಿಡ್ನಿ ಕ್ರಿಕೆಟ್‌ ಗ್ರೌಂಡ್‌’ನಲ್ಲಿ ಸಿಡಿದು ನಿಂತ ಟೀಮ್‌ ಇಂಡಿಯಾ 6 ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ಮುಂಬರುವ ಟೆಸ್ಟ್‌ ಸರಣಿಗೆ ಹೆಚ್ಚಿನ ಆತ್ಮವಿಶ್ವಾಸ ಗಳಿಸಿಕೊಂಡಿತು.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಆಸ್ಟ್ರೇಲಿಯ 6 ವಿಕೆಟಿಗೆ 164 ರನ್‌ ಗಳಿಸಿದರೆ, ಭಾರತ 19. 4 ಓವರ್‌ಗಳಲ್ಲಿ 4 ವಿಕೆಟಿಗೆ 168 ರನ್‌ ಬಾರಿಸಿ ಜಯ ಸಾಧಿಸಿತು. ಕೃಣಾಲ್‌ ಪಾಂಡ್ಯ ಅವರ ಜೀವನಶ್ರೇಷ್ಠ ಬೌಲಿಂಗ್‌, ನಾಯಕ ವಿರಾಟ್‌ ಕೊಹ್ಲಿ ಅವರ ಅರ್ಧ ಶತಕ ಸಾಹಸ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಬ್ರಿಸ್ಬೇನ್‌ನಲ್ಲಿ “ಮಳೆ ನಿಯಮ’ಕ್ಕೆ ಸೋತ ಕೊಹ್ಲಿ ಪಡೆಯ ಸಮಬಲಕ್ಕೆ ಮೆಲ್ಬರ್ನ್ ಮಳೆ ಅಡ್ಡಿಯಾಗಿ ಪರಿಣಮಿಸಿತ್ತು. ಆದರೆ ಸಿಡ್ನಿಯಲ್ಲಿ ಮಳೆಯ ಕಾಟ ಇರಲಿಲ್ಲ.

ಧವನ್‌ ಬ್ಯಾಟಿಂಗ್‌ ಅಬ್ಬರ
ಶಿಖರ್‌ ಧವನ್‌-ರೋಹಿತ್‌ ಶರ್ಮ ಆಸೀಸ್‌ ಆರಂಭಿಕರಷ್ಟೇ ಜೋಶ್‌ ತೋರಿದರು. 5.3 ಓವರ್‌ಗಳಿಂದ 67 ರನ್‌ ಪೇರಿಸಿದರು. ಆದರೆ ಇಬ್ಬರೂ ಇದೇ ಮೊತ್ತಕ್ಕೆ ಪೆವಿಲಿಯನ್‌ ಸೇರಿದಾಗ, 108ರ ಮೊತ್ತದಲ್ಲಿ ಕೆ.ಎಲ್‌. ರಾಹುಲ್‌ (14)-ರಿಷಬ್‌ ಪಂತ್‌ (0) ಒಟ್ಟೊಟ್ಟಿಗೆ ನಿರ್ಗಮಿಸಿದಾಗ ಭಾರತ ಒಂದಿಷ್ಟು ಒತ್ತಡಕ್ಕೆ ಸಿಲುಕಿತು. ಆದರೆ ವಿರಾಟ್‌ ಕೊಹ್ಲಿ-ದಿನೇಶ್‌ ಕಾರ್ತಿಕ್‌ ಮುರಿಯದ 4ನೇ ವಿಕೆಟಿಗೆ 60 ರನ್‌ ಸೂರೆಗೈದು ತಂಡವನ್ನು ಸುರಕ್ಷಿತವಾಗಿ ದಡ ತಲುಪಿಸಿದರು.

ಕೊಹ್ಲಿ ಅಜೇಯ 61 ರನ್‌ ಬಾರಿಸಿ 19ನೇ ಅರ್ಧ ಶತಕದೊಂದಿಗೆ ಮಿಂಚಿದರು (41 ಎಸೆತ, 4 ಬೌಂಡರಿ, 2 ಸಿಕ್ಸರ್‌). ಕಾರ್ತಿಕ್‌ ಅವರ 22 ರನ್‌ 18 ಎಸೆತಗಳಿಂದ ಬಂತು (1 ಬೌಂಡರಿ, 1 ಸಿಕ್ಸರ್‌). ಪ್ರಚಂಡ ಫಾರ್ಮ್ ಮುಂದುವರಿಸಿದ ಶಿಖರ್‌ ಧವನ್‌ 22 ಎಸೆತ ಎದುರಿಸಿ 41 ರನ್‌ ಸಿಡಿಸಿದರು (6 ಬೌಂಡರಿ, 2 ಸಿಕ್ಸರ್‌). ರೋಹಿತ್‌ 16 ಎಸೆತಗಳಿಂದ 23 ರನ್‌ ಮಾಡಿದರು (1 ಬೌಂಡರಿ, 2 ಸಿಕ್ಸರ್‌).

Advertisement

ಕಾಂಗರೂಗೆ ಕೃಣಾಲ್‌ ಕಡಿವಾಣ
ಅಬ್ಬರದಿಂದಲೇ ಬ್ಯಾಟಿಂಗ್‌ ಆರಂಭಿಸಿದ ಆಸ್ಟ್ರೇಲಿಯ, ಪ್ರವಾಸಿಗರ ತ್ರಿವಳಿ ಸೀಮರ್‌ ದಾಳಿಯನ್ನು ಯಾವುದೇ ಆತಂಕವಿಲ್ಲದೆ ಎದುರಿಸಿ ರನ್‌ ಪೇರಿಸುತ್ತ ಹೋಯಿತು. ಭುವನೇಶ್ವರ್‌, ಖಲೀಲ್‌ ಅಹ್ಮದ್‌, ಬುಮ್ರಾ ಬೌಲಿಂಗ್‌ ಯಾವುದೇ ಪರಿಣಾಮ ಬೀರಲಿಲ್ಲ. ಡಿ’ಆರ್ಸಿ ಶಾರ್ಟ್‌-ಆರನ್‌ ಫಿಂಚ್‌ ಸಲೀಸಾಗಿ ರನ್‌ ಪೇರಿಸುತ್ತ ಹೋಗಿ 8.3 ಓವರ್‌ಗಳಿಂದ 68 ರನ್‌ ಒಟ್ಟುಗೂಡಿಸಿದರು. ಈ ಜೋಡಿಯನ್ನು ಬೇರ್ಪಡಿಸಲು ಕುಲದೀಪ್‌ ಯಾದವ್‌ ಬರಬೇಕಾಯಿತು. ಅವರು 28 ರನ್‌ ಮಾಡಿದ ಫಿಂಚ್‌ ವಿಕೆಟ್‌ ಕಿತ್ತರು.

ಮುಂದಿನದು ಎಡಗೈ ಸ್ಪಿನ್ನರ್‌ ಕೃಣಾಲ್‌ ಪಾಂಡ್ಯ ಕೈಚಳಕ. ತನ್ನ ದ್ವಿತೀಯ ಓವರಿನ ಮೊದಲೆರಡು ಎಸೆತಗಳಲ್ಲಿ ಶಾರ್ಟ್‌ ಮತ್ತು ಬೆನ್‌ ಮೆಕ್‌ಡರ್ಮಟ್‌ ಅವರನ್ನು ಲೆಗ್‌ ಬಿಫೋರ್‌ ಬಲೆಗೆ ಬೀಳಿಸಿದರು. ಬಳಿಕ ಮ್ಯಾಕ್ಸ್‌ವೆಲ್‌, ಕ್ಯಾರಿ ಅವರನ್ನೂ ಪೆವಿಲಿಯನ್ನಿಗೆ ಅಟ್ಟಿದರು. ಇದರಿಂದ ಆಸ್ಟ್ರೇಲಿಯದ ಭಾರೀ ಮೊತ್ತದ ಯೋಜನೆ ವಿಫ‌ಲಗೊಂಡಿತು. ಪಾಂಡ್ಯ ಸಾಧನೆ 36ಕ್ಕೆ 4 ವಿಕೆಟ್‌.

ಅಡಿಲೇಡ್‌ನ‌ಲ್ಲಿ ಮೊದಲ ಟೆಸ್ಟ್‌
ಇತ್ತಂಡಗಳಿನ್ನು 4 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಳ್ಳಲಿವೆ. ಮೊದಲ ಟೆಸ್ಟ್‌ ಡಿ. 6ರಿಂದ ಅಡಿಲೇಡ್‌ನ‌ಲ್ಲಿ ಆರಂಭವಾಗಲಿದ್ದು, ಇದಕ್ಕೂ ಮುನ್ನ ಭಾರತ ತಂಡ ಸಿಡ್ನಿಯಲ್ಲಿ ಕ್ರಿಕೆಟ್‌ ಆಸ್ಟ್ರೇಲಿಯ ಇಲೆವೆನ್‌ ವಿರುದ್ಧ ಚತುರ್ದಿನ ಅಭ್ಯಾಸ ಪಂದ್ಯವನ್ನು ಆಡಲಿದೆ (ನ. 28-ಡಿ. 1).

ಸ್ಕೋರ್‌ಪಟ್ಟಿ
ಆಸ್ಟ್ರೇಲಿಯ

ಡಿ’ಆರ್ಸಿ ಶಾರ್ಟ್‌    ಎಲ್‌ಬಿಡಬ್ಲ್ಯು ಪಾಂಡ್ಯ    33
ಆರನ್‌ ಫಿಂಚ್‌    ಸಿ ಪಾಂಡ್ಯ ಬಿ ಕುಲದೀಪ್‌    28
ಗ್ಲೆನ್‌ ಮ್ಯಾಕ್ಸ್‌ವೆಲ್‌    ಸಿ ರೋಹಿತ್‌ ಬಿ ಪಾಂಡ್ಯ    13
ಬೆನ್‌ ಮೆಕ್‌ಡರ್ಮಟ್‌    ಎಲ್‌ಬಿಡಬ್ಲ್ಯು ಪಾಂಡ್ಯ    0
ಅಲೆಕ್ಸ್‌ ಕ್ಯಾರಿ    ಸಿ ಕೊಹ್ಲಿ ಬಿ ಪಾಂಡ್ಯ    27
ಕ್ರಿಸ್‌ ಲಿನ್‌    ರನೌಟ್‌    13
ಮಾರ್ಕಸ್‌ ಸ್ಟೋಯಿನಿಸ್‌    ಔಟಾಗದೆ    25
ಕೋಲ್ಟರ್‌ ನೈಲ್‌    ಔಟಾಗದೆ    13
ಇತರ        12
ಒಟ್ಟು  (20 ಓವರ್‌ಗಳಲ್ಲಿ 6 ವಿಕೆಟಿಗೆ)        164
ವಿಕೆಟ್‌ ಪತನ: 1-68, 2-73, 3-73, 4-90, 5-119, 6-131.
ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌        4-0-33-0
ಖಲೀಲ್‌ ಅಹ್ಮದ್‌        4-0-35-0
ಜಸ್‌ಪ್ರೀತ್‌ ಬುಮ್ರಾ        4-0-38-0
ಕುಲದೀಪ್‌ ಯಾದವ್‌        4-0-19-1
ಕೃಣಾಲ್‌ ಪಾಂಡ್ಯ        4-0-36-4

ಭಾರತ
ರೋಹಿತ್‌ ಶರ್ಮ    ಬಿ ಝಂಪ    23
ಶಿಖರ್‌ ಧವನ್‌    ಎಲ್‌ಬಿಡಬ್ಲ್ಯು ಸ್ಟಾರ್ಕ್‌    41
ವಿರಾಟ್‌ ಕೊಹ್ಲಿ    ಔಟಾಗದೆ 61
ಕೆ.ಎಲ್‌. ರಾಹುಲ್‌    ಸಿ ನೈಲ್‌ ಬಿ ಮ್ಯಾಕ್ಸ್‌ವೆಲ್‌    14
ರಿಷಬ್‌ ಪಂತ್‌    ಸಿ ಕ್ಯಾರಿ ಬಿ ಟೈ    0
ದಿನೇಶ್‌ ಕಾರ್ತಿಕ್‌    ಔಟಾಗದೆ    22
ಇತರ        7
ಒಟ್ಟು  (19.4 ಓವರ್‌ಗಳಲ್ಲಿ 4 ವಿಕೆಟಿಗೆ)        168
ವಿಕೆಟ್‌ ಪತನ: 1-67, 2-67, 3-108, 4-108.
ಬೌಲಿಂಗ್‌:
ಮಿಚೆಲ್‌ ಸ್ಟಾರ್ಕ್‌        4-0-26-1
ನಥನ್‌ ಕೋಲ್ಟರ್‌ ನೈಲ್‌        3-0-40-0
ಮಾರ್ಕಸ್‌ ಸ್ಟೋಯಿನಿಸ್‌        1-0-22-0
ಆ್ಯಡಂ ಝಂಪ        4-1-22-1
ಗ್ಲೆನ್‌ ಮ್ಯಾಕ್ಸ್‌ವೆಲ್‌        4-0-25-1
ಆ್ಯಂಡ್ರೂé ಟೈ        3.4-0-32-1
ಪಂದ್ಯಶ್ರೇಷ್ಠ: ಕೃಣಾಲ್‌ ಪಾಂಡ್ಯ

Advertisement

Udayavani is now on Telegram. Click here to join our channel and stay updated with the latest news.

Next