Advertisement

ಕ್ರೀಡೆಗೆ ಹೆಚ್ಚಿನ ಆದ್ಯತೆ : ಪ್ರಕಾಶ್‌ ಭರವಸೆ

02:46 PM Dec 30, 2021 | Team Udayavani |

ಗೌರಿಬಿದನೂರು: ಯುವಕರು ಹಾಗೂ ವಿದ್ಯಾರ್ಥಿಗಳು ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶ್ರೀರಾಮಕೃಷ್ಣ ಶಾರದಾದೇವಿ ವಿದ್ಯಾಮಂದಿರ ಶಾಲೆಯ ಶಾಲಾ ಸಂಯೋಜಕರಾದ
ಟಿ.ವಿ.ಪ್ರಕಾಶ್‌ ತಿಳಿಸಿದರು.

Advertisement

ಶ್ರೀರಾಮಕೃಷ್ಣ ಶಾರದಾದೇವಿ ವಿದ್ಯಾಮಂದಿರ ಶಾಲೆ ಕ್ರೀಡಾಂಗಣದಲ್ಲಿ ಗೌರಿಬಿದನೂರು ಕ್ರಿಕೆಟ್‌ ಕ್ಲಬ್‌ ವತಿಯಿಂದ ಹಮ್ಮಿಕೊಂಡಿದ್ದ ಕ್ರಿಕೆಟ್‌ ಮತ್ತು ಜನರಲ್‌ ಫಿಟ್ನೆಸ್ ತರಬೇತಿಗೆ
ಚಾಲನೆ ನೀಡಿ ಮಾತನಾಡಿದರು.

ಆಧುನಿಕ ಜೀವನ ಶೈಲಿಯಿಂದ ಇಂದಿನ ಯುವಕರು ಹಾಗೂ ವಿದ್ಯಾರ್ಥಿಗಳು ಕ್ರೀಡೆಗೆ ಹೆಚ್ಚಿನ ಗಮನ ನೀಡದಿರುವುದು ವಿಷಾದನೀಯ. ಮಕ್ಕಳ ಸರ್ವತೋಮುಖ ಅಭಿವೃದ್ಧಿ ಕ್ರೀಡೆ
ಹೆಚ್ಚು ಸಹಕಾರಿಯಾಗಿದ್ದು ಅದು ವ್ಯಕ್ತಿಗೆ ದೃಢತೆ, ಆತ್ಮಸ್ಥೈರ್ಯ ಹೆಚ್ಚಿಸಿ ಆರೋಗ್ಯವನ್ನೂ ಕಾಪಾಡುತ್ತದೆ ಎಂದರು. ಗೌರಿಬಿದನೂರು ಕ್ರಿಕೆಟ್‌ ಕ್ಲಬ್‌ ತಂಡದ ಹಿರಿಯ ನಾಯಕರಾದ
ಸಮೀವುಲ್ಲಾ ಮಾತನಾಡಿ, ಗೌರಿಬಿದನೂರು ಕ್ರೀಡಾ ಯುವ ಪ್ರತಿಭೆಗಳನ್ನು ರಾಜ್ಯ ಮಟ್ಟ ಮತ್ತು ರಾಷ್ಟ್ರಮಟ್ಟದಲ್ಲಿ ತಮ್ಮ ವಿಭಾಗ ಪ್ರತಿನಿಧಿಸುವಂತೆ ಮಾಡುವುದು ನಮ್ಮ ಪ್ರಮುಖ ಗುರಿ. ವಿವಿಧ ಕ್ರೀಡೆಗಳು ಮತ್ತು ಆಟಗಳಲ್ಲಿ ಯುವ ಪ್ರತಿಭೆಗಳನ್ನು (ವಿಶೇಷವಾಗಿ ಹಿಂದುಳಿದ ಮಕ್ಕಳಲ್ಲಿ) ಗುರುತಿಸಲು ಅರ್ಹ ಕ್ರೀಡಾಪಟುಗಳಿಗೆ ಮತ್ತು ಆಟಗಾರರಿಗೆ ವಿದ್ಯಾರ್ಥಿವೇತನ ನೀಡಲು ಪರಿಣಿತ ಮಾರ್ಗದರ್ಶಿ ದೈಹಿಕ ತರಬೇತಿ, ಯೋಗ ಇತ್ಯಾದಿಗಳ ಮೂಲಕ ತರಬೇತಿ ನೀಡಲಾಗುವುದು ಎಂದರು.

ಹಿರಿಯ ಆಟಗಾರ ವಿನೋದ್‌ ಮಾತನಾಡಿ ಗೌರಿಬಿದನೂರಿನಲ್ಲಿ ಆಟದ ಮೈದಾನ, ಕ್ರೀಡಾಂಗಣ ಇತ್ಯಾದಿಗಳನ್ನು ಮತ್ತು ಇತರ ಅಂಗಸಂಸ್ಥೆಗಳನ್ನು ಅಭಿವೃದ್ಧಿಪಡಿಸಲು, ಕ್ರೀಡೆ ಮತ್ತು ಆಟ ಉತ್ತೇಜಿಸಲು ಒಂದೇ ರೀತಿಯ ಸಂಸ್ಥೆಗಳೊಂದಿಗೆ ಸಂಯೋಜಿಸಲು ತೀರ್ಮಾನಿಸಲಾಗಿದೆ ಎಂದರು. ತಂಡದ ಮತ್ತೋರ್ವ ನಾಯಕ ಶಶಿಕುಮಾರ್‌, ಹಿರಿಯ ಆಟಗಾರ ಸೂರಜ್‌, ತಂಡದ ಹಿರಿಯ ನಾಯಕ ಸಮೀವುಲ್ಲಾ, ವಿನೋದ್‌, ತಂಡದ ಕೀಡಾಪಟುಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next