Advertisement

ಹಲವು ಕ್ಷೇತ್ರಗಳ ನಾಯಕ ಟಿ.ಎ. ಪೈ

12:36 PM Jan 17, 2022 | Team Udayavani |

ನನಗೆ ಡಾ| ಟಿಎಂಎ ಪೈಯವರ ಪರಿಚಯ ವಾದದ್ದೇ ಟಿ.ಎ. ಪೈಯವರ ಮೂಲಕ. ಮುಂದೆ ಪೈ ಕುಟುಂಬದ ಎಲ್ಲ ಸದಸ್ಯರ ನಿಕಟ ಸಂಪರ್ಕವೂ ದೊರೆಯಿತು.

Advertisement

1967ರಲ್ಲಿ ಟಿ.ಎ. ಪೈ ಅವರು ನಾನು ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಚುನಾ ವಣೆಗೆ ಸ್ಪರ್ಧಿಸಲು ಬೆಂಬಲ, ಪ್ರೋತ್ಸಾಹ ನೀಡಿದ್ದರು. ಟಿ.ಎ. ಪೈ ಅವರು ಲೋಕಸಭೆ ಚುನಾ ವಣೆಯಿಂದ ಸ್ಪರ್ಧಿಸಲು ಯೋಚಿಸಿದ್ದರು. ಆದರೆ ಟಿ.ಎ. ಪೈ ಅವರು ಸ್ಪರ್ಧೆಯಿಂದ ಹಿಂದೆ ಗೆದರು. ನಾನು ಮಾತ್ರ ಸ್ಪರ್ಧಿಸಿದೆ. ಟಿ.ಎ. ಪೈಯವರು ಬೆಂಬಲ ಕೊಟ್ಟಿದ್ದರೂ ನಾನು ಸೋತೆ. 1972ರಲ್ಲಿ ಅವರು ಕೇಂದ್ರ ಸಚಿವ ರಾದಾಗ ನಾನು ಮತ್ತೆ ಬೈಂದೂರಿ ನಿಂದ ಸ್ಪರ್ಧಿಸಿದಾಗ ಬೆಂಬಲ ಕೊಟ್ಟಿದ್ದರು.

ಮಿಲ್ಕ್ ಯೂನಿ ಯನ್‌ ಮೂಲಕ ನಾನು ಮತ್ತು ಅವರು ಜತೆಯಾಗಿ ಉಡುಪಿ, ಕುಂದಾಪುರ, ಕಾರ್ಕಳ ತಾಲೂಕುಗಳಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘಗಳನ್ನು ಸ್ಥಾಪಿಸಿ ಹೈನೋದ್ಯಮ ಅಭಿವೃದ್ಧಿಗೆ ಶ್ರಮಿಸಿದ್ದೆವು.
ಟಿ.ಎ. ಪೈ ಅವರು ಉತ್ತಮ ಆಡಳಿತಗಾರ ರಾಗಿದ್ದರು. ಸಾಮಾನ್ಯವಾಗಿ ಒಂದೊಂದು ಕ್ಷೇತ್ರದಲ್ಲಿ ಕೈಯಾಡಿಸುತ್ತಾರೆ. ಇವರು ಹಾಗಲ್ಲ. ಸಹಕಾರಿ, ಹೈನೋದ್ಯಮ, ಶಾಸಕರು, ಸಂಸದರು, ಬ್ಯಾಂಕಿಂಗ್‌, ಮ್ಯಾನೇಜ್‌ಮೆಂಟ್‌ ಹೀಗೆ ನಾನಾ ಬಗೆಯ ಕ್ಷೇತ್ರಗಳಲ್ಲಿ ಕೈಯಾಡಿಸಿದ್ದಷ್ಟೆ ಅಲ್ಲ, ಅದರಲ್ಲಿ ಯಶಸ್ವಿಯಾಗಿದ್ದರು.

ಕೇಂದ್ರ ಮತ್ತು ರಾಜ್ಯ ಸರಕಾರದಲ್ಲಿ ಪ್ರಭಾವಿಯಾಗಿದ್ದರು. ನಿಷ್ಠೆ, ಪ್ರಾಮಾಣಿಕತೆಗೆ ಅವರು ಹೆಸರಾಗಿದ್ದರು. ಆ ಕಾಲದ ಹತ್ತಾರು ಸಂಗತಿಗಳಿವೆ ಹಂಚಿಕೊಳ್ಳಲಿಕ್ಕೆ. ಒಬ್ಬ ಸಮರ್ಥ ಮತ್ತು ಆಕರ್ಷಕ ವ್ಯಕ್ತಿತ್ವದವರು ಟಿ.ಎ. ಪೈ ಅವರು ಎಂಬುದರಲ್ಲಿ ಅನುಮಾನವಿಲ್ಲ.
- ಎ.ಜಿ.ಕೊಡ್ಗಿ
(ಜಿಲ್ಲೆಯ ಹಿರಿಯ ಮುತ್ಸದ್ದಿ
ಗ್ರಾಮೀಣ ಪರ ಚಿಂತಕ. ಅಮಾಸೆಬೈಲು ಚಾರಿಟೆಬಲ್‌ ಟ್ರಸ್ಟ್‌ ಅಧ್ಯಕ್ಷರು)

 

Advertisement
Advertisement

Udayavani is now on Telegram. Click here to join our channel and stay updated with the latest news.

Next