Advertisement

ಧರ್ಮಸ್ಥಳದ ಮಂಜೂಷಾಕ್ಕೆ ಟಿ-565 ಯುದ್ಧ ಟ್ಯಾಂಕರ್‌!

01:41 AM Dec 01, 2022 | Team Udayavani |

ಬೆಳ್ತಂಗಡಿ: ಭಾರತದ ರಕ್ಷಣಾ ಸಚಿವಾಲಯದಿಂದ ಪುಣೆಯ ಕೇಂದ್ರೀಯ ರಕ್ಷಣಾ ಡಿಪೋದ ಮೂಲಕ ಮಂಗಳವಾರ ಧರ್ಮಸ್ಥಳದ ಮಂಜೂಷಾ ಸಂಗ್ರಹಾಲಯಕ್ಕೆ ಟಿ-565 ಯುದ್ಧ ಟ್ಯಾಂಕರ್‌ ಕೊಡು ಗೆಯಾಗಿ ನೀಡಲಾಯಿತು.

Advertisement

ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಟಿ-565 ಟ್ಯಾಂಕರನ್ನು ಬರಮಾಡಿಕೊಂಡು ವೀಕ್ಷಿಸಿದರು. ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಜತೆಗಿದ್ದರು.

1968ರಲ್ಲಿ ಭಾರತೀಯ ಸೇನೆಗೆ ಈ ಟ್ಯಾಂಕರನ್ನು ಸೇರ್ಪಡೆಗೊಳಿಸಲಾಗಿತ್ತು. ರಕ್ಷಣ ಕಾರ್ಯದಲ್ಲಿ ಸುಮಾರು 40 ವರ್ಷಗಳ ಕಾಲ ಇದು ಬಳಕೆಯಾಗಿದೆ.

1971ರ ಇಂಡೋ ಪಾಕ್‌ ಯುದ್ಧದಲ್ಲಿ ಮತ್ತು ಬಾಂಗ್ಲಾ ವಿಮೋಚನ ಯುದ್ಧದಲ್ಲಿ ಇದು ಬಳಕೆಯಾಗಿದೆ.

ತಾಂತ್ರಿಕ ಮಾಹಿತಿ: ಟಿ-565 ಟ್ಯಾಂಕ್‌ ವಿ-55 (ವಿ-54) ವಿ-12 ವಾಟರ್‌ ಕೂಲ್ಡ್‌ ಎಂಜಿನ್‌ ಅಗಿದೆ. ಸುಮಾರು 40 ಟನ್‌ಗಳಷ್ಟು ತೂಕ ಹೊಂದಿದ್ದು, ಟ್ಯಾಂಕ್‌ 9 ಅಡಿ ಎತ್ತರ ಹಾಗೂ 27.6 ಅಡಿ ಉದ್ದ ಮತ್ತು 10.8 ಅಗಲವಿದೆ. ಇದರ ಗರಿಷ್ಠ ವೇಗ ಗಂಟೆಗೆ 51 ಕಿ.ಮೀ. ಆಗಿದ್ದು 500 ಅಶ್ವಶಕ್ತಿ ಸಾಮರ್ಥ್ಯ ಹೊಂದಿದೆ.

Advertisement

ಟಿ-565 ಟ್ಯಾಂಕರನ್ನು ಸೋವಿಯತ್‌ ಒಕ್ಕೂಟ ಸಿಬಂದಿ ತಯಾರಿಸಿದ್ದಾರೆ. ಇದು ಒಳಗೆ ನಾಲ್ವರು ಸೈನಿಕರು ಕುಳಿತುಕೊಳ್ಳುವಷ್ಟು ಸ್ಥಳಾವಕಾಶ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next