Advertisement

ಸಿಂಡಿಕೇಟ್‌ ಬ್ಯಾಂಕ್‌: ಪ್ರಗತಿ ಪರಿಶೀಲನ ಸಭೆ

05:35 AM Jul 24, 2017 | Team Udayavani |

ಮಂಗಳೂರು: ಪ್ರಸ್ತುತ ವ್ಯಾವಹಾರಿಕ ಪ್ರಪಂಚವು ಅತ್ಯಂತ ಸಂಚಲನಾತ್ಮಕವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬದಲಾವಣೆ ಅನಿವಾರ್ಯ. ಮುಖ್ಯವಾಗಿ ಡಿಜಿಟಲ್‌ ಕ್ಷೇತ್ರದಲ್ಲಿನ ಬೆಳವಣಿಗೆಗಳು ಬ್ಯಾಂಕಿಂಗ್‌ ಕ್ಷೇತ್ರದ ಪ್ರಗತಿಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿವೆ ಎಂದು ಸಿಂಡಿಕೇಟ್‌ ಬ್ಯಾಂಕಿನ ವಲಯ ಮಹಾಪ್ರಬಂಧಕ‌ ಸತೀಶ್‌ ಕಾಮತ್‌ ಹೇಳಿದರು.

Advertisement

ಬ್ಯಾಂಕಿನ ಮಂಗಳೂರು ಪ್ರಾದೇಶಿಕ ಕಚೇರಿಯಲ್ಲಿ ಶನಿವಾರ ಜರಗಿದ ಶಾಖಾ ಪ್ರಬಂಧಕರ ತ್ತೈಮಾಸಿಕ ವ್ಯವಹಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಮಾರುಕಟ್ಟೆಯ ಬದಲಾದ ಸಂಚಲನಗಳನ್ನು ಗಮನದಲ್ಲಿರಿಸಿ ಗ್ರಾಹಕರ ಆವಶ್ಯಕತೆಗಳನ್ನು ಯಶಸ್ವಿಯಾಗಿ ಮತ್ತು ಶೀಘ್ರವಾಗಿ ಪೂರೈಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾದಾಗ ಆಯಾ ಶಾಖೆಗಳಿಗೆ ನಿಗದಿಪಡಿಸಿರುವ ವಾರ್ಷಿಕ ಗುರಿಯನ್ನು ತಲುಪುವುದು ಸುಲಭ ಸಾಧ್ಯ ಎಂದು ಹೇಳಿದರು.

ಬ್ಯಾಂಕಿನ ಉಪಮಹಾಪ್ರಬಂಧಕ ಎನ್‌. ಸೀತಾರಾಮ ಸೋಮಯಾಜಿ ಅವರು 2017 ಜೂನ್‌ 30ರ ಅಂತ್ಯದ ವರೆಗಿನ ಮಂಗಳೂರು ಪ್ರಾದೇಶಿಕ ಕಚೇರಿಗೆ ಒಳಪಟ್ಟ ಶಾಖೆಗಳ ಆರ್ಥಿಕ ಸಾಧನೆಗಳ ಬಗ್ಗೆ ವಿವರ ನೀಡಿದರು.

ಪ್ರಾದೇಶಿಕ ಕಚೇರಿಯ ಎಲ್ಲ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಸಹಾಯಕ ಮಹಾಪ್ರಬಂಧಕ ಬಿ. ನಾರಾಯಣ ರಾವ್‌ ಸ್ವಾಗತಿಸಿದರು. ಸಹಾಯಕ ಮಹಾಪ್ರಬಂಧಕ‌ ನಾರಾಯಣ ಗೌಡ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next