Advertisement
ಕೇಂದ್ರ ಸರ್ಕಾರ ಬ್ಯಾಂಕುಗಳ ವಿಲೀನ ಸರಣಿಯಲ್ಲಿ, ಕಳೆದ ವರ್ಷ ಅಂದರೇ 2020ರ ಏಪ್ರಿಲ್ ನಲ್ಲಿ ದೇಶದ ದೊಡ್ಡ ನಾಗರಿಕ ಬ್ಯಾಂಕ್ ಗಳಲ್ಲಿ ಒಂದಾದ ಕೆನರಾ ಬ್ಯಾಂಕ್ ನೊಂದಿಗೆ ಸಿಂಡಿಕೇಟ್ ಬ್ಯಾಂಕ್ ವಿಲೀನವಾಗಿದೆ.
Related Articles
Advertisement
ಕೆನರಾ ಬ್ಯಾಂಕ್ ನಿಂದ ಅಧಿಕೃತ ವೆಬ್ ಸೈಟ್ ನಲ್ಲಿ ಹೊಸ ಐ ಎಫ್ಎಸ್ ಸಿ ಕೋಡ್ ಗಳನ್ನು ಬಿಡುಗಡೆ ಮಾಡಲಾಗಿದೆ. ಅವುಗಳನ್ನು ಸಿಂಡಿಕೇಟ್ ಬ್ಯಾಂಕ್ ಗ್ರಾಹಕರು ಇನ್ನು ಮುಂದೆ ಬಳಸಬೇಕು. ತಮ್ಮ ಹೊಸ ಐ ಎಫ್ ಎಸ್ ಸಿ ಕೋಡ್ ಗಳನ್ನು ಕೆನರಾ ಬ್ಯಾಂಕ್ ನ ವೆಬ್ಸೈಟ್ ನಲ್ಲಿ ಇರುವ ಟೂಲ್ ಮೂಲಕ ತಿಳಿಯಬಹುದು. ಸಿಂಡಿಕೇಟ್ ಬ್ಯಾಂಕ್ ಗ್ರಾಹಕರು ಹೊಸ ಐಎಫ್ಎಸ್ ಕೋಡ್ ಮತ್ತು ಎಂಐಸಿಆರ್ ಕೋಡ್ಗಳ ಜತೆಗೆ ಹೊಸ ಚೆಕ್ ಬುಕ್ ಗಳನ್ನು ಪಡೆಯಬೇಕಾಗಿದೆ.
ಇನ್ನು, ಸಿಂಡಿಕೇಟ್ ಬ್ಯಾಂಕ್ ನ ಈ ಹಿಂದಿನ ಸ್ವಿಫ್ಟ್ ಕೋಡ್ SYNBINBBXXX ಕೂಡ ಜುಲೈ 1, 2021ರಿಂದ ನಿಷ್ಕ್ರಿಯಗಳ್ಳಲಿದ್ದು, ವಿದೇಶೀ ವಿನಿಮಯ ವಹಿವಾಟನ್ನು ಸ್ವಿಫ್ಟ್ ಸಂದೇಶಗಳನ್ನು ಸ್ವೀಕರಿಸಲು ಮತ್ತು ಕಳುಹಿಸಲು ಸ್ವಿಫ್ಟ್ ಕೋಡ್ಸ್ ನನ್ನು ಬಳಸಲಾಗುತ್ತದೆ.
ವಿದೇಶೀ ವಿನಿಮಯ ವಹಿವಾಟಿಗೆ ಇನ್ನು ಮುಂದೆ ಸ್ವಿಫ್ಟ್ ಕೋಡ್ ಸಿಎನ್ ಆರ್ ಬಿ ಐ ಎನ್ ಬಿ ಬಿ ಎಫ್ ಡಿ ಚ(CNRBINBBFD) ಬಳಸಲು ಮನವಿ ಮಾಡಲಾಗಿದೆ ಎಂದು ಕೆನರಾ ಬ್ಯಾಂಕ್ ತಿಳಿಸಿದೆ.
2019 ರಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 10 ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳ ವಿಲೀನ ಘೋಷಣೆ ಮಾಡಿ, ಅದನ್ನು ಜಾಗತಿಕ ಸಾಮರ್ಥ್ಯದ ನಾಲ್ಕು ಬ್ಯಾಂಕ್ಗಳನ್ನಾಗಿಸುವ ಪ್ರಸ್ತಾವ ಮಾಡಿದರು. ಈ ವಿಲೀನಗಳು ಏಪ್ರಿಲ್ 1, 2021ರಿಂದ ಜಾರಿಗೆ ಬಂತು. ಕೆನರಾ ಬ್ಯಾಂಕ್ ನಲ್ಲಿ ಸಿಂಡಿಕೇಟ್ ಬ್ಯಾಂಕ್ ವಿಲೀನವಾಗಿದ್ದು ಅದೇ ವಿಲೀನ ಪ್ರಕ್ರಿಯೆಯ ಭಾಗ. ಈ ಪ್ರಕ್ರಿಯೆಯ ನಂತರ ಕೆನರಾ ಬ್ಯಾಂಕ್, ತನ್ನ ಬ್ಯಾಂಕಿಂಗ್ ವಹಿವಾಟುಗಳ ಹೆಚ್ಚಳದ ಕಾರಣದಿಂದಾಗಿ ದೇಶದ ನಾಲ್ಕನೇ ಅತಿ ದೊಡ್ಡ ಬ್ಯಾಂಕ್ ಗುರುತಿಸಿಕೊಂಡಿದೆ.
ಇದನ್ನೂ ಓದಿ : ಬಾಕಿ ಬಿಲ್ ಪಾವತಿಸದಕ್ಕೆ ನಿವೃತ್ತ ಯೋಧನ ಮೃತದೇಹ ನೀಡದ ಆಸ್ಪ ತ್ರೆ ವಿರುದ್ಧ ಆಕ್ರೋಶ