Advertisement

ಕೃಷಿ ಸಹಾಯದಲ್ಲಿ ಸಿಂಡ್‌ ಬ್ಯಾಂಕ್‌ ಮುಂಚೂಣಿ

12:48 AM Mar 04, 2020 | mahesh |

ಉಡುಪಿ: ಸಿಂಡಿಕೇಟ್‌ ಬ್ಯಾಂಕ್‌ ಪ್ರಸಕ್ತ ಸಾಲಿನ ಡಿಸೆಂಬರ್‌ ಅಂತ್ಯಕ್ಕೆ 5 ಲಕ್ಷ ಕೋ.ರೂ. ವ್ಯವಹಾರ ನಡೆಸಿ, 451 ಕೋಟಿ ರೂ. ಲಾಭ ಗಳಿಸಿದೆ. ಬ್ಯಾಂಕ್‌ ಆರಂಭದಿಂದಲೂ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡುತ್ತ ಬಂದಿದ್ದು, ಕೃಷಿಕರಿಗೆ ಆರ್ಥಿಕ ಸಹಾಯ ನೀಡುವುದರಲ್ಲಿ ಮುಂಚೂಣಿಯಲ್ಲಿದೆ ಎಂದು ಬ್ಯಾಂಕ್‌ ಕಾರ್ಯನಿರ್ವಾಹಕ ನಿರ್ದೇಶಕ ನಾಗೇಶ್ವರ ರಾವ್‌ ಹೇಳಿದರು.

Advertisement

ಸಿಂಡಿಕೇಟ್‌ ಬ್ಯಾಂಕ್‌ ವತಿಯಿಂದ ಮಣಿಪಾಲದ ಸಿಂಡಿಕೇಟ್‌ ಬ್ಯಾಂಕ್‌ ಸ್ವರ್ಣ ಜಯಂತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಗ್ರಾಮೀಣ ಕೃಷಿ ವಿಸ್ತರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯುವಕರು ಕೃಷಿ ಕ್ಷೇತ್ರಕ್ಕೆ ಬರಬೇಕು ಕೃಷಿ ಆದ್ಯತಾ ವಲಯದ ಮಹಾ ಪ್ರಬಂಧಕ ಮಣಿವಣ್ಣನ್‌ ಮಾತನಾಡಿ, ಕೃಷಿ ಎಲ್ಲ ಅವಧಿಯಲ್ಲಿ ಫ‌ಸಲು ನೀಡುತ್ತದೆ. ಆಧುನಿಕ ತಂತ್ರಜ್ಞಾನಗಳನ್ನು ಕೃಷಿ
ಯಲ್ಲಿ ಬಳಸಿಕೊಂಡಲ್ಲಿ ಹೆಚ್ಚು ಇಳುವರಿ ಜತೆಗೆ ಆದಾಯ ಪಡೆಯಲು ಸಾಧ್ಯ. ಹಿಂದೆ ಕೃಷಿಯಲ್ಲಿ ಶೇ. 70ರಷ್ಟು ಮಂದಿ ತೊಡಗಿಸಿಕೊಳ್ಳುತ್ತಿದ್ದರು, ಅದೀಗ ಶೇ. 40ಕ್ಕೆ ಇಳಿದಿದೆ. ಯುವ ಸಮುದಾಯ ಕೃಷಿ ಕ್ಷೇತ್ರದತ್ತ ಬರುವಂತಾಗಬೇಕು. ಅದಕ್ಕೆ ಅವರಿಗೆ ತಾಂತ್ರಿಕತೆಯ ಪರಿಚಯವಾಗಬೇಕು ಎಂದರು.

ಮಹಾಪ್ರಬಂಧಕ ಎಸ್‌.ಎಸ್‌. ಹೆಗ್ಡೆ, ಕೈಗಾರಿಕಾ ಜಂಟಿ ನಿರ್ದೇಶಕ ಗೋಕುಲದಾಸ್‌ ನಾಯಕ್‌, ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ ಉಪಸ್ಥಿತರಿದ್ದರು. ಅಧಿಕಾರಿಗಳಾದ ರುದ್ರೇಶ್‌ ಸ್ವಾಗತಿಸಿ, ಪ್ರದೀಪ್‌ ಹೆಬ್ಟಾಳ್‌ ವಂದಿಸಿದರು. ಅರ್ಚನಾ ನಿರೂಪಿಸಿದರು.

350 ಮಂದಿ ರೈತರು ಭಾಗಿ
ಆರಂಭದಲ್ಲಿ ಸಿಂಡಿಕೇಟ್‌ ಬ್ಯಾಂಕ್‌ ಪ್ರಧಾನ ಕಚೇರಿ ಬಳಿಯಿಂದ ಟೈಗರ್‌ ಸರ್ಕಲ್‌ ತನಕ ಮೆರವಣಿಗೆ ಸಾಗಿ ಬಂತು. ಬಳಿಕ ಕೃಷಿ ಯಂತ್ರ ಪ್ರದರ್ಶನ ಮಳಿಗೆಗಳ ಉದ್ಘಾಟನೆ ನಡೆಯಿತು. 350ರಷ್ಟು ಮಂದಿ ಕೃಷಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಕೃಷಿ ಪರಿಕರಗಳ ಪ್ರಾತ್ಯಕ್ಷಿಕೆ, ಬ್ಯಾಂಕಿನಿಂದ ಸಿಗುವ ಎಂಎಸ್‌ಎಂಇ ಸಾಲ ಸೌಲಭ್ಯಗಳು, ನಗದು ರಹಿತ ವ್ಯವಹಾರ, ಡಿಜಿಟಲ್‌ ಬ್ಯಾಂಕಿಂಗ್‌ ಇತ್ಯಾದಿ ಮಾಹಿತಿ ಪಡೆದುಕೊಂಡರು.

ತಜ್ಞರಿಂದ ಮಾಹಿತಿ
ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನ, ಸುಧಾರಿತ ಬೇಸಾಯ ಪದ್ಧತಿ, ಕೃಷಿಯಲ್ಲಿ ನೂತನ ಆವಿಷ್ಕಾರಗಳು, ಆದಾಯ ದ್ವಿಗುಣ ಇತ್ಯಾದಿಗಳ ಕುರಿತು ತಜ್ಞರು ಮಾಹಿತಿ ನೀಡಿದರು. ಸಣ್ಣ ಹಾಗೂ ಅತೀ ಸಣ್ಣ ಉದ್ದಿಮೆದಾರರಿಗೆ ಸರಕಾರದಿಂದ ಲಭ್ಯವಿರುವ ಪ್ರೋತ್ಸಾಹಧನ ಕುರಿತು ಬ್ಯಾಂಕಿನ ವಿವಿಧ ವಿಭಾಗಗಳ ಅಧಿಕಾರಿಗಳಾದ ಅರುಣ್‌ಸಾಗರ್‌, ಚಂದ್ರಕಾಂತ್‌, ಗೋಕುಲದಾಸ್‌ ನಾಯಕ್‌, ಕೆಂಪೇಗೌಡ ಮಾಹಿತಿ ಒದಗಿಸಿದರು.

Advertisement

ಯಶಸ್ವಿ ಕೃಷಿಕರ ಸಾಧನೆಗಳ ಕುರಿತು ಸಾಕ್ಷಚಿತ್ರ ಪ್ರದರ್ಶನ ಹಾಗೂ 15 ಮಂದಿ ಕೃಷಿಕರನ್ನು ಗುರುತಿಸಿ ಗೌರವಿಸಲಾಯಿತು.

ಕೃಷಿ ಸಾಲ ನೀಡಿದ ಪ್ರಥಮ ಬ್ಯಾಂಕ್‌
ಸಿಂಡಿಕೇಟ್‌ ಬ್ಯಾಂಕ್‌ ವಲಯ ಮಹಾಪ್ರಬಂಧಕ ಭಾಸ್ಕರ ಹಂದೆ ಮಾತನಾಡಿ, ಕೃಷಿ ಹಾಗೂ ಸಣ್ಣ ಉದ್ದಿಮೆಗಳಿಂದ ಆರ್ಥಿಕತೆ ಹೆಚ್ಚಿ ದೇಶ ಪ್ರಗತಿ ಹೊಂದಲು ಸಾಧ್ಯ. ಕೇವಲ 8 ಸಾವಿರ ರೂ. ಬಂಡವಾಳದಲ್ಲಿ ಆರಂಭಿಸಿ ನೇಕಾರರಿಗೆ ಸಹಾಯಧನ ಒದಗಿಸುವ ಮೂಲಕ ಆರಂಭಗೊಂಡ ಸಿಂಡಿಕೇಟ್‌ ಬ್ಯಾಂಕ್‌ ಇಂದು ದೊಡ್ಡ ಆರ್ಥಿಕ ಸಂಸ್ಥೆಯಾಗಿ ಬೆಳೆದಿದೆ. 1960ರಲ್ಲಿ ದೇಶದಲ್ಲಿ ಪ್ರಥಮ ಬಾರಿಗೆ ಬೆಳೆದು ನಿಂತ ಬೆಳೆಗೆ ಕೃಷಿ ಸಾಲ ನೀಡಿದ ಪ್ರಥಮ ಬ್ಯಾಂಕ್‌ ಎಂಬ ಹೆಗ್ಗಳಿಕೆ ನಮ್ಮ ಸಂಸ್ಥೆಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next