Advertisement

ಸಿಂಡ್‌ ಇಲೈಟ್‌ ಲಾಂಜ್‌ ಉದ್ಘಾಟನೆ

02:33 AM Apr 03, 2019 | sudhir |

ಉಡುಪಿ: ಸಿಂಡಿಕೇಟ್‌ ಬ್ಯಾಂಕ್‌ ಮಣಿಪಾಲದ ಶಾಖೆಯಲ್ಲಿ ಸಿಂಡ್‌ ಇಲೈಟ್‌ ಲಾಂಜ್‌ ಸೌಲಭ್ಯವನ್ನು ಬ್ಯಾಂಕ್‌ನ ಆಡಳಿತ ನಿರ್ದೇಶಕ, ಸಿಇಒ ಮೃತ್ಯುಂಜಯ ಮಹಾಪಾತ್ರ ಮಂಗಳವಾರ ಉದ್ಘಾಟಿಸಿ ಶುಭ ಕೋರಿದರು.

Advertisement

ಇಲೈಟ್‌ ಲಾಂಜ್‌ ಸೌಲಭ್ಯದ ವೈಶಿಷ್ಟéವೆಂದರೆ ಪ್ರಮುಖ ಗ್ರಾಹಕರು ಶಾಖೆಯ ಯಾವುದೇ ಕೌಂಟರ್‌ಗಳಿಗೆ ತೆರಳಬೇಕಾದ ಅಗತ್ಯವಿಲ್ಲ. ಈ ವಿಶಿಷ್ಟ ಲಾಂಜ್‌ನಲ್ಲಿ ಅವರ ಎಲ್ಲ ವ್ಯವಹಾರಗಳನ್ನೂ ನಡೆಸಲಾಗುವುದು.

ಮಣಿಪಾಲದಲ್ಲಿ ಆರಂಭಗೊಂಡ ಈ ಸೌಲಭ್ಯ ಬ್ಯಾಂಕ್‌ನ ಮೊತ್ತ ಮೊದಲ ಇಲೈಟ್‌ ಲಾಂಜ್‌ ಹೊಂದಿದ ಶಾಖೆಯಾಗಿದೆ.

ಬ್ಯಾಂಕ್‌ ಸಂಸ್ಥಾಪಕರ ಊರು ಮಣಿಪಾಲವಾಗಿರುವುದರಿಂದ ಇಲ್ಲಿ
ಪ್ರಥಮ ಇಲೈಟ್‌ ಲಾಂಜ್‌ ಸೌಲಭ್ಯವನ್ನು ಕೊಡಮಾಡುತ್ತಿರುವು
ದಕ್ಕೆ ಅತೀವ ಸಂತಸವಾಗುತ್ತಿದೆ. ಇದರ ಸೌಲಭ್ಯವನ್ನು ಪ್ರತಿಷ್ಠಿತ ಗ್ರಾಹಕರು ಪಡೆದುಕೊಳ್ಳಬೇಕು. ದೇಶದ ಪ್ರತಿಷ್ಠಿತ ರಾಷ್ಟ್ರೀಕೃತ ಬ್ಯಾಂಕ್‌ ಆದ ಸಿಂಡಿಕೇಟ್‌ ಬ್ಯಾಂಕ್‌ ಇನ್ನು ಮುಂದೆ ದೇಶದ ನೂರು ಶಾಖೆಗಳಲ್ಲಿ ಈ ಸೌಲಭ್ಯವನ್ನು ಆರಂಭಿಸಲಿದೆ. ಬ್ಯಾಂಕ್‌ ಇನ್ನೂ ನವನವೀನ ಸೌಲಭ್ಯಗಳನ್ನು ಗ್ರಾಹಕರ ಅನುಕೂಲಕ್ಕಾಗಿ ಜಾರಿಗೆ ತರಲಿದೆ ಮತ್ತು ಇದರಿಂದ ಬ್ಯಾಂಕ್‌ ವ್ಯವಹಾರ ಇನ್ನಷ್ಟು ವೃದ್ಧಿಯಾಗಲಿದೆ ಎಂದು ಮಹಾಪಾತ್ರ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಮಣಿಪಾಲ್‌ ಮೀಡಿಯಾ ನೆಟ್‌ವರ್ಕ್‌ ಲಿ. ಆಡಳಿತ ನಿರ್ದೇಶಕ ಟಿ. ಸತೀಶ್‌ ಯು. ಪೈ ಭಾಗವಹಿಸಿ ಶುಭ ಕೋರಿದರು. ಬ್ಯಾಂಕ್‌ನ ಕ್ಷೇತ್ರೀಯ ಮಹಾಪ್ರಬಂಧಕ ಭಾಸ್ಕರ ಹಂದೆ, ಉಡುಪಿ ಪ್ರಾದೇಶಿಕ ಪ್ರಬಂಧಕಿ ಸುಜಾತಾ ಉಪಸ್ಥಿತರಿದ್ದರು. ಶಾಖೆಯ ಮುಖ್ಯಸ್ಥರಾದ ಸಹಾಯಕ ಮಹಾಪ್ರಬಂಧಕ ಸುರೇಶ ಕೆ.ಎಸ್‌. ಸ್ವಾಗತಿಸಿ ಪ್ರಬಂಧಕ ದುರ್ಗಾಪ್ರಸಾದ್‌ ವಂದಿಸಿದರು. ಸಿಬಂದಿ ರೋಹಿಣಿ ಮಾಂಡ್ರೆ ಕಾರ್ಯಕ್ರಮ ನಿರ್ವಹಿಸಿದರು.

Advertisement

ಮಣಿಪಾಲ, ಸಾಲಿಗ್ರಾಮದಲ್ಲಿ ಅನನ್ಯ ಶಾಖೆ
ಮಣಿಪಾಲ ಕೆಎಂಸಿ ಶಾಖೆ ಮತ್ತು ಸಾಲಿಗ್ರಾಮದ ಶಾಖೆಯಲ್ಲಿ ಅನನ್ಯ ಪರಿವರ್ತಿತ ಶಾಖೆಯನ್ನು ಆಡಳಿತ ನಿರ್ದೇಶಕರು ಉದ್ಘಾಟಿಸಿದರು. ಆಕರ್ಷಕ ಒಳಾಂಗಣ, ಸಂಪೂರ್ಣ ಹವಾನಿಯಂತ್ರಿತ ಸೌಲಭ್ಯ, ಗ್ರಾಹಕರಿಗೆ ಆಸೀನರಾಗಲು ಹೆಚ್ಚಿನ ಸ್ಥಳಾವಕಾಶ, ಮುಖ್ಯವಾಗಿ ಹೊಸ ನೋಟ ಅನನ್ಯ ಶಾಖೆಗಳ ವೈಶಿಷ್ಟéವಾಗಿದೆ. ಅನನ್ಯ ಶಾಖೆಗಳನ್ನು ಬ್ಯಾಂಕ್‌ ವಿಸ್ತರಿಸುತ್ತಿದ್ದು ಇನ್ನಷ್ಟು ಶಾಖೆಗಳಲ್ಲಿ ಇದನ್ನು ಅನುಷ್ಠಾನಿಸಲಾಗುವುದು ಎಂದು ಮೃತ್ಯುಂಜಯ ಮಹಾಪಾತ್ರ ಹೇಳಿದರು.

ಮಣಿಪಾಲ ಕೆಎಂಸಿ ಶಾಖೆಯ ಉದ್ಘಾಟನ ಸಮಾರಂಭದಲ್ಲಿ ಮುಖ್ಯ ಅತಿಥಿ
ಗಳಾಗಿ ಮಣಿಪಾಲ ಮಾಹೆ ವಿ.ವಿ. ಸಹಕುಲಾಧಿಪತಿ ಡಾ|ಎಚ್‌.ಎಸ್‌. ಬಲ್ಲಾಳ್‌ ಆಗಮಿಸಿ ಇಂತಹ ಸೌಲಭ್ಯವನ್ನು ಗ್ರಾಹಕರಿಗೆ ಬ್ಯಾಂಕ್‌ ಕೊಡ ಮಾಡುತ್ತಿರುವುದು ಶ್ಲಾಘನೀಯ ಎಂದರು. ಶಾಖಾ ಪ್ರಬಂಧಕಿ ಚೈತನ್ಯಾ ಉಪಸ್ಥಿತರಿದ್ದರು.

ಸಾಲಿಗ್ರಾಮದ ಅನನ್ಯ ಶಾಖಾ ಉದ್ಘಾಟನ ಸಮಾರಂಭದಲ್ಲಿ ಪ್ರಬಂಧಕ ಜಯೇಶ್‌ ಕಾಮತ್‌ ಉಪಸ್ಥಿತರಿದ್ದರು. ಮೂರೂ ಶಾಖೆಗಳ ಉದ್ಘಾಟನಾ ಸಮಾರಂಭದಲ್ಲಿ ಶ್ರೇಷ್ಠ ಗ್ರಾಹಕರನ್ನು ಆಡಳಿತ ನಿರ್ದೇಶಕರು ಸಮ್ಮಾನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next