Advertisement
ರಾಜ್ಯ ತಂಡವನ್ನು ಮನೀಷ್ ಪಾಂಡೆ, ತಮಿಳುನಾಡು ತಂಡವನ್ನು ದಿನೇಶ್ ಕಾರ್ತಿಕ್ ಮುನ್ನಡೆಸಲಿದ್ದಾರೆ. ಮೊದಲ ಸಲ ಟ್ರೋಫಿ ಎತ್ತುವುದು ತಮಿಳುನಾಡು ತಂಡದ ಗುರಿ.
ಸಂಘಟಿತ ಪ್ರದರ್ಶನ ನೀಡುತ್ತಿರುವ ಕರ್ನಾಟಕ ಅನುಭವಿ, ಯುವ ಪ್ರತಿಭೆಗಳನ್ನು ಒಳಗೊಂಡಿದೆ. ಫೇವರಿಟ್ ಕೂಡ ಆಗಿದೆ. ಕೆ.ಎಲ್. ರಾಹುಲ್ ಮತ್ತು ದೇವದತ್ ಪಡಿಕ್ಕಲ್ ಭರ್ಜರಿ ಆರಂಭ ನೀಡುತ್ತಿದ್ದಾರೆ. ಇದು ತಂಡದ ಪ್ಲಸ್ ಪಾಯಿಂಟ್. ಹರ್ಯಾಣ ವಿರುದ್ಧ ಸೆಮಿಫೈನಲ್‌ನಲ್ಲಿ ಇವರಿಬ್ಬರು ಮೊದಲ ವಿಕೆಟಿಗೆ 125 ರನ್ ಜತೆಯಾಟ ನಿರ್ವಹಿಸಿದ್ದಾರೆ. ಫೈನಲ್‌ನಲ್ಲೂ ಅಮೋಘ ಆರಂಭ ನೀಡುವ ನಿರೀಕ್ಷೆ ಇದೆ. ಟೆಸ್ಟ್ ಪಂದ್ಯಗಳಲ್ಲಿ ಅಮೋಘ ಯಶಸ್ಸು ಕಂಡು ರಾಜ್ಯ ತಂಡವನ್ನು ಕೂಡಿ ಕೊಂಡಿರುವ ಮಾಯಾಂಕ್ ಅಗರ್ವಾಲ್ ಬ್ಯಾಟಿಂಗ್ ಸರದಿಗೆ ಶಕ್ತಿ ತುಂಬಿದ್ದಾರೆ. ಮನೀಷ್ ಪಾಂಡೆ, ಕರುಣ್ ನಾಯರ್, ರೋಹನ್ ಕದಮ್, ಆಲ್‌ರೌಂಡರ್ ಕೆ. ಗೌತಮ್ ಸಿಡಿದರೆ ಕರ್ನಾಟಕ ಮೇಲುಗೈ ಸಾಧಿಸುವುದರಲ್ಲಿ ಅನುಮಾನವಿಲ್ಲ.
Related Articles
Advertisement
ಅಪಾಯಕಾರಿ ತಮಿಳುನಾಡುತಮಿಳುನಾಡು ಕೂಡ ಸ್ಥಿರ ಪ್ರದರ್ಶನ ನೀಡುತ್ತ ಬಂದಿದೆ. ಆದರೆ ಸೂಪರ್ ಲೀಗ್‌ನಲ್ಲಿ ಕರ್ನಾಟಕ ವಿರುದ್ಧ 9 ವಿಕೆಟ್‌ಗಳ ಭಾರೀ ಸೋಲಿಗೆ ತುತ್ತಾಗಿತ್ತು. ಈ ಸೋಲಿಗೆ ಸೇಡು ತೀರಿಸಿಕೊಳ್ಳಲು ತಮಿಳುನಾಡು ಹಾತೊರೆಯುತ್ತಿದೆ.