Advertisement
ಕೂಟದುದ್ದಕ್ಕೂ ಲವಲವಿಕೆಯ ಪ್ರದರ್ಶನ ನೀಡಿದ ಮಾಳವಿಕಾ ಆಟ ಅನುಭವಿ ಸಿಂಧು ಮುಂದೆ ನಡೆಯಲಿಲ್ಲ. ಸಿಂಧು ಕೇವಲ 35 ನಿಮಿಷಗಳಲ್ಲಿ 21-13, 21-16 ಅಂತರದ ಗೆಲುವು ಸಾಧಿಸಿದರು. ಇದು ಸಿಂಧುಗೆ ಒಲಿದ ದ್ವಿತೀಯ “ಸಯ್ಯದ್ ಮೋದಿ ಬ್ಯಾಡ್ಮಿಂಟನ್’ ಪ್ರಶಸ್ತಿ. ಇದಕ್ಕೂ ಮೊದಲು 2017ರಲ್ಲಿ ಮೊದಲ ಸಲ ಚಾಂಪಿಯನ್ ಆಗಿದ್ದರು.
ಈ ಕೂಟದಲ್ಲಿ ಭಾರತಕ್ಕೆ ಮಿಶ್ರ ಡಬಲ್ಸ್ ಪ್ರಶಸ್ತಿ ಕೂಡ ಒಲಿಯಿತು. 7ನೇ ಶ್ರೇಯಾಂಕದ ಇಶಾನ್ ಭಟ್ನಾಗರ್-ತನಿಷಾ ಕ್ರಾಸ್ಟೊ ಸೇರಿಕೊಂಡು ಭಾರತದ ಮತ್ತೂಂದು ಜೋಡಿಯಾದ ಟಿ. ನಾಗೇಂದ್ರ ಬಾಬು-ಶ್ರೀವೇದ್ಯಾ ವಿರುದ್ಧ 21-16, 21-12 ಅಂತರದ ಗೆಲುವು ಸಾಧಿಸಿದರು. ಪುರುಷರ ಫೈನಲ್ ರದ್ದು
ಪುರುಷರ ಫೈನಲ್ ಪಂದ್ಯ ಕೊರೊನಾದಿಂದಾಗಿ ರದ್ದುಗೊಂಡಿತು. ಫೈನಲ್‌ನಲ್ಲಿ ಸೆಣಸಬೇಕಿದ್ದ ಅರ್ನಾಡ್ ಮೆರ್ಕಲ್ ಮತ್ತು ಲುಕಾಸ್ ಕ್ಲೇರ್‌ಬೂಟ್ ಫಲಿತಾಂಶ ಪಾಸಿಟಿವ್ ಬಂದಿತ್ತು.