ಸಿಡ್ನಿ: ಬಾರ್ಡರ್- ಗವಾಸ್ಕರ್ ಸರಣಿಯ ಮೂರನೇ ಪಂದ್ಯ ಭಾರತದ ಕೈ ಜಾರುತ್ತಿದೆ. ದ್ವಿತೀಯ ಇನ್ನಿಂಗ್ಸ್ ನಲ್ಲೂ ಲಬುಶೇನ್- ಸ್ಮಿತ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದು, ರಹಾನೆ ಪಡೆಗೆ ದುಬಾರಿಯಾಗಿ ಪರಿಣಮಿಸಿದ್ದಾರೆ.
ನಾಲ್ಕನೇ ದಿನದ ಭೋಜನ ವಿರಾಮದ ವೇಳೆಗೆ ಆಸೀಸ್ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಶತಕ ವಂಚಿತನಾಗಿದ್ದ ಮಾರ್ನಸ್ ಲಬುಶೇನ್ ಇಲ್ಲೂ ಉತ್ತಮವಾಗಿ ಆಡಿ 73 ರನ್ ಗಳಿಸಿದರು. ಮ್ಯಾಥ್ಯೂ ವೇಡ್ ವೈಫಲ್ಯ ಮುಂದುವರಿಯಿತು.
ಮೊದಲ ಇನ್ನಿಂಗ್ಸ್ ಶತಕವೀರ ಸ್ಟೀವ್ ಸ್ಮಿತ್ ಅಜೇಯ ಅರ್ಧಶತಕ ಬಾರಿಸಿ ಆಡುತ್ತಿದ್ದಾರೆ. ಕ್ಯಾಮರೂನ್ ಗ್ರೀನ್ 20 ರನ್ ಗಳಿಸಿ ಆಡುತ್ತಿದ್ದಾರೆ.
ಇದನ್ನೂ ಓದಿ:ದೇಶೀಯ ಕ್ರಿಕೆಟ್ ಹೋರಾಟಕ್ಕೆ ಯುವ ಕ್ರಿಕೆಟಿಗರು ಸಜ್ಜು
ಭಾರತದ ಪರ ಸೈನಿ ಎರಡು ವಿಕೆಟ್ ಪಡೆದಿದ್ದು, ಸಿರಾಜ್ ಮತ್ತು ಅಶ್ವಿನ್ ತಲಾ ಒಂದು ವಿಕೆಟ್ ಪಡೆದರು. ಆಸೀಸ್ 276 ರನ್ ಮುನ್ನಡೆ ಹೊಂದಿದೆ.