Advertisement

ಸಿಡಿದ ಪಂತ್- ಆಧರಿಸಿದ ಪೂಜಾರ: ಸಿಡ್ನಿಯಲ್ಲಿ ವಿಜಯಮಾಲೆ ಯಾರಿಗೆ?

07:52 AM Jan 11, 2021 | Team Udayavani |

ಸಿಡ್ನಿ: ಬಾರ್ಡರ್- ಗವಾಸ್ಕರ್ ಟ್ರೋಫಿಯ ಮೂರನೇ ಪಂದ್ಯ ರೋಚಕತೆಯತ್ತ ಸಾಗುತ್ತಿದೆ. ಆಸೀಸ್ ನೀಡಿರುವ ಬೃಹತ್ ಮೊತ್ತ ಬೆನ್ನಟ್ಟುತ್ತಿರುವ ಟೀಂ ಇಂಡಿಯಾಗೆ ರಿಷಭ್ ಪಂತ್ ಮತ್ತು ಚೇತೇಶ್ವರ ಪೂಜಾರ ಆಧರಿಸಿದ್ದಾರೆ.

Advertisement

ಆಸೀಸ್ ನೀಡಿದ 407 ರನ್ ಗುರಿ ಬೆನ್ನಟ್ಟಿದ ಭಾರತ ನಾಲ್ಕನೇ ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿತ್ತು. ಐದನೇ ದಿನದಾಟದ ಆರಂಭದಲ್ಲಿ ನಾಯಕ ರಹಾನೆ (4 ರನ್) ಬೇಗನೇ ವಿಕೆಟ್ ಒಪ್ಪಿಸಿದರು.

ಬ್ಯಾಟಿಂಗ್ ಕ್ರಮಾಂಕದಲ್ಲಿ ಭಡ್ತಿ ಪಡೆದು ಬಂದ ರಿಷಭ್ ಪಂತ್ ಏಕದಿನ ಶೈಲಿಯಲ್ಲಿ ಬ್ಯಾಟ್ ಬೀಸಿದರು. ಭೋಜನ ವಿರಾಮದ ಸಮಯದಲ್ಲಿ ಟೀಂ ಇಂಡಿಯಾ ಮೂರು ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿದೆ. ಪಂತ್ 73 ರನ್ ಮತ್ತು ಪೂಜಾರ 41 ರನ್ ಗಳಿಸಿ ಆಡುತ್ತಿದ್ದಾರೆ.

ಭಾರತಕ್ಕೆ ಗೆಲ್ಲಲು ಇನ್ನೂ 201 ರನ್ ಅಗತ್ಯವಿದೆ. 62 ಓವರ್ ಬಾಕಿಯಿದೆ. ಹೀಗಾಗಿ ಪಂದ್ಯದ ರೋಚಕತೆ ಹೆಚ್ಚಾಗಿದೆ. ವಿಜಯಲಕ್ಷ್ಮಿ ಯಾವ ತಂಡಕ್ಕೆ ಒಲಿಯಲಿದೆ ಎಂಬ ಕಾತರತೆ ಅಭಿಮಾನಿಗಳಿಗೆ ಹೆಚ್ಚಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next