Advertisement

ಲೈಂಗಿಕ ದೌರ್ಜನ್ಯ: ಸಾಕ್ಷ್ಯ ಸಂಗ್ರಹಕ್ಕೆ ಇನ್ಮುಂದೆ ಸುರಕ್ಷಿತ ಕಿಟ್‌ ಬಳಕೆ

11:13 AM May 17, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರ ವೈದ್ಯಕೀಯ ಪರೀಕ್ಷೆ ಹಾಗೂ ವಿಧಿವಿಜ್ಞಾನದ ಸಾಕ್ಷ್ಯಗಳನ್ನು ಸಂಗ್ರಹಿಸಲು ಕ್ರಮಬದ್ಧ ವ್ಯವಸ್ಥೆಯನ್ನು ಜಾರಿಗೊಳಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಅದರ ಭಾಗವಾಗಿ ಸರಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆಗಳಲ್ಲಿ  “ಸೇಫ್ ಕಿಟ್‌’ಗಳನ್ನು ಪರಿಚಯಿಸುತ್ತಿದೆ.

Advertisement

ರಾಜ್ಯದಲ್ಲಿ ಬಹಳ ಹಿಂದಿನಿಂದಲೂ ಎಲ್ಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂತ್ರಸ್ತರಿಗೆ ಸೂಕ್ತ ಚಿಕಿತ್ಸೆ ನೀಡಿ, ವೈದ್ಯಕೀಯ ಪರೀಕ್ಷೆ ನಡೆಸಿ ಡಿಎನ್‌ಎ ಸಂಬಂಧಿತ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತಿತ್ತು. ಆದರೆ ಇದು ಕ್ರಮ ಬದ್ಧವಾಗಿರಲಿಲ್ಲ. ಇದರಿಂದ ಸಂಗ್ರಹಿಸಲಾದ ವಿಧಿವಿಜ್ಞಾನ ಪುರಾವೆಗಳನ್ನು ಕಾಪಾಡಿಕೊಳ್ಳಲು ಹಿನ್ನಡೆಯಾಗುತ್ತಿತ್ತು.

ಇತ್ತೀಚೆಗೆ ಆರೋಗ್ಯ ಇಲಾಖೆ ನಡೆಸಿದ ನಿರ್ಧರಣ ಸಭೆಯಲ್ಲಿ ಸೇಫ್ ಕಿಟ್‌ ಅಗತ್ಯ ಇರುವ ಬಗ್ಗೆ ಚರ್ಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಕ್ರಮಬದ್ಧವಾಗಿ ವಿಧಿವಿಜ್ಞಾನ ಸಾಕ್ಷ್ಯವನ್ನು  ಸಂರಕ್ಷಿಸಲು “ಸೇಫ್ ಕಿಟ್‌’ಗಳನ್ನು ಬಳಸಲು ಆರೋಗ್ಯ ಇಲಾಖೆ ಮುಂದಾಗಿದೆ. ಆಸ್ಪತ್ರೆಗಳು ಆರೋಗ್ಯ ರಕ್ಷಾ ಸಮಿತಿ ನಿಧಿಯನ್ನು ಬಳಸಿಕೊಂಡು ತಮ್ಮ ಹಂತದಲ್ಲಿಯೇ ಕೆಟಿಪಿಪಿ ಕಾಯ್ದೆ ಅನ್ವಯ ಸೇಫ್ ಕಿಟ್‌ ಖರೀದಿಸಲು ಅವಕಾಶ ಕಲ್ಪಿಸಿದೆ. ಜಿಲ್ಲಾಸ್ಪತ್ರೆಗೆ 1 ಲಕ್ಷ ರೂ., ತಾಲೂಕು ಆಸ್ಪತ್ರೆ 50,000 ರೂ., ಸಮುದಾಯ ಆರೋಗ್ಯ ಕೇಂದ್ರಕ್ಕೆ 10,000 ರೂ. ಮೊತ್ತದ ಸೇಫ್ ಕಿಟ್‌ ಖರೀದಿಸಲು ಅನುಮತಿ ನೀಡಿದೆ.

ಕಿಟ್‌ನಲ್ಲಿ ಏನಿದೆ? :

ಸೇಫ್ ಕಿಟ್‌ನಲ್ಲಿ ಕೈ ಗ್ಲೌಸ್‌, ಫೇಸ್‌ ಮಾಸ್ಕ್, ಗೌನ್‌, ಶೂ ಕವರ್‌, ಜೈವಿಕ ತ್ಯಾಜ್ಯ ವಿಲೇವಾರಿ ಬ್ಯಾಗ್‌, ಸ್ಟೆರೈಲ್‌ಗಾಜ್‌, ಫಿಲ್ಟರ್‌ ಪೇಪರ್‌, ಫೋರೆನ್ಸಿಕ್‌ ಮ್ಯಾಗ್ನಿ ಫೈಯರ್‌ ಲೆನ್ಸ್‌ ಸಹಿತ 27 ಅಗತ್ಯ ವಸ್ತುಗಳು ಇರಲಿವೆ. ಮುಂದಿನ ತಿಂಗಳೊಳಗೆ ಎಲ್ಲ ಆಸ್ಪತ್ರೆಗಳಿಗೆ ಬರುವ ಸಂತ್ರಸ್ತರನ್ನು ಸೇಫ್ಕಿಟ್‌ ಮೂಲಕ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದ ತರಬೇತಿ ಸಹ ಇಲಾಖೆಯಿಂದ ನೀಡಲಾಗುತ್ತಿದೆ.

Advertisement

ಒಂದೇ ಜಿಲ್ಲೆಯಲ್ಲಿ 241 ಪೋಕ್ಸೋ ಕೇಸ್‌

ರಾಜ್ಯದಲ್ಲಿ 2022-23 ಮತ್ತು 2023-24ನೇ ಸಾಲಿನಲ್ಲಿ ವಿವಿಧ ಜಿಲ್ಲೆಗಳಲ್ಲಿ ಕೇವಲ ಪೋಕೊÕà ಕಾಯ್ದೆಯಡಿಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿರುವ ಅಂಕಿಅಂಶವನ್ನು ಪರಿಗಣಿಸಿದಾಗ ಜಿಲ್ಲೆಯೊಂದರಲ್ಲಿ ಗರಿಷ್ಠ 241 ಪೋಕ್ಸೋ ಪ್ರಕರಣಗಳು ವರದಿಯಾಗಿದೆ.

ಏನಿದು ಸೇಫ್ ಕಿಟ್‌? : 

ಲೈಂಗಿಕ ದೌರ್ಜನ್ಯ ಪ್ರಕರಣ ವರದಿ ಸಮಯದಲ್ಲಿ ಸಮೀಪದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರಿಗೆ ತುರ್ತು ಚಿಕಿತ್ಸೆ ಹಾಗೂ ಪ್ರಕರಣ (ಡಿಎನ್‌ಎ) ಭೌತಿಕ ಸಾಕ್ಷ್ಯಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡಲು ಹಾಗೂ ಹೆಚ್ಚುವರಿ ಪರೀಕ್ಷೆ ಬೇರೆಡೆಗೆ ರವಾನಿಸಲು ಸೇಫ್ಕಿಟ್‌ ಸಹಕಾರಿಯಾಗಿದೆ.

ಲೈಂಗಿಕ ದೌರ್ಜನ್ಯ ಒಳಗಾದವರಿಗೆ ವೈದ್ಯಕೀಯ ಪರೀಕ್ಷೆಯನ್ನು ಕ್ರಮಬದ್ಧವಾಗಿ ನಡೆಸಲು ಅನುಕೂಲವಾಗುವಂತೆ ಸೇಫ್ಕಿಟ್‌ ಬಳಕೆಗೆ ಆದೇಶಿಸಲಾಗಿದೆ. ಖರೀದಿಗೆ ಅಗತ್ಯವಿರುವ ಅನುದಾನ ಆರೋಗ್ಯ ರಕ್ಷಾ ಸಮಿತಿ ನಿಧಿಯನ್ನು ಬಳಕೆ ಮಾಡಲು ಸೂಚಿಸಲಾಗಿದೆ.ಡಾ| ರಣದೀಪ್‌, ಆಯುಕ್ತ,  ಆರೋಗ್ಯ ಇಲಾಖೆ

ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next