Advertisement
ಕರೆಂಟ್‌ನ ಅಭಾವಸದ್ಯ ಸ್ವಿಜರ್ಲೆಂಡ್‌ನಲ್ಲಿ ಕರೆಂಟ್‌ನ ಅಭಾವವಿದೆ. ಅಲ್ಲದೆ ತನಗೆ ಬೇಕಾದ ವಿದ್ಯುತ್‌ನ ಶೇ.60ರಷ್ಟು ಹೈಡ್ರೋಪವರ್‌ನ ಕಡೆಯಿಂದಲೇ ಬರಲಿದೆ. ಹೀಗಾಗಿ ಚಳಿಗಾಲದಲ್ಲಿ ವಿದ್ಯುತ್ ಉತ್ಪಾದನೆ ಕಡಿಮೆಯಾಗಲಿದೆ. ಆಗ ನೆರೆಯ ಫ್ರಾನ್ಸ್ ಮತ್ತು ಜರ್ಮನಿಯಿಂದ ಕರೆಂಟ್ ಆಮದು ಮಾಡಿಕೊಳ್ಳಬೇಕು. ಉಕ್ರೇನ್ ಯುದ್ಧದಿಂದಾಗಿ ಈ ಎರಡೂ ದೇಶಗಳೂ ಪವರ್ ಕ್ರೈಸಿಸ್‌ನಲ್ಲಿವೆ.
ವಿದ್ಯುತ್ ಕೊರತೆ ನೀಗಿಸಲು ಶಾಪ್‌ಗಳಿಗೆ 2 ಗಂಟೆ ಮುಂಚಿತವಾಗಿಯೇ ಬೀಗ ಹಾಕುವಂತೆ ಸೂಚನೆ ನೀಡಬೇಕು ಎಂದು ಅಲ್ಲಿನ ಸರಕಾರದ ಕರಡು ಹೇಳಿದೆ. ಇವಿಗಳ ಮೇಲೇಕೆ ಕಣ್ಣು?
ಚಳಿಗಾಲದಲ್ಲಿ ವಿದ್ಯುತ್ ಉತ್ಪಾದನೆಯಷ್ಟೇ ಕಡಿಮೆಯಾಗುವುದಿಲ್ಲ. ಬದಲಿಗೆ ಕಡಿಮೆ ಉಷ್ಣಾಂಶದ ಕಾರಣದಿಂದಾಗಿ ವಿದ್ಯುತ್ ಬೇಡಿಕೆಯೂ ಹೆಚ್ಚುತ್ತದೆ. ಹೀಗಾಗಿ ಅಲ್ಲಿನ ಸರಕಾರ ಒಂದು ಕರಡನ್ನು ರೂಪಿಸಿದ್ದು, ಹೆಚ್ಚು ವಿದ್ಯುತ್ ಬೇಡುವಂಥವುಗಳನ್ನು ನಿಷೇಧಿಸಬೇಕು ಎಂಬ ಶಿಫಾರಸು ಮಾಡಿದೆ. ಇದರಂತೆ ಸಂಗೀತ ಕಾರ್ಯಕ್ರಮಗಳು, ನಾಟಕಗಳು, ಕ್ರೀಡಾ ಸಮಾರಂಭಗಳು, ಕಟ್ಟಡಗಳಲ್ಲಿನ ವಿದ್ಯುತ್ ಬಳಕೆಗೆ ಕಡಿವಾಣ ಹಾಕುವ ಬಗ್ಗೆ ಶಿಫಾರಸು ನೀಡಲಾಗಿದೆ. ಒಂದು ವೇಳೆ ಪರಿಸ್ಥಿತಿ ಇನ್ನೂ ಹದಗೆಟ್ಟರೆ ಎಲೆಕ್ಟ್ರಾನಿಕ್ ವಾಹನಗಳ ಬಳಕೆಗೆ ಕಡಿವಾಣ ಹಾಕಲು ಚಿಂತಿಸಲಾಗಿದೆ.