ಮಣಿಪಾಲ: ಸ್ವಿಟ್ಜರ್ಲೆಂಡ್‌ನಲ್ಲಿ ಈಗ ಕೋವಿಡ್ -19 ಪರೀಕ್ಷೆಯನ್ನು ಸರಳಗೊಳಿಸಲಾಗಿದೆ. ಫೆಡರಲ್ ಆಫೀಸ್ ಆಫ್ ಪಬ್ಲಿಕ್ ಹೆಲ್ತ್ (FOPH) ಪರೀಕ್ಷೆಯನ್ನು ಪಡೆಯಲು ಇರುವ ಮಾನದಂಡಗಳನ್ನು ವಿಸ್ತರಿಸಿದೆ. ಈಗ ಉಸಿರಾಟದ ತೊಂದರೆ ಅನುಭವಿಸುತ್ತಿರುವ ಎಲ್ಲರೂ ಕಡ್ಡಾಯವಾಗಿ ಪರೀಕ್ಷೆಗೆ ಒಳಗಾಗಲೇಬೇಕಿದೆ.
ಉಸಿರಾಟದ ಸಮಸ್ಯೆ ಇದ್ದವರಲ್ಲಿ ಜ್ವರ ಇದ್ದರೂ ಇಲ್ಲದೇ ಇದ್ದರೂ ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳಲೇಬೇಕು ಎಂದು ಆದೇಶಿ ಸಲಾಗಿದೆ. ಜತೆಗೆ ರುಚಿ ಮತ್ತು ವಾಸನೆಯ ಪ್ರಜ್ಞೆಯನ್ನು ಕಳೆದುಕೊಂಡಿರುವವರೂ ಅಥವಾ ಸ್ನಾಯುಗಳಲ್ಲಿ ನೋವು ಇರುವವರೂ ಪರೀಕ್ಷೆಗೆ ಒಳಗಾಗಬೇಕು. ಈ ಹಿಂದೆ ಪರೀಕ್ಷಿಸಲು ಬಯಸಿ ದವರಲ್ಲಿ ರೋಗಲಕ್ಷಣ ಪತ್ತೆಯಾದರೆ ಮಾತ್ರ ಪರೀಕ್ಷೆ ನಡೆಸಲಾಗುತ್ತಿತ್ತು. ಆ ನಿಯಮದಲ್ಲಿ ಈಗ ಬದಲಾವಣೆ ಮಾಡಲಾಗಿದೆ.
ಇತ್ತೀಚಿನ ವಾರಗಳಲ್ಲಿ ಸ್ವಿಟ್ಜರ್ಲೆಂಡ್ ತನ್ನ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ. ಇದರಿಂದಾಗಿ ಹೆಚ್ಚಿನ ಜನರು ಸೀಮಿತ ಅವಧಿಯೊಳಗೆ ತಮ್ಮಲ್ಲಿ ಕೋವಿಡ್ -19 ಸೋಕು ಇದೆಯೇ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತಿದೆ. ಜಗತ್ತಿನಲ್ಲೇ ಜರ್ಮನಿ ಅತೀ ಹೆಚ್ಚು ಶಂಕಿತರನ್ನು ಪರೀಕ್ಷೆಗೆ ಒಳಪಡಿಸಿತ್ತು. ಜರ್ಮನಿಯ “ಡ್ರೈವ್ ಥ್ರೂ ಸೆಂಟರ್’ಗಳು ಹೆಚ್ಚು ಮನ್ನಣೆಯನ್ನುಗಳಿಸಿದ್ದವು. ಆಸ್ಟ್ರಿಯಾದಲ್ಲೂ ಬಹಳ ದೊಡ್ಡ ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇದೀಗ ಸ್ವಿಟ್ಜರ್ಲೆಂಡ್ ಅ ದೇಶಗಳ ಸಾಲಿಗೆ ಸೇರುವತ್ತ ದೃಢ ಹೆಜ್ಜೆಯನ್ನು ಇಡುತ್ತಿದೆ.ಆದರೆ ಇಲ್ಲಿ ಸ್ವಿಟ್ಜರ್ಲೆಂಡಿನ ಪರೀಕ್ಷಾ ಕ್ರಮಕ್ಕೂ ಮತ್ತು ಜರ್ಮನಿ, ಆಸ್ಟ್ರಿಯಾದ ಕ್ರಮಗಳಿಗೂ ಕೆಲವು ವ್ಯತ್ಯಾಸಗಳಿವೆ. ಸ್ವಿಟ್ಜರ್ಲೆಂಡ್‌ನಲ್ಲಿ ಕೋವಿಡ್ -19 ತಗುಲಿರಬಹುದಾದ ಸಮುದಾಯದಲ್ಲಿ ಮತ್ತು ಅವರ ಪ್ರಯಾಣದ ಇತಿಹಾಸವನ್ನು ತೆಗೆದು ಪರೀಕ್ಷಿಸುತ್ತಿದ್ದರೆ, ಉಳಿದೆರಡು ರಾಷ್ಟ್ರಗಳು ಅಪಾಯದ ವರ್ಗದಲ್ಲಿ ಬರದವರನ್ನೂ ಪರೀಕ್ಷಿಸುತ್ತಿವೆ. ಯಾರಿಗಾದರೂ ಕೋವಿಡ್ -19 ಲಕ್ಷಣ ಕಾಣಿಸಿಕೊಂಡು ನೀವು ಪರೀಕ್ಷೆಯನ್ನು ಎದುರು ನೋಡುತ್ತಿದ್ದರೆ, ಇತರ ಆಸ್ಪತ್ರೆಗಳಿಗೆ ಹೋಗದಂತೆ ಎಚ್ಚರಿಸಲಾಗಿದೆ. ಒಂದುವೇಳೆ ಕೋವಿಡ್ -19 ಸೋಂಕನ್ನು ಪರೀಕ್ಷೆ ಮಾಡಬೇಕಿದ್ದರೆ ನಿಗದಿ ಪಡಿಸಿದ ಕೇಂದ್ರಕ್ಕೆ ಹೋಗಬೇಕು ಎಂದು ಸೂಚಿಸಲಾಗಿದೆ.
ಸ್ವಿಟ್ವೆರ್ಲೆಂಡಿನಲ್ಲೂ “ಡ್ರೈವ್ ಥ್ರೂ ಸೆಂಟರ್’ಗಳನ್ನು ಪರಿಚಯಿಸಲಾಗಿದೆ. ಒಟ್ಟಿನಲ್ಲಿ ಸೋಂಕು ಹರಡುವುದನ್ನು ತಡೆಗಟ್ಟಬೇಕೆಂದು ಪಣ ತೊಟಿರುವ ಸ್ಥಳೀಯ ಸರಕಾರ ಹಲವು ಕ್ರಮಗಳನ್ನು ಜರುಗಿಸುತ್ತಿದೆ.