Advertisement

ಸ್ವಿಸ್‌ ದಂಪತಿ ಮೇಲೆ ಹಲ್ಲೆ

06:00 AM Oct 27, 2017 | Harsha Rao |

ಹೊಸದಿಲ್ಲಿ / ಲಕ್ನೋ: ಭಾರತ ಪ್ರವಾಸ ಬಂದಿರುವ ಸ್ವಿಜರ್ಲೆಂಡ್‌ ದಂಪತಿ ಮೇಲೆ ಆಗ್ರಾದ ಫ‌ತೇಪುರ್‌ ಸಿಕ್ರಿಯಲ್ಲಿ ಗುಂಪೊಂದು ದಾಳಿ ನಡೆಸಿದೆ. ಘಟನೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. ದಾಳಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು, ಕೇಂದ್ರ ಮತ್ತು ಉ.ಪ್ರ ಸರಕಾರ ಘಟನೆಯನ್ನು ಖಂಡಿಸಿವೆ. 

Advertisement

ಸ್ವಿಜರ್ಲೆಂಡ್‌ನ‌ ಕ್ವಿಂಟಿನ್‌ ಜೆರೆಮಿ ಕ್ಲೆರ್ಕ್‌ ಹಾಗೂ ಅವರ ಪತ್ನಿ ಮಾರಿ ಡ್ರಾಕ್ಸ್‌  ದಿಲ್ಲಿಯ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕ್ಲೆರ್ಕ್‌ಗೆ ಮಿದುಳಿನಲ್ಲಿ ರಕ್ತ ಕಟ್ಟಿಕೊಂಡಿದೆ ಮತ್ತು ಶ್ರವಣ ಸಮಸ್ಯೆಯೂ ಉಂಟಾಗಿದೆ. ಗುಂಪು ಕಲ್ಲು ಮತ್ತು ಕೋಲುಗಳಿಂದ ದಾಳಿ ನಡೆಸಿದೆ. ಈ ದಾಳಿಯ ವೀಡಿಯೋವನ್ನು ಸಾರ್ವಜನಿಕರು ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಉ.ಪ್ರ.ಸರಕಾರದಿಂದ ವರದಿ ಕೇಳಿದ್ದಾರೆ.  

ಸೆ. 30ರಂದು ಸ್ವಿಜರ್ಲೆಂಡ್‌ನಿಂದ ಇಬ್ಬರೂ ಆಗ್ರಾಗೆ ಆಗಮಿಸಿದ್ದರು. ತಾಜ್‌ಮಹಲ್‌ ವೀಕ್ಷಿಸಿದ ನಂತರ ಅವರು ಫ‌ತೇಪುರ್‌ಸಿಕ್ರಿ ವೀಕ್ಷಣೆಗೆ ರವಿವಾರ ಆಗಮಿಸಿದ್ದರು. ಈ ವೇಳೆ ದಾಳಿ ನಡೆದಿದೆ.ಪ್ರಕರಣಕ್ಕೆ ಸಂಬಂಧಿಸಿ ದಂತೆ ಇಬ್ಬರನ್ನು ಬಂಧಿಸಲಾಗಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥಗೆ ಕೇಂದ್ರ ಸಚಿವರಾದ ಕೆ.ಜೆ.ಆಲೊ#àನ್ಸ್‌ ಮತ್ತು ಮಹೇಶ್‌ ಶರ್ಮಾ ಪತ್ರ ಬರೆದಿದ್ದಾರೆ. 

ನಡೆದಿದ್ದೇನು?
ಯುವಕ ಸುಮಾರು ಒಂದು ತಾಸಿನವರೆಗೆ ಅವರನ್ನು ಬೆನ್ನತ್ತಿದ್ದ. ದಂಪತಿಯ ಜತೆ ಮಾತನಾಡಲು ಪ್ರಯತ್ನ ನಡೆಸಿದ್ದ. ಅನಂತರ ಇನ್ನಷ್ಟು ಜನರು ಸೇರಿಕೊಂಡು ದಾರಿಗೆ ಅಡ್ಡಗಟ್ಟಿದರು. ಬಲವಂತವಾಗಿ ಸೆಲ್ಫಿà ತೆಗೆದುಕೊಂಡು, ಕೋಲಿನಿಂದ ಥಳಿಸಿದರು ಎಂದು ಕ್ಲೆರ್ಕ್‌ ಹೇಳಿದ್ದಾರೆ. ಡ್ರಾಕ್ಸ್‌ ಮೇಲೂ ದಾಳಿ ನಡೆದಿದ್ದು, ಆಕೆಯ ಕೈ ಮೂಳೆ ಮುರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next