Advertisement

ಪ್ರಾಣದ ಜತೆ ಚೆಲ್ಲಾಟ…ತುಂಬಿ ಹರಿಯೋ ಕೃಷ್ಣಾ ನದಿಯಲ್ಲಿ ಈಜು ಸ್ಪರ್ಧೆ!

09:36 AM Aug 07, 2019 | Nagendra Trasi |

ರಾಯಚೂರು: ತಾಲೂಕಿನ ಲಿಂಗಸೂಗೂರಿನಲ್ಲಿ ತುಂಬಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ಜೀವದ ಹಂಗು ತೊರೆದು ಈಜು ಸ್ಪರ್ಧೆಯಲ್ಲಿ ಭಾಗವಹಿಸಿರುವ ಘಟನೆ ಮಂಗಳವಾರ ನಡೆದಿದ್ದು, ಸ್ಪರ್ಧೆಯಲ್ಲಿ ಯಾದಗಿರಿ ಹಾಗೂ  ರಾಯಚೂರು ಜಿಲ್ಲೆಯ ಕೃಷ್ಣ ನದಿ ಬಲ ಮತ್ತು ಎಡದಂಡೆಯ ಗ್ರಾಮಸ್ಥರು ಪಾಲ್ಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.

Advertisement

ಲಿಂಗಸೂಗೂರು ತಾಲೂಕಿನ ಗದ್ದಗಿ ಗ್ರಾಮದ ಗಂಗಮ್ಮನ ಕಟ್ಟಿಯಿಂದ ಸಾಯಿ ಬಾಬಾ ಮಂದಿರದವರೆಗೆ‌ ಈಜು ಸ್ಪರ್ಧೆ ಆಯೋಜಿಸಲಾಗಿದೆ.

8-10 ಯುವಕರು ಏಕಕಾಲದಲ್ಲಿ ಈಜು ಸ್ಪರ್ಧೆಯಲ್ಲಿ ಭಾಗಿಯಾಗಿದ್ದು, ಸ್ಪರ್ಧೆಯಲ್ಲಿ ಜಯ ಸಾಧಿಸಿದವರಿಗೆ ಕೇವಲ 5ರಿಂದ ಹತ್ತು ಸಾವಿರ ರೂ. ನಗದು ಹಾಗೂ ಕುರಿಮರಿ ಕೊಡುವುದಾಗಿ ಘೋಷಿಸಲಾಗಿದೆಯಂತೆ!

ಸ್ಪರ್ಧೆಯಲ್ಲಿ ಯಾದಗಿರಿ ಹಾಗೂ  ರಾಯಚೂರು ಜಿಲ್ಲೆಯ ಕೃಷ್ಣ ನದಿ ಬಲ ಮತ್ತು ಎಡದಂಡೆಯ ಗ್ರಾಮಸ್ಥರು ಭಾಗಿ. ತುಂಬಿ ಹರಿಯುವ ನದಿಯಲ್ಲಿ ಮೂರು ಕಿಲೋ ಮೀಟರ್ ಈಜು ಸ್ಪರ್ಧೆ ನಡೆಯುತ್ತಿದೆ. ಪ್ರವಾಹದ ನಡುವೆ ಈಜಿ ಗುರಿ ತಲುಪಲು ಸ್ಪರ್ಧಿಗಳು ಹರಸಾಹಸ ಪಡುತ್ತಿದ್ದು, ಈಜಾಟ ನೋಡಲು ತಿಂಥಣಿ ಸೇತುವೆ ಮೇಲೆ ಜನಸಾಗರ ನೆರೆದಿದೆ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next