Advertisement

ಪ್ರವಾಹದ ವಿರುದ್ಧ ಮತ್ತೆ ಈಜುವ ಅನಿವಾರ್ಯ…!

03:53 PM Sep 06, 2019 | Team Udayavani |

ಯಾದಗಿರಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಆಲಮಟ್ಟಿ ಜಲಾಶಯದಿಂದ ಬಸವಸಾಗರ ಜಲಾಶಯದಲ್ಲಿ ಸಂಗ್ರಹಗೊಂಡ ನೀರು ಕೃಷ್ಣಾ ನದಿ ಪಾತ್ರಕ್ಕೆ ಹರಿಬಿಡಲಾಗುತ್ತಿರುವ ಕಾರಣ ಕಕ್ಕೇರಾ ಸಮೀಪದ ನೀಲಕಂಠರಾಯನಗಡ್ಡಿಯ  ಎಂಟು ಜನ ಗ್ರಾಮಸ್ಥರು ಕಕ್ಕೇರಾ ಪಟ್ಟಣಕ್ಕೆ ಅಗತ್ಯ ವಸ್ತುಗಳನ್ನು ಖರೀದಿಸಿಕೊಂಡು ಪ್ರವಾಹದ ವಿರುದ್ಧ ಈಜಿಕೊಂಡು ಬಂದು ತೆರಳಿದ್ದ ಘಟನೆ ನಡೆದಿದೆ.

Advertisement

ಅತಿಯಾದ ಮಳೆಯ ಪರಿಣಾಮ ನೀಲಕಂಠರಾಯನಗಡ್ಡಿಯ ಗ್ರಾಮಸ್ಥರಾದ ಲಕ್ಷ್ಮಣ, ಕನಕಪ್ಪ, ಹಣಮಂತ,ದೊಡ್ಡ ಹಣಮಂತ, ರಾಮಣ್ಣ,ಯಂಕಪ್ಪ, ಸೋಮಣ್ಣ, ನೀಲಪ್ಪ ಪ್ರವಾಹದ ವಿರುದ್ಧ ಈಜಿಕೊಂಡು ಅಗತ್ಯ ವಸ್ತುಗಳನ್ನು ತರಲು ಹೋಗಿದ್ದಾರೆ.

ಜಿಲ್ಲೆಯ ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 1.85 ಲಕ್ಷ ಕ್ಯುಸೆಕ್ ಹರಿಸುತ್ತಿದ್ದು, ನೀಲಕಂಠರಾಯನಗಡ್ಡಿ ನಡುಗಡ್ಡೆಯಾಗಿದೆ.ಇದರಿಂದ ಹೊರ ಸಂಪರ್ಕ ಕಡಿದುಕೊಂಡಿರುವ ಗ್ರಾಮಸ್ಥರು ಅಗತ್ಯ ವಸ್ತುಗಳನ್ನು ಖರೀದಿಸಲು ಈಜಿಕೊಂಡು ಬಂದಿದ್ದಾರೆ. ಹಿಂದೆ ಆಗಸ್ಟ್ ನಲ್ಲಿ ಕೃಷ್ಣಾ ನದಿಗೆ 6 ಲಕ್ಷಕ್ಕೂ ಹೆಚ್ಚು ಕ್ಯುಸೆಕ್ ನೀರು ಬಿಟ್ಟಿದ್ದರಿಂದ ಹೈಡ್ರೊ ಪವರ್ ಸೇತುವೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿತ್ತು. ಈಗ ಜನ ಮಳೆಯಿಂದ ಮತ್ತೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next