Advertisement

Robbery: ಸ್ವಿಗ್ಗಿ ಡೆಲಿವರಿ ಬಾಯ್‌ ದರೋಡೆ: ಊಟ, ನಗದು, ಮೊಬೈಲ್‌ ಕಳವು 

11:29 AM Aug 16, 2023 | Team Udayavani |

ಬೆಂಗಳೂರು: ಸ್ವಿಗ್ಗಿ ಡೆಲಿವರಿ ಬಾಯ್‌ ಅಡ್ಡಗಟ್ಟಿದ ಮೂವರು ದುಷ್ಕರ್ಮಿಗಳು ಹಣ, ಊಟದ ಬಾಕ್ಸ್‌, ಮೊಬೈಲ್‌ ದರೋಡೆ ಮಾಡಿ ಪರಾರಿಯಾಗಿರುವ ಘಟನೆ ಪುಲಕೇಶಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಸೋಮವಾರ ಮಧ್ಯಾಹ್ನ 2 ಗಂಟೆಗೆ ಸ್ವಿಗ್ಗಿ ಡೆಲಿವರಿ ಬಾಯ್‌ ಆರ್ಡರ್‌ ಮಾಡಿದ್ದ ಊಟ ಕೊಟ್ಟು, ವಾಪಸ್‌ ವಿವೇಕಾನಂದ ನಗರದ ಬಳಿ ಹೋಗುತ್ತಿದ್ದ. ಆಗ ಡಿಯೋ ಬೈಕ್‌ನಲ್ಲಿ ಬಂದ ಮೂವರು ಆತನನ್ನು ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ, ಊಟದ ಬಾಕ್ಸ್‌, 1 ಸಾವಿರ ರೂ. ನಗದು, ಮೊಬೈಲ್‌ ಕಸಿದುಕೊಂಡು ಪರಾರಿಯಾಗಿದ್ದಾರೆ.

ಅದನ್ನು ಗಮನಿಸಿದ ಸಾರ್ವಜನಿಕರೊಬ್ಬರು ಘಟನೆಯನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಹೀಗಾಗಿ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿ, ಡೆಲಿವರಿ ಬಾಯ್‌ ಅನ್ನು ಸಂಪರ್ಕಿಸಿ, ದೂರು ನೀಡುವಂತೆ ಕೇಳಲಾಗಿತ್ತು. ಆದರೆ, ಆತ ದೂರು ನೀಡಿಲ್ಲ. ಆದರೂ, ಸಾರ್ವಜನಿಕವಾಗಿ ಸುಲಿಗೆ ಮಾಡಿರುವ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next